ಹೋಮೋ ಎರೆಕ್ಟಸ್
From Wikipedia, the free encyclopedia
ಹೋಮೋ ಎರೆಕ್ಟಸ್[1] ಹೋಮಿನಿನಿ ಬುಡಕಟ್ಟಿನ ಒಂದು ದ್ವಿಪಾದಿ ಮಾನವ ಮತ್ತು ಸುಮಾರು ೧.೯ ದಶಲಕ್ಷ ಹಿಂದಿನಿಂದ ಮತ್ತು ೭೦೦೦೦ ವರುಷಗಳ ಹಿಂದಿನವರೆಗೆ ಪ್ಲಿಸ್ಟೋಸಿನ್ ಕಾಲಮಾನದ ಬಹಳಷ್ಟು ಭಾಗದಲ್ಲಿ ಬದುಕಿದ್ದ. ಇವನು/ಳು ಆಫ್ರಿಕಾದಲ್ಲಿ ಹುಟ್ಟಿ ಜಾರ್ಜಿಯ, ಭಾರತ, ಶ್ರೀಲಂಕಾ, ಚೀನ ಮತ್ತು ಇಂಡೋನೇಶಿಯಾಗಳಿಗೆ ವಲಸೆ ಹೋದ ಎಂದು ಭಾವಿಸಲಾಗಿದೆ.[2][3]
ಟೌಟಾವೆಲ್, ಫ್ರಾನ್ಸ್ನಲ್ಲಿನ ನಮೂನೆಯ ಮರು ರಚನೆ | |
ವೈಜ್ಞಾನಿಕ ವರ್ಗೀಕರಣ | |
ಸಾಮ್ರಾಜ್ಯ: | ಪ್ರಾಣಿ |
ವಂಶ: | ಕಾರ್ಡೇಟ |
ಕ್ಲಾಡ್: | ಸಿನಾಪ್ಸಿಡ |
ವರ್ಗ: | ಸಸ್ತನಿ |
ಗಣ: | ಪ್ರೈಮೇಟ್ |
ಉಪಗಣ: | ಹ್ಯಾಪ್ಲೋರ್ಹಿನಿ |
ಕುಟುಂಬ: | ಹೋಮಿನಿಡೇ |
ಬುಡಕಟ್ಟು | ಹೋಮಿನಿನಿ |
ಕುಲ: | ಹೋಮೋ |
ಪ್ರಭೇದ: | ಎರೆಕ್ಟಸ್ |
ದ್ವಿಪದ ಹೆಸರು | |
†ಹೋಮೋ ಎರೆಕ್ಟಸ್ ಡುಬೋಯಿಸ್, ೧೮೯೨ | |
ಸಮಾನಾರ್ಥಕಗಳು | |
|
ಅವನ ವರ್ಗೀಕರಣ, ಮೂಲ ವಂಶಸ್ಥರು ಮತ್ತು ಸಂತತಿಗಳ ಬಗೆಗೆ, ವಿಶೇಷವಾಗಿ ಹೋಮೋ ಎರ್ಗಸ್ಟರ್ಗೆ ಸಂಬಂಧಿಸಿದಂತೆ ಚರ್ಚೆ ಮುಂದುವರೆದಿದ್ದು ಎರಡು ನಿಲುವುಗಳು ವ್ಯಕ್ತವಾಗಿವೆ. ೧). ಹೋ. ಎರೆಕ್ಟಸ್ ಮತ್ತು ಹೋ. ಎರ್ಗಸ್ಟರ್ ಎರಡೂ ಒಂದೇ ಮತ್ತು ಹೋಮೋ ಹೈಡೆಲ್ಬರ್ಗೆನ್ಸಿಸ್, ಹೋಮೋ ನಿಯಾಂಡೆರ್ತಲೆನ್ಸಿಸ್ ಮತ್ತು ಹೋಮೋ ಸೆಪಿಯಿನ್ಸ್ಗಳ ಪೂರ್ವಜ ಅಥವಾ ೨) ಹೋ. ಎರ್ಗಸ್ಟರ್ಗಿಂತ ಭಿನ್ನವಾಗಿ ಇದು ಏಶಿಯಾದ ಪ್ರತ್ಯೇಕ ಪ್ರಭೇದ.[2][4][5]
ಇನ್ನೊಂದು ಬದಲೀ ದೃಷ್ಟಿಕೋನವೂ ಸಹ ಪ್ರಾಚೀನ-ಮಾನವಶಾಸ್ತ್ರಜ್ಞರಲ್ಲಿ ಇದೆ. ಇವರು ಹೋ. ಎರ್ಗಸ್ಟರ್ ಒಂದು ಆಫ್ರಿಕಾದ ಒಂದು ಉಪಪ್ರಭೇದವಾಗಿ ಪರಿಗಣಿಸುತ್ತಾರೆ. ಅವರ ಪ್ರಕಾರ ಏಶಿಯಾದ ಪ್ರಭೇದವು “ಹೋಮೋ ಎರೆಕ್ಟಸ್ ಸೆನ್ಸು ಸ್ಟ್ರಿಕ್ಟೊ” (ಖಚಿತ ಅರ್ಥದ್ದು) ಮತ್ತು ಆಫ್ರಿಕಾದ ಉಪಪ್ರಭೇದವು “ಹೋಮೋ ಎರೆಕ್ಟಸ್ ಸೆನ್ಸು ಲಾಟೊ” (ವಿಶಾಲ ಅರ್ಥದ್ದು) ಮತ್ತು ಮೂಲ ಪ್ರಭೇದವು ಏಶಿಯಾ ಮತ್ತು ಆಫ್ರಿಕಾ ಎರಡೂ ಗುಂಪುಗಳನ್ನು ಒಳಗೊಂಡಿದೆ.[6][7]
ಜೊತೆಗೆ ೨೦೧೩ರಲ್ಲಿ ಡಮನಿಸಿ ತಲೆಬುರುಡೆಯ ದಾಖಲೆಗಳೊಂದಿಗೆ[8] ಇನ್ನೊಂದು ಹೊಸ ಚರ್ಚೆಯೂ ಸಹ ಕಾಣಿಸಿಕೊಂಡಿತು. ಡಮನಿಸಿ ತಲೆಬುರುಡೆಯ ವೈವಿಧ್ಯತೆಯನ್ನು ಗಣನೆಗೆ ತೆಗೆದುಕೊಂಡು ಇದುವರೆಗೆ ಬೇರೆ ಬೇರೆ ಪ್ರಭೇದಗಳಲ್ಲಿ ವರ್ಗೀಕರಿಸಿದ ಹೋ. ಎರ್ಗಸ್ಟರ್, ಹೋಮೋ ರುಡಾಲ್ಫೆನ್ಸಿಸ್ ಮತ್ತು ಹೋಮೋ ಹೆಬಿಲಿಸ್ನ್ನೂ ಸಹ ಹೋಮೋ ಎರೆಕ್ಟಸ್ ಎಂದು ಮರು ವರ್ಗೀಕರಿಸ ಬೇಕೆಂದು ಸಂಶೋಧಕರು ಸೂಚಿಸಿದರು.[9][10]