ತೋಟಗಾರಿಕೆ
From Wikipedia, the free encyclopedia
ತೋಟಗಾರಿಕೆ ಎಂಬುದು ಹಣ್ಣುಗಳು, ತರಕಾರಿಗಳು ಮತ್ತು ಅಲಂಕಾರಿಕ ಸಸ್ಯಗಳ ಕೃಷಿ, ಸಂಸ್ಕರಣೆ ಮತ್ತು ಮಾರಾಟದ ಒಂದು ಕಲೆ. ಇದು ಕೃಷಿಯ ಒಂದು ಶಾಖೆಯಾಗಿದ್ದು, ಇದು ಹೂವುಗಳು, ಹಣ್ಣುಗಳು, ತರಕಾರಿಗಳು ಮತ್ತು ಅಲಂಕಾರಿಕ ಮಹತ್ವದ ಸಸ್ಯಗಳನ್ನು ಬೆಳೆಸುತ್ತದೆ. ತೋಟಗಾರಿಕೆ ಎಂಬ ಪದವನ್ನು ಲ್ಯಾಟಿನ್ ಪದಗಳಿಂದ ಪಡೆಯಲಾಗಿದೆ. ಹೊರ್ಟಸ್ ಎಂದರೆ ಉದ್ಯಾನ ಮತ್ತು ಕೋಲೆರೆ ಎಂದರೆ ಕೃಷಿ. ತೋಟಗಾರಿಕೆಯ ಬೆಳೆಗಳು ಭಾರತದ ಒಟ್ಟು ಕೃಷಿಯ ಗಮನಾರ್ಹ ಭಾಗವಾಗಿದೆ.ಹಣ್ಣುಗಳನ್ನು ನಿರ್ದಿಷ್ಟ ಪ್ರದೇಶದಲ್ಲಿ ಬೆಳೆಸಿದಾಗ ಅದರ ಭಾಗವನ್ನು ಆರ್ಚರ್ಡ್ ಎಂದು ಕರೆಯಲಾಗುತ್ತದೆ.ಇದು ಮಸಾಲೆಗಳು,ಕಾಂಡಿಮೆಂಟ್ಸ್[1],ತೋಟ ಬೆಳೆಗಳು,ಔಷಧಿ ಮತ್ತು ಆರೊಮ್ಯಾಟಿಕ್ ಸಸ್ಯಗಳು ಮುಂತಾದ ಇತರ ಪ್ರಮುಖ ಬೆಳೆಗಳೊಂದಿಗೆ ವ್ಯವಹರಿಸುತ್ತದೆ. ಭಾರತದಲ್ಲಿ, ಬೆಚ್ಚಗಿನ ಮತ್ತು ಬಿಸಿಲಿನ ವಾತಾವರಣವು ವ್ಯಾಪಕವಾದ ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಬೆಳೆಸಲು ಅನುವು ಮಾಡಿಕೊಡುತ್ತದೆ. ಹೂವುಗಳು, ಬೀನ್ಸ್, ಈರುಳ್ಳಿ, ಟೊಮ್ಯಾಟೊ, ಕ್ಯಾರೆಟ್, ಮೂಲಂಗಿ, ಕುಂಬಳಕಾಯಿ, ಸೋರೆಕಾಯಿ, ಎಲೆಕೋಸು, ಹೂಕೋಸು ಮತ್ತು ಬೆಚ್ಚಗಿನ ಸಮಶೀತೋಷ್ಣ ಅಕ್ಷಾಂಶದ ಎಲ್ಲಾ ಎಲೆ ತರಕಾರಿಗಳನ್ನು ಭಾರತದಲ್ಲಿ ಬೆಳೆಯಲಾಗುತ್ತದೆ. ವಿವಿಧ ತರಕಾರಿಗಳ ಬೀಜಗಳನ್ನು ವರ್ಷದ ವಿವಿಧ ಅವಧಿಗಳಲ್ಲಿ ಬಿತ್ತಲಾಗುತ್ತದೆ, ಇದು ನಗರ ಕೇಂದ್ರಗಳಿಗೆ ತರಕಾರಿಗಳನ್ನು ನಿರಂತರವಾಗಿ ಪೂರೈಸಲು ಸಹಾಯ ಮಾಡುತ್ತದೆ.