ಮಕಾಕ್ ಕೋತಿ
From Wikipedia, the free encyclopedia
ಮಕಾಕ್ ಕೋತಿಯು ಸ್ತನಿ ವರ್ಗದ ಪ್ರೈಮೇಟ್ ಗಣದ ಸರ್ಕೋಪಿತಿಸಿಡೀ ಕುಟುಂಬಕ್ಕೆ ಸೇರಿದ ಮಕಾಕ ಜಾತಿಯ ಕೋತಿ.[2][3] ಇದರಲ್ಲಿ ಸುಮಾರು 12 ಪ್ರಭೇದಗಳುಂಟು. ದಕ್ಷಿಣ ಏಷ್ಯದಿಂದ ತೊಡಗಿ ಇಂಡೊನೇಷ್ಯ, ಫಿಲಿಪೀನ್ಸ್, ಹೈನಾನ್, ಫಾರ್ಮೋಸ, ಜಪಾನ್ ವರೆಗಿನ ವಿವಿಧ ದೇಶಗಳಲ್ಲಿ ಸುಮಾರು 11 ಪ್ರಭೇದಗಳೂ ಆಫ್ರಿಕದ ಆಲ್ಜೀರಿಯಾ, ಮೊರಾಕೊಗಳಲ್ಲಿ ಹಾಗೂ ಜಿಬ್ರಾಲ್ಟರಿನಲ್ಲಿ ತಲಾ ಒಂದು ಪ್ರಭೇದವೂ ಕಾಣದೊರೆಯುವುವು. ಇವುಗಳ ಪೈಕಿ ಬಲು ಪ್ರಸಿದ್ಧವಾದುವು ಇಂತಿವೆ: ಭಾರತದಲ್ಲಿ ಸಿಕ್ಕುವ ಮಕಾಕ ರೇಡಿಯೇಟ (ಬಾನೆಟ್ ಕೋತಿ); ಮಕಾಕ ಮುಲೆಟ (ರೀಸಸ್ ಕೋತಿ); ಮಕಾಕ ಸೈಲಿನಸ್ (ಲಯನ್ ಟೇಲ್ಡ್ ಮಕಾಕ್-ಸಿಂಗಳೀಕ); ಜಪಾನಿನಲ್ಲಿ ವಾಸಿಸುವ ಮಕಾಕ ಫಸ್ಕೇಟ; ಫಿಲಿಪೀನ್ಸ್ ವಾಸಿಯಾದ ಮಕಾಕ ಐರಸ್ (ಏಡಿಭಕ್ಷಕ ಮಕಾಕ್); ಆಲ್ಜೀರಿಯ, ಮೊರಾಕೊಗಳಲ್ಲಿ ಕಾಣಸಿಕ್ಕುವ ಮಕಾಕ ಸಿಲ್ವೇನಸ್ (ಬಾರ್ಬರಿ ಕೋತಿ).
Quick Facts ಮಕಾಕ್ ಕೋತಿಗಳು, Scientific classification ...
ಮಕಾಕ್ ಕೋತಿಗಳು[1] | |
---|---|
ಮಾನೆಗಾಂವ್, ಮಹಾರಾಷ್ಟ್ರ, ಭಾರತದಲ್ಲಿ ಬಾನೆಟ್ ಮಕಾಕ್ ಕೋತಿ | |
Scientific classification | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಕಾರ್ಡೇಟಾ |
ವರ್ಗ: | ಮ್ಯಾಮೇಲಿಯಾ |
ಗಣ: | ಪ್ರೈಮೇಟ್ಸ್ |
ಕುಟುಂಬ: | ಸರ್ಕೋಪಿತೇಸಿಡೇ |
ಪಂಗಡ: | ಪ್ಯಾಪಿಯೋನೀನಿ |
ಕುಲ: | ಮಕಾಕಾ Lacépède, 1799 |
Type species | |
Simia inuus [1] Linnaeus, 1766 | |
Species | |
See text |
Close