ಫನೆರೊಜೋಯಿಕ್ ಕಲ್ಪ
From Wikipedia, the free encyclopedia
ಫನೆರೊಜೋಯಿಕ್ ಕಲ್ಪ ಇಂದು ಚಾಲ್ತಿಯಲ್ಲಿರುವ ಕಲ್ಪ ಮತ್ತು ಇದರ ಆರಂಭ ಈ ಕಲ್ಪವು ೫೪೧ ದಶಲಕ್ಷ ವರುಷಗಳ ಹಿಂದೆ ಆರಂಭವಾಯಿತು.[1] ಈ ಕಲ್ಪದಲ್ಲಿ ಮೂರು ಯುಗಗಳಿವೆ ಮತ್ತು ಅವು ಸೆನೊಜೋಯಿಕ್, ಮೀಸೊಜೋಯಿಕ್ ಮತ್ತು ಪಾಲಿಯೊಜೋಯಿಕ್. ಪಾಲಿಯೊಜೋಯಿಕ್ ಯುಗದ ಲಕ್ಷಣವೆಂದರೆ ಮೀನುಗಳು, ಉಭಯವಾಸಿಗಳು ಮತ್ತು ಸರೀಸೃಪಗಳು ಅಭಿವೃದ್ಧಿಯಾದದ್ದು. ಮೀಸೊಜೋಯಿಕ್ ಯುಗವು ಸರೀಸೃಪಗಳ ಯುಗ ಮತ್ತು ಸಸ್ತನಿಗಳ ಹಲವು ಲಕ್ಷಣಗಳು ವಿಕಾಸವಾದವು. ಇಲ್ಲಿನ ಪ್ರಮುಖ ಘಟನಾವಳಿಗಳಲ್ಲಿ ಹಕ್ಕಿಗಳು ವಿಶೇಷವಾಗಿ ಬೃಹತ್ ಸರೀಸೃಪಗಳಾದ ಡೈನೊಸಾರಸ್ಗಳ ವರ್ದಮಾನಕ್ಕೆ ಬರುವುದನ್ನು ಒಳಗೊಂಡಿದೆ. ಸೆನೊಜೋಯಿಕ್ ಯುಗವು ಸಸ್ತನಿಗಳ ಯುಗ ಮತ್ತು ಇತ್ತೀಚಿನದು ಮಾನವನ ಕಾಲಮಾನ.
ನಾಲ್ಕು ಕಲ್ಪಗಳು
೫೪೧ - ೦* | ಫನರೊಜೋಯಿಕ್ |
೨೫೦೦-೫೪೧* | ಪ್ರೊಟೆರೊಜೋಯಿಕ್ |
೪೦೦೦ -೨೫೦೦ * | ಆರ್ಕಿಯನ್ |
೪೬೦೦- ೪೦೦೦ * | ಹಡೇಯನ್ |
*ದಶಲಕ್ಷ ವರುಷಗಳ ಹಿಂದೆ