ರೋಗವಿಜ್ಞಾನ
From Wikipedia, the free encyclopedia
ರೋಗವಿಜ್ಞಾನವು ವೈದ್ಯವಿಜ್ಞಾನದ ಒಂದು ಶಾಖೆ (ಪೆತಾಲಜಿ). ವ್ಯಾಧಿಯ ಮೈದೋರಿಕೆ, ಕಾರಣ ಮತ್ತು ಕ್ರಿಯಾತಂತ್ರಗಳನ್ನು ಕುರಿತ ಶಾಸ್ತ್ರೀಯ ಅಧ್ಯಯನ.[1][2] ವೈದ್ಯಕೀಯದ ಇತರ ಶಾಖೆಗಳಾದ ಅಂಗರಚನಾವಿಜ್ಞಾನ, ಶರೀರಕ್ರಿಯಾವಿಜ್ಞಾನ, ಸೂಕ್ಷ್ಮಜೀವವಿಜ್ಞಾನ, ಜೀವರಸಾಯನವಿಜ್ಞಾನ ಮತ್ತು ಅಂಗಾಂಶವಿಜ್ಞಾನಗಳಿಂದ ಪಡೆದ ಜ್ಞಾನವನ್ನು ಇಲ್ಲಿ ಬಳಸಿಕೊಳ್ಳುವುದಿದೆ. ರೋಗ ತಲೆದೋರದಂತೆ ಅದನ್ನು ನಿಯಂತ್ರಿಸುವ ಸಂಬಂಧದಲ್ಲಿ ವಿಧಿವಿಧಾನಗಳನ್ನು ರೂಪಿಸಿಕೊಳ್ಳುವ ಪೂರ್ವದಲ್ಲಿ ರೋಗವಿಜ್ಞಾನ ವಿಧಾನದಿಂದ ಪಡೆಯುವ ಮಾಹಿತಿ ಬಲು ಮುಖ್ಯವೆನಿಸುತ್ತದೆ.