ಮುಂಗುಸಿ
From Wikipedia, the free encyclopedia
ಮುಂಗುಸಿ (ಹರ್ಪೆಸ್ಟಿಡೀ) ಎಂಬುದು ಸಣ್ಣಗಾತ್ರದ ಮಾಂಸಾಹಾರಿ (ಕಾರ್ನಿವೊರಾ) ಗಳ 33 ಸಸ್ತನಿ ಜಾತಿಗಳುಳ್ಳ ಕುಟುಂಬ. ಮುಂಗುಸಿಗಳು ಯುರೇಷ್ಯಾ ಮತ್ತು ಆಫ್ರಿಕಾದ ಪ್ರಮುಖ ಪ್ರಾದೇಶಿಕ ನೆಲೆಯಲ್ಲಿ ಕಾಣಸಿಗುತ್ತವೆ. ಗ್ಯಾಲಿಡಿಯಿನೀ (Galidiinae) ಉಪಕುಟುಂಬದ ಹೆಚ್ಚುವರಿ ಜಾತಿಯ ಮುಂಗುಸಿಗಳು ಮಡಗಾಸ್ಕರ್ನಲ್ಲಿವೆ. ಇವನ್ನು ಮುಂಚೆ ಇದೇ ಕುಟುಂಬದೊಂದಿಗೆ ಸೇರಿಸಲಾಗಿತ್ತು. ಇವನ್ನು ಸಹ ಆಗಾಗ್ಗೆ 'ಮುಂಗುಸಿಗಳು' ಎಂದು ಉಲ್ಲೇಖಿಸಲಾಗುತ್ತದೆ. ತಳೀಯ ಸಾಕ್ಷ್ಯಗಳ ಪ್ರಕಾರ, ಗೆಲಿಡೀನೆ ಉಪಕುಟುಂಬದ ಮುಂಗುಸಿಗಳು, ಯುಪ್ಲೆರಿಡೀ (Eupleridae) ಕುಟುಂಬದ ಇತರೆ ಮಡಗಾಸ್ಕರ್ ಮಾಂಸಾಹಾರಿಗಳೊಂದಿಗೆ ನಿಕಟ ಸಂಬಂಧ ಹೊಂದಿವೆ. ಈ ಕುಟುಂಬವು ಮುಂಗುಸಿಗಳಿಗೆ ಬದುಕುಳಿದಿರುವ ಅತಿ ನಿಕಟ ಕುಟುಂಬ ಎನ್ನಲಾಗಿದೆ.
Quick Facts ಮುಂಗುಸಿಗಳು, Scientific classification ...
ಮುಂಗುಸಿಗಳು[1] | |
---|---|
ಸಾಮಾನ್ಯ ಕುಬ್ಜ ಮುಂಗುಸಿ, | |
Scientific classification | |
ಸಾಮ್ರಾಜ್ಯ: | |
ವಿಭಾಗ: | |
ವರ್ಗ: | |
ಗಣ: | ಕಾರ್ನಿವೋರಾ |
ಉಪಗಣ: | ಫ಼ೆಲಿಫ಼ಾರ್ಮಿಯಾ |
ಕುಟುಂಬ: | ಹರ್ಪೆಸ್ಟಿಡೀ Bonaparte, 1845 |
Synonyms | |
|
Close