ಸರೀಸೃಪ
From Wikipedia, the free encyclopedia
ಸರೀಸೃಪ ಅಥವಾ ಉರಗಗಳು ಪ್ರಾಣಿ ಪ್ರಪಂಚದಲ್ಲಿ ದ್ವಿಚರಿಗಳು ಮತ್ತು ಹಕ್ಕಿಗಳಿಗೂ, ಸಸ್ತನಿಗಳಿಗೂ ನಡುವಿನ ಶೀತರಕ್ತದ ಕಶೇರುಕಗಳು. ಇದು ಬೆನ್ನೆಲುಬುಳ್ಳ ಜೀವಿಗಳ ಐದು ಮುಖ್ಯ ವರ್ಗಗಳಲ್ಲೊಂದು.
ಸರೀಸೃಪಗಳು Temporal range: Pennsylvanian–Present, 312–0 Ma PreꞒ
Ꞓ
O
S
D
C
P
T
J
K
Pg
N
| |
---|---|
imagemap_invalid_title | |
ಮೇಲಿನಿಂದ ಕೆಳಕ್ಕಿನ ಕ್ರಮದಲ್ಲಿ, ಸಾರಿಯನ್ ಏಕಮೂಲ ವರ್ಗದ ಅನುಸಾರ ಪಟ್ಟಿಮಾಡಲಾದ ಸರೀಸೃಪಗಳು: ಆರು ಲೆಪಿಡೊಸಾರ್ಗಳು ಮತ್ತು ಆರು ಆರ್ಕೆಲೊಸಾರ್ಗಳು. | |
Scientific classification | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಕಾರ್ಡೇಟಾ |
ಏಕಮೂಲ ವರ್ಗ: | ಆ್ಯಮ್ನಿಯೋಟಾ |
ವರ್ಗ: | ರೆಪ್ಟೀಲಿಯಾ Laurenti, 1768 |
ಅಸ್ತಿತ್ವದಲ್ಲಿರುವ ಗುಂಪುಗಳು | |
|
ರೆಪ್ಟೀಲಿಯಾ ಎಂದು ಕರೆಯಲ್ಪಡುವ ಈ ವರ್ಗದಲ್ಲಿ ಐದು ಗಣಗಳಿವೆ. ಈ ಗಣಗಳೆಂದರೆ ಕೀಲೋನಿಯಾ, ಕ್ರೊಕೊಡೈಲಿಯಾ, ಒಫಿಡಿಯಾ, ರಿಂಕೋಸಿಫಾಲಿಯಾ ಮತ್ತು ಲೇಸರ್ಟೀಲಿಯಾ. ಕೀಲೋನಿಯಾದಲ್ಲಿ ಎಲ್ಲ ಆಮೆಗಳು, ಕಡಲಾಮೆಗಳು ಮತ್ತು ಕಲ್ಲಾಮೆಗಳು ಬರುತ್ತವೆ. ಕ್ರೊಕೊಡೈಲಿಯಾದಲ್ಲಿ ಮೊಸಳೆಗಳು ಬರುತ್ತವೆ. ಕೇಮ್ಯಾನ್, ಮಗ್ಗರ್, ಆ್ಯಲಿಗೇಟರ್, ಘರಿಯಾಲ್, ಇತ್ಯಾದಿ ಇಪ್ಪತ್ಮೂರು ಜಾತಿಯ ಮೊಸಳೆಗಳನ್ನು ಇಂದು ಗುರುತಿಸಲಾಗಿದೆ.
ಉರಗದ ವಿಕಾಸವಾಗಿದ್ದು ದ್ವಿಚರಿಗಳಿಂದ. ಅವು ಮೊದಲ ಬಾರಿಗೆ ನೀರನ್ನು ಬಿಟ್ಟು ಭೂಮಿಯ ಮೇಲೆ ವಾಸಿಸಿ ವಾತಾವರಣದ ಶುಷ್ಕ ಗಾಳಿಯ ಸಹಾಯದಿಂದ ಉಸಿರಾಡುವ ಶಕ್ತಿಯನ್ನು ಬೆಳೆಸಿಕೊಂಡವು. ಆದರೆ ಮೊಟ್ಟೆಗಳನ್ನಿಡಲು ಅವು ನೀರನ್ನು ಆಶ್ರಯಿಸಬೇಕಾಗಿತ್ತು. ಕೆಲವು ದ್ವಿಚರಿಗಳು ದಿಟ್ಟತನದ ಮತ್ತೊಂದು ಹೆಜ್ಜೆಯನ್ನಿಟ್ಟು ಅಜೀವಪರ್ಯಂತ ನೆಲದ ಮೇಲೆ ವಾಸಿಸುವ ಶಕ್ತಿಯನ್ನು ಪ್ರದರ್ಶಿಸಿದವು. ಇವುಗಳಿಂದ ವಿಕಸಿಸಿದ ಪ್ರಾಣಿವರ್ಗವೇ ಉರಗಗಳು.