ರಷ್ಯಾ
From Wikipedia, the free encyclopedia
ರಷ್ಯೆ ಅಥವಾ ರಷ್ಯಾ ಅಥವಾ ರಷ್ಯ ಅಥವಾ ರೂಸ್ (ಪ್ರಥಮ ವಿಭಕ್ತಿ: ರೂಸು) (ರೂಸಿ: Россия), ಅಧಿಕೃತವಾಗಿ ರೂಸಿ ಒಕ್ಕೂಟ (ರೂಸಿ: Российская Федерация)
ರೂಸಿ ಒಕ್ಕೂಟ Российская Федерация ರೊಸ್ಸಿಯ್ಸ್ಕಾಯ ಫ್ಯೆದೆರಾತ್ಸಿಯ | |
---|---|
Anthem: Государственный гимн Российской Федерации (ರಷ್ಯನ್ ಭಾಷೆ) ಗೊಸುದರ್ಸ್ತ್ವೆನ್ನಿ ಗಿಮ್ನ್ ರಸಿಸ್ಕೊಯ್ ಫೆಡರಾತ್ಸಿ ರೂಸಿ ಒಕ್ಕೂಟದ ರಾಷ್ಟ್ರಗೀತೆ | |
Capital | ಮಾಸ್ಕೋ |
Largest city | ರಾಜಧಾನಿ |
Official languages | ರಷ್ಯನ್ ದೇಶದ ಅಧಿಕೃತ ಭಾಷೆ; ೨೭ ಇತರೆ |
Ethnic groups | 79.8% ರಷ್ಯನ್ 3.8% ಟಟಾರ್ 2.0% ಯುಕ್ರೇನಿನ ಜನ 1.2% ಬಷ್ಕಿರ್ ೧೩.೨% ಇತರರು[1] |
Government | Federal ಅರೆ-ಅಧ್ಯಕ್ಷೀಯ ಗಣರಾಜ್ಯ |
• ರಾಷ್ಟ್ರಪತಿ | ಡಿಮಿಟ್ರಿ ಮೆಡ್ವೆಡೆವ್ |
• ಪ್ರಧಾನ ಮಂತ್ರಿ | ವ್ಲಾದಿಮಿರ್ ಪೂತಿನ್ |
Legislature | Federal Assembly |
• Upper house | Federation Council |
• Lower house | ದೂಮ |
ಸ್ಥಾಪನೆ | |
• ರುರಿಕ್ ವಂಶ | 8621 |
• ಕೀವನ್ ರೂಸ್ | 882 |
• ವ್ಲಾಡಿಮಿರ್-ಸುಜ್ಡಾಲ್ | 1169 |
• ಮಾಸ್ಕೋದ ಗ್ರಾಂಡ್ ಡಚಿ | 1263 |
• ಜಾರ್ ಆಡಳಿತ | 1547 |
• ರಷ್ಯಾದ ಸಾಮ್ರಾಜ್ಯ | 1721 |
• Russian SFSR | 7 November 1917 |
1922 | |
• ರೂಸಿ ಒಕ್ಕೂಟ | 25 December 1991 |
• Water (%) | 13[2] |
Population | |
• 2008 estimate | 142,008,838[3] (9th) |
• 2002 census | 145,166,731[4] |
GDP (PPP) | 2008 estimate |
• Total | $2,261 trillion[5] |
• Per capita | $15,922[5] |
GDP (nominal) | 2008 estimate |
• Total | $1,676 trillion[5] |
• Per capita | $11,807[5] |
Gini (2005) | 40.5[6] Error: Invalid Gini value |
HDI (2005) | 0.806 Error: Invalid HDI value · 73rd |
Currency | ರೂಬಲ್ (RUB) |
Time zone | UTC+2 to +12 |
• Summer (DST) | UTC+3 to +13 |
Driving side | right |
Calling code | +7 |
Internet TLD | .ru (.su reserved), (.рф2 2009) |
|
,[8][9] ಉತ್ತರ ಯುರೇಷಿಯಾ (ಯುರೋಪ್ ಹಾಗೂ ಏಷ್ಯಾ ಒಟ್ಟಿಗೆ)[10] ದಲ್ಲಿರುವ ಒಂದು ದೇಶ. ಇದೊಂದು 83 ಬಿಡಿ ಸಂಸ್ಥಾನಗಳನ್ನು ಹೊಂದಿರುವ ಅರೆ-ಅಧ್ಯಕ್ಷೀಯ ಒಕ್ಕೂಟವಾಗಿದೆ. ರಷ್್ಯತನ್ನ ಭೂಗಡಿಗಳನ್ನು ಈ ದೇಶಗಳೊಂದಿಗೆ ಹಂಚಿಕೊಂಡಿದೆ (ವಾಯುವ್ಯದಿಂದ ಆಗ್ನೇಯದವರೆಗೆ) : ನಾರ್ವೆ, ಫಿನ್ಲ್ಯಾಂಡ್, ಎಸ್ಟೊನಿಯಾ, ಲಾಟ್ವಿಯಾ, ಲಿಥುವೇನಿಯಾ (ಕಲಿನಿನ್ಗ್ರಾಡ್ ಓಬ್ಲಸ್ಟ್ ಮೂಲಕ), ಪೋಲೆಂಡ್ (ಕಲಿನಿನ್ಗ್ರಾಡ್ ಓಬ್ಲಸ್ಟ್ ಮೂಲಕ), ಬೆಲಾರೂಸ್, ಉಕ್ರೇನ್, ಜಾರ್ಜಿಯಾ, ಅಜರ್ಬೈಜಾನ್, ಕಜಕ್ಸ್ತಾನ್, ಚೀನಾ, ಮಂಗೋಲಿಯಾ ಮತ್ತು ಉತ್ತರ ಕೊರಿಯಾ. ಹಾಗೆಯೇ ಈ ದೇಶದ ಸಮುದ್ರ ತಡಿಯ ಗಡಿಗಳು ಜಪಾನ್ (ಓಖೋಟ್ಸ್ಕ್ ಸಮುದ್ರದಿಂದ ), ದಕ್ಷಿಣ ಕೊರಿಯಾ (ಜಪಾನ್ ಸಮುದ್ರದಿಂದ), ಸ್ವೀಡನ್ (ಬಾಲ್ಟಿಕ್ ಸಮುದ್ರದಿಂದ), ತುರ್ಕಿ (ಕಪ್ಪು ಸಮುದ್ರದಿಂದ), ಮತ್ತು ಯುನೈಟೆಡ್ ಸ್ಟೇಟ್ಸ್ (ಬೇರಿಂಗ್ ಜಲಸಂಧಿಯಿಂದ) ಗಳಿಂದ ಸುತ್ತುವರೆದಿದೆ. ೧೭ ಮಿಲಿಯನ್ ಚದರ ಕಿಮಿ ವಿಸ್ತೀರ್ಣದೊಂದಿಗೆ ರಷ್ಯಾ, ವಿಶ್ವದ ಅತಿ ದೊಡ್ಡ ದೇಶವಾಗಿದ್ದು, ೧೪೨ ಮಿಲಿಯನ್ ಜನರಿಂದ ಕೂಡಿ, ಜನಸಂಖ್ಯೆಯ ಪ್ರಮಾಣದಲ್ಲಿ ೯ನೆಯ ಅತಿ ದೊಡ್ಡ ದೇಶವಾಗಿದೆ.[2] ಇದು ಯೂರೋಪ್ನ ೪೦% ಭಾಗವನ್ನು ಒಟ್ಟಾರೆಯಾಗಿ ವಿಸ್ತರಿಸಿದ್ದು, ೧೧ ಕಾಲಮಾನಗಳಲ್ಲಿ ವ್ಯಾಪಿಸಿ, ವಿವಿಧ ಮಾದರಿಯ ಪರಿಸರ ಹಾಗೂ ಭೂಲಕ್ಷಣಗಳನ್ನು ಹೊಂದಿದೆ. ರಷ್ಯಾದಲ್ಲಿ ವಿಶ್ವದಲ್ಲೇ ಅತಿ ಹೆಚ್ಚಿನ ಪ್ರಮಾಣದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳ[11] ನಿಕ್ಷೇಪಗಳಿವೆ, ಹಾಗಾಗಿ ಶಕ್ತಿ ಸಂಪನ್ಮೂಲದಲ್ಲಿ ಮಹಾ ಶಕ್ತಿ ಎಂದೂ ಹೆಸರಾಗಿದೆ.ಇದು ವಿಶ್ವದ ಅತಿ ದೊಡ್ಡ ಅರಣ್ಯ ನಿಕ್ಷೇಪವನ್ನು ಹೊಂದಿದ್ದು ಇಲ್ಲಿನ ಸರೋವರಗಳು ಸರಿ ಸುಮಾರು ನಾಲ್ಕನೇ ಒಂದು ಭಾಗದಷ್ಟು ವಿಶ್ವದ ಘನೀಕೃತವಲ್ಲದ ಶುದ್ಧನೀರ[12] ನ್ನು ಹೊಂದಿದೆ.
೩ನೇ ಮತ್ತು ೮ನೇ ಶತಮಾನ [10] ಗಳಲ್ಲಿ ಯೂರೋಪ್ನ ಒಂದು ಗಮನಾರ್ಹ ಸಮೂಹವಾಗಿ ಹೊರ ಹೊಮ್ಮಿದ ಪೂರ್ವ ಸ್ಲಾವ್ ಜನರುಗಳಿಂದ ಈ ದೇಶದ ಇತಿಹಾಸವು ಆರಂಭವಾಗಿತ್ತು. ಒಂದು ಉದಾತ್ತ ವೈಕಿಂಗ್ ಯೋಧ ವರ್ಗ ಹಾಗೂ ಅವರ ವಂಶಸ್ಥರಿಂದ ಸ್ಥಾಪಿತ ಕಿವಾನ್ ರುಸ್ ಎಂಬ ಪ್ರಥಮ ಸ್ಲಾವ್ ರಾಜ್ಯವಾಗಿ 9ನೇ ಶತಮಾನದಲ್ಲಿ ಹೊರಹೊಮ್ಮಿ, ಬೈಜಾಂಟೈನ್ ಸಾಮ್ರಾಜ್ಯವನ್ನು ಅನುಸರಿಸಿ ೯೮೮[13] ರಲ್ಲಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿತು. ಇದರಿಂದಾಗಿ ಬೈಜಾಂಟೈನ್ ಮತ್ತು ಸ್ಲಾವ್ ಸಂಸ್ಕೃತಿಗಳ ಸಂಯೋಜನೆಯಾಗಿ ಮುಂದಿನ ಸಹಸ್ರಮಾನದ ರಷ್ಯಾದ ಸಂಸ್ಕೃತಿಯಾಗಿ ಹೊರಹೊಮ್ಮಿತು. ಅಂತಿಮವಾಗಿ ಕಿವಾನ್ ರುಸ್ ವಿಭಜನೆಯಾಗಿ ಬಹಳಷ್ಟು ಸಣ್ಣ ಬಿಡಿ ಸಂಸ್ಥಾನಗಳಾಗಿ ಒಡೆಯಿತು. ಕಿವಾನ್ ರುಸ್ನ ನಂತರ ಶಕ್ತಿಶಾಲಿ ರಾಜ್ಯ ಮಾಸ್ಕೋ ಆಗಿತ್ತು. ಇದು ರಷ್ಯಾದ ಒಗ್ಗೂಡುವಿಕೆ ಹಾಗೂ ಸುವರ್ಣ ತಂಡದ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಶಕ್ತಿಯಾಗಿತ್ತು. ಮಾಸ್ಕೋ ಹಂತಹಂತವಾಗಿ ಅಕ್ಕಪಕ್ಕದ ರಷ್ಯಾದ ಸಂಸ್ಥಾನಗಳನ್ನು ಒಗ್ಗೂಡಿಸುತ್ತಾ ಕಿವಾನ್ ರುಸ್ನ ಸಾಂಸ್ಕೃತಿಕ ಹಾಗೂ ರಾಜಕೀಯ ಸಂಪ್ರದಾಯಗಳಲ್ಲಿ ಮೇಲುಗೈ ಸಾಧಿಸಿತು. ೧೮ನೇ ಶತಮಾನದ ವೇಳೆಗೆ, ಆಕ್ರಮಣ, ವಿಸ್ತರಣೆ ಹಾಗೂ ಭೂಶೋಧನೆಗಳಿಂದಾಗಿ ರಾಷ್ಟ್ರವು ಬಹಳ ವಿಸ್ತಾರವಾಗಿ, ಪೋಲೆಂಡ್ನಿಂದ ಪೂರ್ವದಿಕ್ಕಿನಲ್ಲಿ ಪೆಸಿಫಿಕ್ ಮಹಾಸಾಗರ ಹಾಗೂ ಅಲಾಸ್ಕಾಗಳನ್ನೆಲ್ಲಾ ಒಳಗೊಂಡು ಇತಿಹಾಸದಲ್ಲಿನ ೩ನೇ ಅತಿ ದೊಡ್ಡ ಚಕ್ರಾಧಿಪತ್ಯ ಎನಿಸಿ ರಷ್ಯಾದ ಚಕ್ರಾಧಿಪತ್ಯ ಎನಿಸಿಕೊಳ್ಳುವ ಮಟ್ಟಿಗೆ ಬೆಳೆಯಿತು.
ರಷ್ಯಾವು ವಿಶ್ವದಾದ್ಯಂತ ಅಧಿಕಾರ ಮತ್ತು ಪ್ರಭಾವವನ್ನು ರಷ್ಯಾದ ಚಕ್ರಾಧಿಪತ್ಯದ ಕಾಲದಿಂದ ಹಿಡಿದು, ಸೋವಿಯೆತ್ ಒಕ್ಕೂಟದ ಅಗ್ರ ಸದಸ್ಯವಾಗಿ, ವಿಶ್ವದ ಪ್ರಪ್ರಥಮ ಹಾಗೂ ಅತಿ ದೊಡ್ಡ ಸಂವಿಧಾನಾತ್ಮಕ ಸಮಾಜವಾದಿ ಆಡಳಿತ ಮತ್ತು ಮನ್ನಣೆ ಪಡೆದ ಉತ್ಕೃಷ್ಠ ಶಕ್ತಿ ಎನಿಸಿತು. ಕಲೆ ಹಾಗೂ ವಿಜ್ಞಾನದ[10] ಪ್ರತಿ ಮಗ್ಗಲುಗಳಲ್ಲಿ ರಷ್ಯಾ ಉತ್ಕೃಷ್ಠತೆಯ ಬಗ್ಗೆ ದೀರ್ಘ ಪರಂಪರೆಯ ಹೆಗ್ಗಳಿಕೆ ಹೊಂದಿದೆ. ರಷ್ಯನ್ ಒಕ್ಕೂಟವನ್ನು ೧೯೯೧ರಲ್ಲಿ ಸೋವಿಯತ್ ಒಕ್ಕೂಟದ ವಿಭಜನೆಯ ನಂತರ ಸ್ಥಾಪಿಸಲಾಯಿತು. ಆದರೂ ಇದನ್ನು ಸೋವಿಯತ್ ಒಕ್ಕೂಟ[14] ದ ಅಧಿಕೃತ ಪ್ರತಿನಿಧಿಯೆಂದೇ ಈಗಲೂ ಪರಿಗಣಿಸಲಾಗುತ್ತಿದೆ. ಇದು ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಪ್ರಪಂಚದಲ್ಲಿ ಎಂಟನೇ ಸ್ಥಾನ, ಖರೀದಿ ಸಾಮಾರ್ಥ್ಯ ಸಮತೆಯಲ್ಲಿ ಆರನೇ ಸ್ಥಾನ ಹಾಗು ಸೇನಾ ಆಯವ್ಯಯದಲ್ಲಿ ಎಂಟನೇ ಸ್ಥಾನ ಹೊಂದಿದೆ. ಈ ದೇಶವು ಐದು ಗಣ್ಯ ಅಣ್ವಸ್ತ್ರ ಸಮರ್ಥ ದೇಶಗಳಲ್ಲಿ ಒಂದಾಗಿದೆ. ಸಮೂಹ ವಿನಾಶಕ ಶಸ್ತ್ರಾಸ್ತ್ರಗಳ[15] ಬೃಹತ್ ಸಂಗ್ರಹವನ್ನೇ ಹೊಂದಿದೆ. ರಷ್ಯಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ ಹೊಂದಿದೆಯಲ್ಲದೇ, G8, APEC ಹಾಗೂ SCOಗಳ ಸದಸ್ಯತ್ವ ಹೊಂದಿದೆ. ಸ್ವತಂತ್ರ ರಾಷ್ಟ್ರಗಳ ಕಾಮನ್ವೆಲ್ತ್ನ ಅಗ್ರಗಣ್ಯ ಸದಸ್ಯನಾಗಿದೆ.