ರಾಷ್ಟ್ರೀಯ ಉತ್ಪನ್ನ
From Wikipedia, the free encyclopedia
ರಾಷ್ಟ್ರೀಯ ಉತ್ಪನ್ನ (GDP) ಒಂದು ದೇಶದ ಅರ್ಥವ್ಯವಸ್ಥೆಯನ್ನು ಅಳೆಯುವ ಒಂದು ಮಾಪನ. ಆ ದೇಶದಲ್ಲಿ ಒಂದು ವರ್ಷದಲ್ಲಿ ಉತ್ಪನ್ನವಾಗುವ ಎಲ್ಲಾ ಸರಕುಗಳ ಮತ್ತು ಆರ್ಥಿಕ ಅನುಕೂಲಗಳ ಒಟ್ಟು ಮಾರುಕಟ್ಟೆಯ ಬೆಲೆಯು ಅದರ ರಾಷ್ಟ್ರೀಯ ಉತ್ಪನ್ನವಾಗುತ್ತದೆ. ಈ ಉತ್ಪನ್ನವನ್ನು ಆ ರಾಷ್ಟ್ರದ ಜನಸಂಖ್ಯೆಯಿಂದ ಭಾಗಿಸಿದರೆ, ಆ ಮಾಪನವನ್ನು ತಲಾ ರಾಷ್ಟ್ರೀಯ ಉತ್ಪನ್ನ ಎಂದು ಕರೆಯಲಾಗುತ್ತದೆ.[1] ಅಥವಾ ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶದ ಜನರ ಒಟ್ಟು ಆದಾಯ ಹಾಗೂ ಉತ್ಪಾದನೆ (ಸರಕು),ಉದ್ಯೋಗದ ಅಥವಾ ಸೇವಾಕ್ಷೇತ್ರದ ಮಾರುಕಟ್ಟೆ ಮೌಲ್ಯಾದಾಯ ಎಲ್ಲದರ ಒಟ್ಟು ಮೌಲ್ಯವೇ- ಜಿಡಿಪಿ(gross domestic product- GDP)[2]