ಪರಿಧಮನಿಯ ರೋಗ
From Wikipedia, the free encyclopedia
ಪರಿಧಮನಿಯ ರೋಗವು (ಕೊರೋನರಿ ಆರ್ಟರಿ ಡಿಸೀಸ್) ಹೃದಯಕ್ಕೆ ಸಂಬಂಧಿಸಿದ ರೋಗ. ಇದನ್ನು ಪರಿಧಮನಿಯ ಹೃದಯರೋಗ ಎಂದೂ ಕರೆಯಲಾಗುತ್ತದೆ.[1] ಈ ಕಾಯಿಲೆಯಲ್ಲಿ ಹೃದಯದ ಅಪಧಮನಿಗಳಲ್ಲಿ ಪ್ಲಾಕ್ ಅಥವಾ ಕೊಬ್ಬಿನ ಶೇಖರಣೆಯಿಂದ ಹೃದಯದ ಸ್ನಾಯುಗಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಇದರಿಂದ ಹೃದಯಾಘಾತ ಉಂಟಾಗುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳಲ್ಲಿ ಸಾಮಾನ್ಯವಾಗಿದೆ.[2][3] ಸಾಮಾನ್ಯ ಲಕ್ಷಣವೆಂದರೆ ಎದೆ ನೋವು ಅಥವಾ ಅಸೌಖ್ಯ. ಇದು ಭುಜ, ತೋಳು, ಬೆನ್ನು, ಕುತ್ತಿಗೆ ಅಥವಾ ದವಡೆಯೊಳಗೆ ಚಲಿಸಬಹುದು. ಕೆಲವೊಮ್ಮೆ ಇದು ಎದೆಯುರಿಯಾಗಿ ಕಾಣಿಸಬಹುದು.[4] ವ್ಯಾಯಾಮ ಅಥವಾ ಭಾವನಾತ್ಮಕ ಒತ್ತಡ ಸಂಭವಿಸುವ ಸಮಯದಲ್ಲಿ ಹೆಚ್ಚು ಕಡಿಮೆ ಕೆಲವು ನಿಮಿಷಗಳ ಒಳಗೆ ನೋವು ಎದೆಯುರಿ ಕಾಣಿಸಬಹುದು. ಮತ್ತು ಸ್ವಲ್ಪ ವಿಶ್ರಾಂತಿಯ ನಂತರ ಸುಧಾರಣೆ ಕಾಣುವುದು. ಉಸಿರಾಟದ ತೊಂದರೆ ಸಂಭವಿಸಬಹುದು ಮತ್ತು ಕೆಲವೊಮ್ಮೆ ಯಾವುದೇ ರೋಗಲಕ್ಷಣಗಳು ಕಾಣದಿರಬಹುದು. ಮೊದಲ ರೋಗ ಚಿಹ್ನೆ ಕೆಲವೊಮ್ಮೆ ಹೃದಯಾಘಾತವೇ ಆಗಬಹುದು. ಇತರ ಲಕ್ಷಣಗಳಲ್ಲಿ ಹೃದಯಸ್ತಂಭನ ಅಥವಾ ಅನಿಯಮಿತ ಎದೆಬಡಿತಗಳು ಸೇರಿವೆ.[5][6]