ಪ್ರತ್ಯಾಮ್ಲ
From Wikipedia, the free encyclopedia
ಪ್ರತ್ಯಾಮ್ಲ ಎಂದರೆ ಜಲ ದ್ರಾವಣದಲ್ಲಿರುವ ಹೈಡ್ರಾಕ್ಸೈಡ್ ಆಯಾನನ್ನು (OH-) ಬಿಡುಗಡೆ ಮಾಡುವ, ಆಮ್ಲಗಳನ್ನು ತಟಸ್ಥಗೊಳಿಸುವ (ನ್ಯೂಟ್ರಲೈಸ್) ಅಥವಾ ಎಲೆಕ್ಟ್ರಾನ್ ಕೊರತೆ ಇರುವ ವಸ್ತುವಿನೊಡನೆ ಸಂಯೋಜನೆಗೊಂಡು ಅದಕ್ಕೆ ಎಲೆಕ್ಟ್ರಾನ್ ನೀಡುವ ವಸ್ತು (ಬೇಸ್). ಕ್ಷಾರ ಲಿಟ್ಮಸ್ಸನ್ನು ನೀಲಿ ಬಣ್ಣಕ್ಕೆ ತಿರುಗಿಸುವುದು. ಮುಟ್ಟಿದರೆ ಸಾಬೂನು ಮುಟ್ಟಿದ ಭಾವನೆ ಬರುವುದು.[1] ಖಾರವಾಗಿದ್ದು ನಾಲಿಗೆಯನ್ನು ಕೊರೆಯುವುದು. ಮಿಥೈಲ್ ಆರೆಂಜ್, ಪ್ರತ್ಯಾಮ್ಲಗಳಲ್ಲಿ ಹಳದಿ ಬಣ್ಣವನ್ನೂ ಹೊಂದುವುದು. ಫಿನಾಲ್ಫ್ತಲೀನ್ ಪ್ರತ್ಯಾಮ್ಲಗಳಲ್ಲಿ ಗುಲಾಬಿ ಕೆಂಪುಬಣ್ಣ ಹೊಂದುವುದು. ಪ್ರತ್ಯಾಮ್ಲಗಳು ಅನೇಕ ರಾಸಾಯನಿಕ ಪರಿವರ್ತನೆಗಳ ವೇಗವರ್ಧಕಗಳಾಗಿರುವುವು.