ಬರ್ಮಿಂಗ್ಹ್ಯಾಮ್
From Wikipedia, the free encyclopedia
ಬರ್ಮಿಂಗ್ಹ್ಯಾಮ್ (pronounced /ˈbɜːmɪŋəm/ ( listen), BUR-ming-əm, ಸ್ಥಳೀಯವಾಗಿ /ˈbɝːmɪŋɡəm/ BIIR-ming-gəm) ಇಂಗ್ಲೆಂಡ್ನ ವೆಸ್ಟ್ ಮಿಡ್ಲೆಂಡ್ಸ್ ಕೌಂಟಿಯಲ್ಲಿರುವ ನಗರ ಹಾಗೂ ಮಹಾನಗರ ನಗರವಿಭಾಗವಾಗಿದೆ.
Birmingham | |
---|---|
City and Metropolitan borough | |
Nickname(s): "Brum", "Brummagem", "Second City", "City of a thousand trades", "Workshop of the World" | |
Motto: Forward | |
Sovereign state | United Kingdom |
Constituent country | ಇಂಗ್ಲೆಂಡ್ |
Region | West Midlands |
Ceremonial county | West Midlands |
Admin HQ | The Council House |
Founded | 7th century |
Municipal borough | 1838 |
City | 1889 |
Government | |
• Type | Metropolitan borough |
• Body | Birmingham City Council |
• Lord Mayor | Michael Wilkes |
• Deputy Lord Mayor | Chauhdry Abdul Rashid |
• Council Leader | Mike Whitby (C) |
• Council Control | Conservative / Liberal Democrat Progressive Partnership |
Area | |
• Total | ೨೬೭.೭೭ km೨ (೧೦೩.೩೯ sq mi) |
Elevation | ೧೪೦ m (೪೬೦ ft) |
Population (2008 est.) | |
• Total |
|
• Density | ೩,೭೩೯/km೨ (೯,೬೮೦/sq mi) |
• Conurbation | ೨೨,೮೪,೦೯೩ |
• Ethnicity (2007 estimates[1]) | ೬೬.೭% White (೬೨.೧% White British) ೨೧.೦% South Asian ೬.೭% Black ೩.೨% Mixed Race ೧.೨% Chinese ೧.೨% Other |
Time zone | UTC+0 (Greenwich Mean Time) |
• Summer (DST) | UTC+1 (British Summer Time) |
Postcode | B |
Area code | 0121 |
ISO 3166 code | GB-BIR |
ONS code | 00CN |
OS grid reference | SP066868 |
NUTS 3 | UKG31 |
Website | birmingham.gov.uk |
ಇಸವಿ 2008ರಲ್ಲಿನ ಅಂದಾಜಿನ ಪ್ರಕಾರ, 1,015,800ರಷ್ಟು ಜನಸಂಖ್ಯೆ ಹೊಂದಿರುವ ಬರ್ಮಿಂಗ್ಹ್ಯಾಮ್, ಲಂಡನ್ ಹೊರತುಪಡಿಸಿ ಅತಿಹೆಚ್ಚು ಜನಸಂಖ್ಯೆಯುಳ್ಳ ಬ್ರಿಟಿಷ್ ನಗರವಾಗಿದೆ.[2] ಈ ನಗರವು ವೆಸ್ಟ್ ಮಿಡ್ಲೆಂಡ್ಸ್ ನಗರಕೂಟದ ಮಧ್ಯಭಾಗದಲ್ಲಿದೆ. ಇಸವಿ 2001ರ ಜನಗಣತಿಯ ಪ್ರಕಾರ 2,284,093ರಷ್ಟು ಜನಸಂಖ್ಯೆ ಹೊಂದಿರುವ ಈ ನಗರವು ಯುನೈಟೆಡ್ ಕಿಂಗ್ಡಮ್ನಲ್ಲೇ ಎರಡನೆಯ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ ಪ್ರದೇಶವಾಗಿದೆ.[3] 3,683,000ದಷ್ಟು ಜನಸಂಖ್ಯೆ ಹೊಂದಿರುವ ಬರ್ಮಿಂಗ್ಹ್ಯಾಮ್ನ ಮಹಾನಗರ ಕ್ಷೇತ್ರವು, ಯುನೈಟೆಡ್ ಕಿಂಗ್ಡಮ್ನ ಎರಡನೆಯ ಅತಿ ಹೆಚ್ಚು ಜನಸಂಖ್ಯೆಯುಳ್ಳದ್ದಾಗಿದೆ. ಈ ಮಹಾನಗರವು ಸುತ್ತಮುತ್ತಲ ಪಟ್ಟಣಗಳನ್ನು ವ್ಯಾಪಿಸಿಕೊಂಡು, ಪ್ರಯಾಣದ ಮೂಲಕ ಅವುಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ.[4]
ಬರ್ಮಿಂಗ್ಹ್ಯಾಮ್ ಇಂಗ್ಲೆಂಡ್ನಲ್ಲಿ ಸಂಭವಿಸಿದ ಕೈಗಾರಿಕಾ ಕ್ರಾಂತಿಯ ಕೇಂದ್ರಬಿಂದುವಾಗಿತ್ತು. ಇದರ ಫಲವಾಗಿ, ಬರ್ಮಿಂಗ್ಹ್ಯಾಮ್ ನಗರವನ್ನು 'ವಿಶ್ವದ ಕಾರ್ಯಾಗಾರ' ಅಥವಾ 'ಸಾವಿರ ವಾಣಿಜ್ಯಗಳ ನಗರ' ಎನ್ನಲಾಗಿದೆ.[5] ಬರ್ಮಿಂಗ್ಹ್ಯಾಮ್ನ ಕೈಗಾರಿಕಾ ಪ್ರಾಮುಖ್ಯತೆಯು ಕಡಿಮೆಯಾಗಿದೆಯಾದರೂ, ಅದು ರಾಷ್ಟ್ರೀಯ ಮಟ್ಟದ ವಾಣಿಜ್ಯ ಕೇಂದ್ರವಾಗಿ ಹೊರಹೊಮ್ಮಿದೆ. ವಾಣಿಜ್ಯ ಆರಂಭಿಸಲು ಯುನೈಟೆಡ್ ಕಿಂಗ್ಡಮ್ನಲ್ಲಿ ಎರಡನೆಯ ಅತ್ಯುತ್ತಮ ಸ್ಥಳ ಎನ್ನಲಾಗಿದೆ.[6] ಬರ್ಮಿಂಗ್ಹ್ಯಾಮ್ ಮಹಾಸಭೆಗಳು, ಸಮಾರಂಭಗಳು ಹಾಗೂ ನೆಲೆಗೊಂಡಿರುವ ಹೈಟೆಕ್, ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳ ಆಗರವಾಗಿದೆ. ಇಲ್ಲಿ ಮೂರು ವಿಶ್ವವಿದ್ಯಾನಿಲಯಗಳಿರುವುದರಿಂದ ಇದಕ್ಕೆ ಪೂರಕವಾಗಿದೆ. ವಿದೇಶೀ ಪ್ರವಾಸಿಗರ ದೃಷ್ಟಿಯಿಂದ ಬರ್ಮಿಂಗ್ಹ್ಯಾಮ್ UKಯಲ್ಲಿ ನಾಲ್ಕನೆ ಅತಿ ಹೆಚ್ಚು ಸಂದರ್ಶಿತ ನಗರವಾಗಿದೆ.[7] ಈ ನಗರವು UKಯಲ್ಲಿ ಎರಡನೆಯ ಅತಿ ದೊಡ್ಡ ನಗರದ ಆರ್ಥಿಕತೆಯಾಗಿದೆ.[8] ಇದನ್ನು ಆಗಾಗ್ಗೆ ಎರಡನೆಯ ನಗರ (Second City) ಎನ್ನಲಾಗಿದೆ.
ಮರ್ಸರ್ ಇಂಡೆಕ್ಸ್ ಆಫ್ ವರ್ಲ್ಡ್ವೈಡ್ ಸ್ಟಾಂಡರ್ಡ್ಸ್ ಆಫ್ ಲಿವಿಂಗ್ ಸಮೀಕ್ಷೆಯ ಪ್ರಕಾರ, 2010ರಲ್ಲಿ, ಬರ್ಮಿಂಗ್ಹ್ಯಾಮ್ ವಿಶ್ವದಲ್ಲಿ ವಾಸಿಸಲು ಯೋಗ್ಯ ನಗರಗಳ ಪಟ್ಟಿಯಲ್ಲಿ 55ನೆಯ ಸ್ಥಾನ ಗಳಿಸಿತು.[9] ಬೃಹತ್ ನಗರ ಯೋಜನೆ (Big City Plan) ಎಂಬುದು ದೊಡ್ಡ ಪುನರಾಭಿವೃದ್ಧಿ ಯೋಜನೆಯಾಗಿದೆ. ಇದು ನಗರ ಕೇಂದ್ರದಲ್ಲಿ ನಡೆಯುತ್ತಿದೆ. ಇಪ್ಪತ್ತು ವರ್ಷಗಳೊಳಗೆ ಬರ್ಮಿಂಗ್ಹ್ಯಾಮ್ನ್ನು ವಿಶ್ವದಲ್ಲಿನ 20 ವಾಸಿಸಲು ಯೋಗ್ಯ ನಗರಗಳ ಪಟ್ಟಿಗೆ ಸೇರಿಸುವುದು ಇದರ ಧ್ಯೇಯವಾಗಿದೆ.[10] ಬರ್ಮಿಂಗ್ಹ್ಯಾಮ್ನ ಜನರನ್ನು ಬ್ರಮ್ಮೀಸ್ ಎನ್ನಲಾಗುತ್ತದೆ. ನಗರದ ಅಡ್ಡಹೆಸರು 'ಬ್ರಮ್'ನಿಂದ ಬ್ರಮ್ಮೀಸ್ ಪದವು ಉದ್ಭವವಾಯಿತು. ನಗರದ ಸ್ಥಳೀಯ ಭಾಷೆ ಬ್ರಮಾಜೆಮ್ ಎಂಬುದರಿಂದ ಇದು ಉದ್ಭವಿಸಿರಬಹುದು.[11] ಸರದಿಯಲ್ಲಿ ಇದು ನಗರದ ಇನ್ನೂ ಹಿಂದಿನಕಾಲದ ಹೆಸರಾದ 'ಬ್ರೊಮ್ವಿಕ್ಹ್ಯಾಮ್' ಇಂದ ಪಡೆದುಕೊಳ್ಳಲಾಗಿದೆ.[12] ಬ್ರಮ್ಮೀ ಸ್ಥಳೀಯ ಭಾಷೆ ತನ್ನದೇ ಆದ ಉಚ್ಚಾರಣಾ ಶೈಲಿಯಿದೆ. ಇದು ಪಕ್ಕದ ಸ್ಥಳ ಬ್ಲ್ಯಾಕ್ ಕಂಟ್ರಿಯ ಭಾಷೆ ಮತ್ತು ಉಚ್ಚಾರಣಾ ಶೈಲಿಗಿಂತಲೂ ಭಿನ್ನವಾಗಿದೆ.