ವಾಸ್ತುಶಿಲ್ಪಿ
From Wikipedia, the free encyclopedia
ವಾಸ್ತು ಶಿಲ್ಪಿ ಎಂದರೆ, ಕಟ್ಟಡಗಳನ್ನು ಕಟ್ಟಲು ಒಂದು ಸೂಕ್ತ ಯೋಜನೆ, ವಿನ್ಯಾಸ ಮತ್ತು ತಪ್ಪುಗಳನ್ನು ಪತ್ತೆ ಹಚ್ಚಲು ತರಬೇತಿ ಪಡೆದ ವ್ಯಕ್ತಿಯಾಗಿರುತ್ತಾನೆ ಮತ್ತು ವಾಸ್ತುಶಿಲ್ಪವನ್ನು ರೂಢಿಗತವಾಗಿ ಅನುಷ್ಠಾನಕ್ಕೆ ತರಲು ಅನುಮತಿಯನ್ನು ಪಡೆದಿರುತ್ತಾನೆ. ವಾಸ್ತುಶಿಲ್ಪವನ್ನು ಅಭ್ಯಸಿಸುವುದೆಂದರೆ, ವಿನ್ಯಾಸ ಮತ್ತು ಕಟ್ಟಡಗಳ ರಚನೆಗೆ ಅಥವಾ ಕಟ್ಟಡಗಳ ಗುಂಪಿಗೆ ಸಂಬಂಧಿಸಿದಂತೆ, ಸೇವೆಗಳನ್ನು ನೀಡುವುದು ಅಥವಾ ಸಲ್ಲಿಸುವುದು, ಮತ್ತು ಕಟ್ಟಡದ ಸುತ್ತಮುತ್ತಲಿನ ನಿವೇಶನಗಳಲ್ಲಿ ಮನುಷ್ಯರ ಮುಖ್ಯ ಉದ್ದೇಶಿತ ಚಟುವಟಿಕೆಗಳು ಅಥವಾ ಬಳಕೆಕಾಗಿ ಸ್ಥಳಾವಕಾಶವನ್ನು ಒದಗಿಸುವ ನಿಟ್ಟಿನಲ್ಲಿ ಒಂದು ಯೋಜನೆಯನ್ನು ರೂಪಿಸುವ ಸೇವೆ ಸಲ್ಲಿಸುವುದು.[1]
ಪದ ವ್ಯುತ್ಪತ್ತಿಗೆ ಅನುಗುಣವಾಗಿ,ಆರ್ಕಿಟೆಕ್ಟ್ ಎಂಬ ಪದವು ಲ್ಯಾಟಿನ್ ಪದ ಅರ್ಕಿಟೆಕ್ಟಸ್ಎಂಬ ಪದದಿಂದ ವ್ಯುತ್ಪತ್ತಿಯಾಗಿದ್ದು, ಈ ಪದವು ಗ್ರೀಕ್ ಪದವಾದ ಅರ್ಕಿಟೆಕ್ಟನ್ ಎಂಬ ಪದದಿಂದ ವ್ಯುತ್ಪತ್ತಿಗೊಂಡಿದೆ. (ಅರ್ಖಿ- , ಚೀಫ್ + ಟೆಕ್ಟನ್ ಎಂಬ ಪದದಿಂದ ವ್ಯತ್ಪತ್ತಿಯಾಗಿದ್ದು, ಬಿಲ್ಡರ್ , ಅಂದರೆ ಮುಖ್ಯ ಸ್ಥಾಪಕ .[2] ವೃತ್ತಿಪರವಾಗಿ, ವಾಸ್ತುಶಿಲ್ಪಿಯ ನಿರ್ಧಾರಗಳು ಸಾರ್ವಜನಿಕ ಸುರಕ್ಷತೆಯ ಮೇಲೆ ಪ್ರಭಾವ ಬೀರುತ್ತದೆ, ಮತ್ತು ಇದರಿಂದ ವಾಸ್ತುಶಿಲ್ಪಿಯು ಸುಧಾರಿತ ಶಿಕ್ಷಣ ಮತ್ತು ಕಾರ್ಯಶೀಲತೆ ಅಥವಾ (ಇಂಟರ್ನ್ ಶಿಪ್ನ್ನೊಳಗೊಂಡ) ವಿಶೇಷ ತರಬೇತಿಯನ್ನು ಪಡೆಯಬೇಕಲ್ಲದೇ, ವಾಸ್ತುಶಿಲ್ಪ. ವ್ಯವಹಾರವನ್ನು ನಡೆಸಲು ಪರವಾನಗಿ ಪಡೆಯಲು ವ್ಯವಹಾರದ ಅನುಭವವನ್ನು ಕೂಡ ಹೊಂದಿರಬೇಕಾಗುತ್ತದೆ. ಒಬ್ಬ ವಾಸ್ತುಶಿಲ್ಪಿಯಾಗಲು ಬೇಕಾಗುವ ಕಾರ್ಯಶೀಲ , ತಾಂತ್ರಿಕ ಮತ್ತು ಶೈಕ್ಷಣಿಕ ಅರ್ಹತೆಗಳು ಅಧೀಕೃತ ವ್ಯಾಪ್ತಿಗಿಂತ ಭಿನ್ನವಾಗಿರುತ್ತದೆ. (ಕೆಳಗೆ ನೋಡಿರಿ). ವಾಸ್ತುಶಿಲ್ಪಿ ಮತ್ತು ವಾಸ್ತುಶಿಲ್ಪ ಎಂಬ ಪದಗಳು ಮಾಹಿತಿ ತಂತ್ರಜ್ಞಾನಗಳ ಶಿಕ್ಷಣ ವಿಭಾಗದಲ್ಲಿ ಕೂಡ ಬಳಸಲಾಗಿದೆ. (ಉದಾಹರಣೆಗೆ ತಾಂತ್ರಿಕ ವಾಸ್ತುಶಿಲ್ಪಿ), ನಾವಿಕ ವಾಸ್ತುಶಿಲ್ಪ ಮತ್ತು ಲ್ಯಾಂಡ್ ಸ್ಕೇಪ್ ವಾಸ್ತುಶಿಲ್ಪ. ವಿಶ್ವದ ಹೆಚ್ಚಿನ ನ್ಯಾಯ ವ್ಯವಸ್ಥೆಗಳಲ್ಲಿ, “ ವಾಸ್ತುಶಿಲ್ಪ” ಪದದ ಬಳಕೆಯು ಅದರ ಪದವ್ಯತ್ಪತ್ತಿಗಿಂತ ಹೊರತಾಗಿ, ವೃತ್ತಿಪರ ಮತ್ತು ವಾಣಿಜ್ಯ ಬಳಕೆಗಿಂತ ಭಿನ್ನವಾಗಿರುವುದನ್ನು ಗಮನಿಸಿಲಾಗಿದ್ದು ಅದನ್ನು ಕಾನೂನಾತ್ಮಕವಾಗಿ ರಕ್ಷಿಸಲ್ಪಟ್ಟಿದೆ.