ಐರ್ಲೆಂಡ್ ಗಣರಾಜ್ಯ
ಐರ್ಲೆಂಡ್ ದ್ವೀಪವನ್ನು ಆವರಿಸಿರುವ ಗಣರಾಜ್ಯ / From Wikipedia, the free encyclopedia
ಐರ್ಲೆಂಡ್ ಗಣರಾಜ್ಯ (ಐರಿಷ್:Poblacht na hÉireann) ಎಂದೂ ಕರೆಯಲಾದ ಐರ್ಲೆಂಡ್ [7] (pronounced /ˈaɪərlənd/ ( listen), ಟೆಂಪ್ಲೇಟು:IPA2, ಐರಿಷ್:Éire, pronounced [ˈeːɾʲə] ( listen)),ಐರಿಷ್:Poblacht na hÉireann [8] ವಾಯುವ್ಯ ಯುರೋಪ್ನ ಒಂದು ದೇಶ. ಆಧುನಿಕ ಸಾರ್ವಭೌಮ ದೇಶವು ಐರ್ಲೆಂಡ್ ದ್ವೀಪದ ಸುಮಾರು ಆರನೆಯ ಐದು ಭಾಗದಷ್ಟಿದೆ. 1921ರಲ್ಲಿ ಈ ದ್ವೀಪವನ್ನು ಎರಡು ಅಧಿಕಾರ ವ್ಯಾಪ್ತಿಗಳನ್ನಾಗಿ ಇಬ್ಭಾಗ ಮಾಡಲಾಯಿತು.[9] ಈ ದೇಶವು ಈಶಾನ್ಯ ದಿಕ್ಕಿನಲ್ಲಿ ಯುನೈಟೆಡ್ ಕಿಂಗ್ಡಮ್ನ ಭಾಗವಾಗಿರುವ ಉತ್ತರ ಐರ್ಲೆಂಡ್ ಗಡಿಯನ್ನು ಹೊಂದಿದೆ. ಇದರ ಹೊರತುಪಡಿಸಿ, ಪೂರ್ವದಲ್ಲಿ ಅಟ್ಲಾಂಟಿಕ್ ಸಾಗರ, ಐರಿಷ್ ಸಮುದ್ರ, ಅಗ್ನೇಯದಲ್ಲಿ ಸೇಂಟ್ ಜಾರ್ಜ್ಸ್ ಚಾನೆಲ್ ಹಾಗೂ ದಕ್ಷಿಣದಲ್ಲಿ ಸೆಲ್ಟಿಕ್ ಸಮುದ್ರದಿಂದ ಆವರಿಸಿದೆ. ಐರ್ಲೆಂಡ್ ದೇಶವು ಸಂಸದೀಯ ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಗಣರಾಜ್ಯವಾಗಿದೆ.
ಐರ್ಲಂಡ್ Éire | |
---|---|
Anthem: [Amhrán na bhFiann] Error: {{Lang}}: text has italic markup (help) The Soldier's Song | |
Capital | ಡಬ್ಲಿನ್ |
Largest city | ರಾಜಧಾನಿ |
Official languages | Irish, English |
Ethnic groups | 87% Irish 13% Other[1][2] |
Demonym(s) | ಐರಿಶ್ |
Government | Constitutional republic, Parliamentary democracy |
• President | ಮೇರಿ ಮೆಕಲೀಸ್ |
• Taoiseach | Brian Cowen TD |
Legislature | Oireachtas |
• Upper house | Seanad Éireann |
• Lower house | Dáil Éireann |
Independence from the United Kingdom | |
• Declared | 24 April 1916 |
• Ratified | 21 January 1919 |
• Recognised | 6 December 1922 |
• Constitution | 29 December 1937 |
• Became a republic | 18 April 1949 |
Area | |
• Total | 70,273 km2 (27,133 sq mi) (119th) |
• Water (%) | 2.00 |
Population | |
• 2010 estimate | 4,456,000 [3] |
• 2006 census | 4,239,848 (121st) |
• Density | 60.3/km2 (156.2/sq mi) (139th) |
GDP (PPP) | 2009 estimate |
• Total | $175.055 billion[4] |
• Per capita | $39,468[4] |
GDP (nominal) | 2009 estimate |
• Total | $227.781 billion[4] |
• Per capita | $51,356[4] |
HDI (2006) | 0.965[5] Error: Invalid HDI value · 5th |
Currency | Euro (€)[6] (EUR) |
Time zone | UTC+0 (WET) |
• Summer (DST) | UTC+1 (IST (WEST)) |
Driving side | left |
Calling code | 353 |
Internet TLD | .ie[b] |
a. ^ Article 4 of the Constitution of Ireland and Section 2 of the Republic of Ireland Act 1948 – the constitutional name of the state is Ireland; the supplementary legal description is the Republic of Ireland, but is deprecated by the state. b. ^ The .eu domain is also used, as it is shared with other European Union member states. |
ಈ ದೇಶವನ್ನು ಆರಂಭದಲ್ಲಿ ಐರಿಷ್ ಮುಕ್ತ ರಾಷ್ಟ್ರ ಎನ್ನಲಾಗುತ್ತಿತ್ತು. 1922ರಲ್ಲಿ ಬ್ರಿಟಿಷ್ ಕಾಮನ್ವೆಲ್ತ್ಗೆ ಸೇರಿದ ಸ್ವತಂತ್ರ ರಾಷ್ಟ್ರ ಎಂದು ಸ್ಥಾಪಿಸಲಾಯಿತು. ವೆಸ್ಟ್ಮಿಂಸ್ಟರ್ ಶಾಸನ ಹಾಗೂ 1936ರ ಪದತ್ಯಾಗ ಬಿಕ್ಕಟ್ಟುಮೂಲಕ ಐರ್ಲೆಂಡ್ ಇನ್ನಷ್ಟು ಹೆಚ್ಚಿನ ಸಾರ್ವಭೌಮ ಸ್ಥಾನ ಗಳಿಸಿತು.[10]
1937ರಲ್ಲಿ ಹೊಸ ಸಂವಿಧಾನವನ್ನು ಪರಿಚಯಿಸಲಾಯಿತು.[11] ಇದರಲ್ಲಿ ಐರ್ಲೆಂಡ್ನ್ನು ಸಂಪೂರ್ಣ ಸಾರ್ವಭೌಮ ರಾಷ್ಟ್ರವನ್ನಾಗಿ ಘೋಷಿಸಿ, ಸರಳವಾಗಿ 'ಐರ್ಲೆಂಡ್' ಎಂದು ಹೆಸರಿಸಲಾಯಿತು.[12] 1949ರಲ್ಲಿ ಐರ್ಲೆಂಡ್ ಸ್ವತಃ ಗಣರಾಜ್ಯವೆಂಬ ಘೋಷಣೆಮಾಡುವುದರೊಂದಿಗೆ [13] ಯುನೈಟೆಡ್ ಕಿಂಗ್ಡಮ್ನೊಂದಿಗಿನ ಕೊನೆಯ ಕೊಂಡಿ ಕಳಚಿಕೊಂಡಿತು. ವಿಧ್ಯುಕ್ತವಾಗಿ ಬ್ರಿಟಿಷ್ ಕಾಮನ್ವೆಲ್ತ್ ಆಧಿಪತ್ಯದಿಂದ ಕಳಚಿಕೊಂಡಿತು. ಇದರ ಪರಿಣಾಮವಾಗಿ, 1937ರಿಂದಲೂ ಕಾಮನ್ವೆಲ್ತ್ ಸಭೆಗಳಿಗೆ ಹಾಜರಾಗುವುದನ್ನು ಸ್ಥಗಿತಗೊಳಿಸಿದ್ದ[14] ಐರ್ಲೆಂಡ್ ಬ್ರಿಟಿಷ್ ಕಾಮನ್ವೆಲ್ತ್ನಿಂದ ಹೊರಬಂದಿತು.[15]
ಬ್ರಿಟಿಷ್ ಆಳ್ವಿಕೆ ಹಾಗೂ ಸ್ವಾತಂತ್ರ್ಯದ ಆರಂಭಕಾಲದಲ್ಲಿ, ಪಶ್ಚಿಮ ಯುರೋಪ್ನ ಅತಿ ಬಡ ದೇಶಗಳಲ್ಲಿ ಐರ್ಲೆಂಡ್ ಸಹ ಒಂದಾಗಿತ್ತು. ಇದರಿಂದಾಗಿ ಬಹಳಷ್ಟು ಐರಿಷ್ ಜನರು ಬೇರೆ ದೇಶಗಳಿಗೆ ವಲಸೆ ಹೋದರು. ಈ ಕಾಲದಲ್ಲಿ ಹಲವು ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ, ಇದಕ್ಕೆ ತದ್ವಿರುದ್ಧವಾಗಿ, ಐರ್ಲೆಂಡ್ನ ಆರ್ಥಿಕ ಸ್ಥಿತಿ ಚೆನ್ನಾಗಿಯೇ ಇದ್ದು, ಪ್ರಜಾಪ್ರಭುತ್ವವಾಗಿಯೇ ಉಳಿದುಕೊಂಡಿತು. ರಕ್ಷಣಾತ್ಮಕ ನೀತಿಯ ಆರ್ಥಿಕತೆಯು 1950ರ ದಶಕದ ಅಪರಾರ್ಧದಲ್ಲಿ ತೆರೆದುಕೊಂಡು, 1973ರಲ್ಲಿ ಐರ್ಲೆಂಡ್ ಯುರೋಪಿಯನ್ ಆರ್ಥಿಕ ಸಮುದಾಯದ (ಯುರೋಪಿಯನ್ ಒಕ್ಕೂಟ)ಕ್ಕೆ ಸೇರ್ಪಡೆಯಾಯಿತು. ಆರ್ಥಿಕ ಬಿಕ್ಕಟ್ಟಿನ ಪರಿಣಾಮವಾಗಿ, 1980ರ ದಶಕದ ಅಪರಾರ್ಧದಲ್ಲಿ ಐರ್ಲೆಂಡ್ ಭಾರೀ ಪ್ರಮಾಣದ ಆರ್ಥಿಕ ಸುಧಾರಣಾ ಕ್ರಮ ಕೈಗೊಳ್ಳಲಾರಂಭಿಸಿತು. ಇತರೆ ಯುರೋಪಿಯನ್ ಒಕ್ಕೂಟ ದೇಶಗಳಿಗೆ ಹೋಲಿಸಿದರೆ, ಐರ್ಲೆಂಡ್ ಭಾರೀ ಪ್ರಮಾಣದಲ್ಲಿ ತೆರಿಗೆ ಹಾಗೂ ನಿಯಂತ್ರಣಾ ನಿಯಮಾವಳಿಗಳನ್ನು ಕಡಿಮೆಗೊಳಿಸಿತು.[16] 1990ರ ದಶಕದ ಕಾಲಾವಧಿಯಲ್ಲಿ ಐರ್ಲೆಂಡ್ ಆರ್ಥಿಕತೆ ಭಾರಿ ಪ್ರಮಾಣದಲ್ಲಿ ಬೆಳೆಯಿತು. ಈ ಅಭೂತಪುರ್ವ ಆರ್ಥಿಕ ಬೆಳವಣಿಗೆಯ ವಿದ್ಯಮಾನಕ್ಕೆ 'ಸೆಲ್ಟಿಕ್ ಟೈಗರ್' ಎನ್ನಲಾಗಿದೆ.[17] ಆದರೂ, 2007-2010 ಅವಧಿಯ ಆರ್ಥಿಕ ಬಿಕ್ಕಟ್ಟು ಐರಿಷ್ ಆರ್ಥಿಕತೆಯ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರಿತು.
ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF)ಯ ಪ್ರಕಾರ ಐರ್ಲೆಂಡ್ ವಿಶ್ವದಲ್ಲಿ 38ನೆಯ ಆರ್ಥಿಕ ಪ್ರಬಲ ದೇಶವೆಂಬ ಸ್ಥಾನವನ್ನು ಪಡೆದಿದೆ. 2006ರಲ್ಲಿ ಐರ್ಲೆಂಡ್ ಆರನೆಯ ಅತಿ ಹೆಚ್ಚು ತಲಾವಾರು ಒಟ್ಟು ದೇಶೀಯ ಉತ್ಪನ್ನಹೊಂದಿದೆ. (ಖರೀದಿ ಶಕ್ತಿ ಹೋಲಿಕೆಯನ್ನು ಪರಿಗಣಿಸಿದಲ್ಲಿ ಒಂಬತ್ತನೆಯ ಅತಿ ಹೆಚ್ಚು ತಲಾವಾರು).[18][19] ಮಾನವ ಅಭಿವೃದ್ಧಿ ಸೂಚಿಯಲ್ಲಿ ಐರ್ಲೆಂಡ್ ಐದನೆಯ ಸ್ಥಾನದಲ್ಲಿದೆ. ವಿಶ್ವದ ಅತ್ಯುತ್ತಮ ಗುಣಮಟ್ಟದ ಜೀವನವುಳ್ಳ ದೇಶಗಳಲ್ಲಿ ಈ ದೇಶವೂ ಸಹ ಒಂದು. ಇಕಾನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ನ ಜೀವನ ಗುಣಮಟ್ಟ ಸೂಚಿಯಲ್ಲಿ ಐರ್ಲೆಂಡ್ ಅಗ್ರಸ್ಥಾನದಲ್ಲಿದೆ. ಜಾಗತಿಕ ಶಾಂತಿ ಪಟ್ಟಿಯಲ್ಲಿ ಐರ್ಲೆಂಡ್ ಆರನೆಯ ಸ್ಥಾನದಲ್ಲಿ ಹಾಗೂ ಪತ್ರಿಕಾ ಸ್ವಾತಂತ್ರ್ಯದ ವಿಚಾರದಲ್ಲಿ ಮೊದಲ ಸ್ಥಾನದಲ್ಲಿ ಹಾಗೂ ಆರ್ಥಿಕ ಸ್ವಾತಂತ್ರ್ಯದ ವಿಚಾರದಲ್ಲಿ ನಾಲ್ಕನೆಯ ಸ್ಥಾನದಲ್ಲಿದೆ. ಶಿಕ್ಷಣಾ ವ್ಯವಸ್ಥೆ, ರಾಜಕೀಯ ಸ್ವಾತಂತ್ರ್ಯ ಮತ್ತು ನಾಗರಿಕ ಹಕ್ಕುಗಳ ವಿಚಾರದಲ್ಲಿ ಐರ್ಲೆಂಡ್ ಉನ್ನತ ಸ್ಥಾನಗಳಲ್ಲಿದೆ. ವಿಶ್ವದಲ್ಲಿ ರಾಜಕೀಯವಾಗಿ ಅತಿ ಸ್ಥಿರ ದೇಶಗಳಲ್ಲಿ ಒಂದಾಗಿರುವ ಐರ್ಲೆಂಡ್, ವಿಫಲ ರಾಷ್ಟ್ರಗಳ ಸೂಚಿಯಲ್ಲಿ ಐರ್ಲೆಂಡ್ ಕೆಳಗಿನಿಂದ ಆರನೆಯ ಸ್ಥಾನದಲ್ಲಿದೆ. ಐರ್ಲೆಂಡ್ ಯುರೋಪಿಯನ್ ಒಕ್ಕೂಟ, OECD ಹಾಗೂ ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರವಾಗಿದೆ.