ಕೋತಿ
From Wikipedia, the free encyclopedia
ಕೋತಿಯು ಹಾಪ್ಲೋರಿನಿ ಉಪಗಣ ಹಾಗೂ ಸಿಮಿಯನ್ ಅಡಿಗಣದ ಒಂದು ಪ್ರೈಮೇಟ್, ಪ್ರಾಚೀನ ವಿಶ್ವದ ಕೋತಿ ಅಥವಾ ನೂತನ ವಿಶ್ವದ ಕೋತಿಯಾಗಿರಬಹುದು, ಆದರೆ ಏಪ್ಗಳನ್ನು ಹೊರತುಪಡಿಸಿ (ಮಾನವರನ್ನು ಒಳಗೊಂಡಂತೆ). ಕೋತಿಯ ಸುಮಾರು ೨೬೦ ಪರಿಚಿತ ಜೀವಂತ ಪ್ರಜಾತಿಗಳಿವೆ. ಇದರಲ್ಲಿ ಬಹಳಷ್ಟು ವೃಕ್ಷವಾಸಿಗಳಾಗಿದ್ದರೂ ಬಬೂನ್ಗಳಂತಹ ಪ್ರಧಾನವಾಗಿ ನೆಲದ ಮೇಲೆ ವಾಸಿಸುವ ಪ್ರಜಾತಿಗಳಿವೆ.
ಬಾನೆಟ್ ಕೋತಿ | |
ವೈಜ್ಞಾನಿಕ ವರ್ಗೀಕರಣ | |
ಸಾಮ್ರಾಜ್ಯ: | ಪ್ರಾಣಿ |
ವಂಶ: | ಕಾರ್ಡೇಟ |
ವರ್ಗ: | ಸಸ್ತನಿ |
ಗಣ: | ಪ್ರೈಮೇಟ್ |
ಉಪಗಣ: | ಹ್ಯಾಪ್ಲೋರ್ಹಿನಿ |
ಇಂಫ್ರಾಗಣ | ಸೆಮಿಫೋರ್ಮೆ |
(ಅರ್ನೆಸ್ಟ್ ಹೆಕಲ್, ೧೮೬೬) | |
ಸೇರಿಸಲಾದ ಗುಂಪುಗಳು | |
ಕಾಲ್ಟ್ರಚಿಡೆ, ಸೆಬಿಡೆ, ಅಯೊಟಿಡೆ ಪಿತೆಸಿಡೆ, ಅಟೆಲಿಡೆ, ಸರ್ಕೊಪಿತೆಸಿಡೆ, †ಪಾರಪಿತೆಸಿಡೆ (ಅಳಿದಿದೆ)- (ಕುಟುಂಬಗಳು) | |
ಹೊರಗಿಟ್ಟ ಗುಂಪುಗಳು | |
ಹೊಲೊಬಟಿಡೆ, ಹೋಮಿನಿಡೆ- (ಕುಟುಂಬಗಳು) |
ಸಾಮಾನ್ಯವಾಗಿ ಕೋತಿಗಳು[1] ಎಂದು ನಾವು ಯಾವುವನ್ನೂ ಕರೆಯುತ್ತೇವೆಯೋ ಆ ಗುಂಪು ಎರಡು ದೊಡ್ಡ ಗುಂಪುಗಳನ್ನು, ಹಳೆಯ ಪ್ರಪಂಚದ ಕೋತಿಗಳು ಮತ್ತು ಹೊಸ ಪ್ರಪಂಚದ ಕೋತಿಗಳನ್ನು, ಒಳಗೊಳ್ಳುತ್ತದೆ. ವಾನರಗಳು ಮತ್ತು ಮಾನವರೂ ಇದೇ ಗುಂಪಿನಲ್ಲಿ ಬರುವ ಹೊಸ ಪ್ರಪಂಚದ ಕೋತಿಗಳಿಗಿಂತ ಹಳೆಯ ಪ್ರಪಂಚದ ಕೋತಿಗಳಿಗೆ ಹೆಚ್ಚು ಹತ್ತಿರದ ಸಂಬಂಧಿಗಳು.
ಗಣ ಪ್ರೈಮೇಟ್ನ ಎರಡು ಉಪಗಣಗಳಲ್ಲಿ ಒಣ ಮೂಗಿರುವ ಹಾಪ್ಲೊಹರ್ನಿ ಉಪಗಣದಲ್ಲಿ ಕೋತಿಗಳು ಅಥವಾ ಮಂಗಗಳು ಇವೆ. ಈ ಉಪಗಳದ ಕೆಳಗೆ ಬರುವ ಟಾರ್ಸಿಫೊರ್ಮೆ ಇಂಫ್ರಾಗಣ (ಟಾರ್ಸಿಯರ್ಗಳು ಇದರಲ್ಲಿ ಬರುತ್ತವೆ) ಮತ್ತು ಹೋಮಿನಿಡೆ ಮಹಾಕುಟುಂಬ (ಇದರಲ್ಲಿ ವಾನರಗಳು ಮತ್ತು ಮಾನವರು ಬರುತ್ತಾರೆ) ಇದರಡಿ ಬರುವುದಿಲ್ಲ. ಹೀಗಾಗಿ ಈ ಗುಂಪು ಒಂದೇ ಮೂಲದ ಎಲ್ಲಾ ಜೀವಿಗಳನ್ನೂ ಒಳಗೊಳ್ಳುವುದಿಲ್ಲ. ಹೀಗಾಗಿ ಇದು ಜೀವ ವರ್ಗೀಕರಣದ ವಿಭಜನೆಯಲ್ಲ.