ನವಗ್ರಹ ಪೂಜೆ, ಹೋಮ
From Wikipedia, the free encyclopedia
ನವಗ್ರಹ ಪೂಜೆ, ಹೋಮ - ಸೂರ್ಯ ಚಂದ್ರ ಮಂಗಳ ಬುಧ ಗುರು ಶುಕ್ರ ಶನಿ ರಾಹು ಕೇತು-ಈ ಒಂಬತ್ತು ಗ್ರಹಗಳಿಂದ ಸಂಭವಿಸಬಹುದಾದ ಅನಿಷ್ಟಫಲ ಪರಿಹಾರವಾಗಲು ಅವನ್ನು ಪೂಜಿಸಬೇಕೆಂದೂ ಅವನ್ನು ಉದ್ದೇಶಿಸಿ ಹೋಮ ಮಾಡಬೇಕೆಂದೂ ಶಾಸ್ತ್ರದಲ್ಲಿ ತಿಳಿಸಿವೆ. ಇಂದಿಗೂ ಪೂಜೆ ಹೋಮಗಳನ್ನು ನಡೆಸುವುದು ರೂಢಿಯಲ್ಲಿದೆ.[1]
ಮೊದಲು ಆಯಾ ಗ್ರಹಗಳಿಗೆ ತಿಳಿಸಿರುವಂತೆ ಮಂಡಲಗಳನ್ನು ರಚಿಸಿ ಅವುಗಳ ಮೇಲೆ ಆಯಾ ಗ್ರಹಗಳ ಪ್ರತಿಮೆಗಳನ್ನಾಗಲಿ ಧ್ಯಾನವನ್ನಾಗಲೀ ಇಟ್ಟು ಧ್ಯಾನ ಆವಾಹನಾದಿ ಉಪಚಾರಗಳಿಂದ ಪೂಜಿಸಬೇಕು.[2] ಆಯಾ ಗ್ರಹದ ಪೂಜೆ ಆದಮೇಲೆ ಅದೇ ಗ್ರಹದ ಅಧಿದೇವತೆ ಮತ್ತು ಪ್ರತ್ಯಧಿದೇವತೆಗಳನ್ನು ಆವಾಹನೆ ಮಾಡಿ ಪೂಜಿಸಬೇಕು.[3]