ಬುಧ
ಸೌರಮಂಡಲದ ಅತಿ ಸಣ್ಣ ಗ್ರಹ / From Wikipedia, the free encyclopedia
ಬುಧ - ಸೂರ್ಯನಿಗೆ ಅತ್ಯಂತ ಸಮೀಪವಾದ ಮತ್ತು ಸೌರಮಂಡಲದಲ್ಲಿ ಅತಿ ಸಣ್ಣದಾದ ಗ್ರಹವಾದ ಬುಧವು ಸೂರ್ಯನ ಸುತ್ತ ಪ್ರತಿ ೮೮ ದಿನಗಳಿಗೊಮ್ಮೆ ಪ್ರದಕ್ಷಿಣೆ ಹಾಕುತ್ತದೆ. ಸಾಮೀಪ್ಯತೆಯ ಕಾರಣದಿಂದಾಗಿ ಸೂರ್ಯನ ಪ್ರಖರತೆಯು ಬುಧವನ್ನು ಸ್ಪಷ್ಟವಾಗಿ ಕಾಣದಿರುವಂತೆ ಮಾಡುತ್ತದೆ. ಬುಧದ ಗೋಚರ ಪ್ರಮಾಣವು −೨.೦ ರಿಂದ ೫.೫ ವರೆಗೆ ಇದ್ದರೂ, ನಸುಕಿನಲ್ಲಿ ಮಾತ್ರ ಇದನ್ನು ಬರಿಗಣ್ಣಿನಿಂದ ನೋಡಬಹುದು. ಬುಧಗ್ರಹದ ಬಗ್ಗೆ ಇದುವರೆಗೂ ಬಹಳಷ್ಟು ತಿಳಿದುಬಂದಿಲ್ಲ: ಬುಧವನ್ನು ಸಮೀಪಿಸಿದ ಒಂದೇ ಒಂದು ನೌಕೆಯೆಂದರೆ ೧೯೭೪ ಮತ್ತು ೧೯೭೫ ರಲ್ಲಿ ಬುಧದ ಮೇಲ್ಮೈನ ೪೦-೫೦% ಭಾಗದ ನಕ್ಷೆಯನ್ನು ತಯಾರಿಸಿದ ಮ್ಯಾರಿನರ್ ೧೦.
ಕಕ್ಷೆಯ ಗುಣಗಳು | ||||||||||
---|---|---|---|---|---|---|---|---|---|---|
ದೀರ್ಘಾರ್ಧ ಅಕ್ಷ | ೫೭,೯೦೯,೧೭೬ ಕಿ.ಮೀ. ೦.೩೮೭ ೦೯೮ ೯೩ ಖ.ಮಾ | |||||||||
ಕಕ್ಷೆಯ ಪರಿಧಿ | ೩೬೦,೦೦೦,೦೦೦ ಕಿ.ಮೀ. (೨.೪೦೬ ಖ.ಮಾ.) | |||||||||
ಕಕ್ಷೀಯ ಕೇಂದ್ರ ಚ್ಯುತಿ | ೦.೨೦೫ ೬೩೦ ೬೯ | |||||||||
ಪುರರವಿ | ೪೬,೦೦೧,೨೭೨ ಕಿ.ಮೀ. ೦.೩೦೭ ೪೯೯ ೫೧ ಖ.ಮಾ. | |||||||||
ಅಪರವಿ | ೬೯,೮೧೭,೦೭೯ ಕಿ.ಮೀ. ೦.೪೬೬ ೬೯೮ ೩೫ ಖ.ಮಾ. | |||||||||
ಕಕ್ಷೀಯ ಪರಿಭ್ರಮಣ ಕಾಲ | ೮೭.೯೬೯ ೩೪ ದಿನ (೦.೨೪೦ ೮೪೬ ೯ a) | |||||||||
ಯುತಿ ಅವಧಿ | ೧೧೫.೮೭೭೬ ದಿನಗಳು | |||||||||
ಸರಾಸರಿ ಕಕ್ಷಾ ವೇಗ | ೪೭.೩೬ km/s | |||||||||
ಗರಿಷ್ಠ ಕಕ್ಷಾ ವೇಗ | ೫೮.೯೮ km/s | |||||||||
ಕನಿಷ್ಠ ಕಕ್ಷಾ ವೇಗ | ೩೮.೮೬ km/s | |||||||||
ಓರೆ | ೭.೦೦೪ ೮೭° (ಸೂರ್ಯನ ಸಮಭಾಜಕ ರೇಖೆಗೆ ೩.೩೮°) | |||||||||
ಆರೋಹಣ ಸಂಪಾತದ ರೇಖಾಂಶ | ೪೮.೩೩೧ ೬೭° | |||||||||
ಪುರರವಿಯ ಕೋನಭಾಗ | ೨೯.೧೨೪ ೭೮° | |||||||||
ನೈಸರ್ಗಿಕ ಉಪಗ್ರಹಗಳ ಸಂಖ್ಯೆ | ೦ | |||||||||
ಭೌತಿಕ ಗುಣಲಕ್ಷಣಗಳು | ||||||||||
ಸಮಭಾಜಕ ರೇಖೆಯ ವ್ಯಾಸ | ೪೮೭೯.೪ ಕಿ.ಮೀ. (ಭೂಮಿಯ ೩೮.೩%) | |||||||||
ಮೇಲ್ಮೈ ವಿಸ್ತೀರ್ಣ | ೭.೫×೧೦೭ ಕಿ.ಮೀ.೨ (ಭೂಮಿಯ ೧೪.೭%) | |||||||||
ಗಾತ್ರ | ೬.೦೮೩×೧೦೧೦ ಕಿ.ಮೀ.೨ (ಭೂಮಿಯ ೫.೬%) | |||||||||
ದ್ರವ್ಯರಾಶಿ | ೩.೩೦೨×೧೦೨೩ ಕಿ.ಗ್ರಾಂ. (ಭೂಮಿಯ ೫.೫%) | |||||||||
ಸರಾಸರಿ ಸಾಂದ್ರತೆ | ೫.೪೨೭ ಗ್ರಾಂ/ಸೆಂ.ಮೀ೩ | |||||||||
ಸಮಭಾಜಕದ ಬಳಿ ಗುರುತ್ವ | ೩.೭೦೧ ಮೀ./ಕ್ಷ೨ (೦.೩೭೭ g) | |||||||||
ಮುಕ್ತಿ ವೇಗ | ೪.೪೩೫ ಕಿ.ಮೀ./ಪ್ರತಿ ಕ್ಷಣ | |||||||||
ಅಕ್ಷೀಯ ಪರಿಭ್ರಮಣ ಕಾಲ | ೫೮.೬೪೬೨ d (೫೮ ದಿನ ೧೫.೫೦೮೮ ಘಂ) | |||||||||
ಅಕ್ಷೀಯ ಪರಿಭ್ರಮಣ ವೇಗ | ೧೦.೮೯೨ ಕಿ.ಮೀ./ಘಂ. (ಸಮಭಾಜಕದಲ್ಲಿ) | |||||||||
ಅಕ್ಷದ ಓರೆ | ~೦.೦೧° | |||||||||
ಉತ್ತರ ಧ್ರುವದ ವಿಷುವದಂಶ |
೨೮೧.೦೧° (೧೮ ಘಂ ೪೪ ನಿ ೨ ಕ್ಷ) 1 | |||||||||
ಕ್ರಾಂತಿ | ೬೧.೪೫° | |||||||||
ಪ್ರತಿಫಲನಾಂಶ | ೦.೧೦-೦.೧೨ | |||||||||
ಮೇಲ್ಮೈ ತಾಪಮಾನ (೦°ಉ,೦°ಪ) (೮೫°ಉ,೦°ಪ) |
| |||||||||
Adjective | Mercurian | |||||||||
ವಾಯುಮಂಡಲದ ಗುಣಲಕ್ಷಣಗಳು | ||||||||||
ವಾತಾವರಣದ ಒತ್ತಡ | trace | |||||||||
ಪೊಟಾಷಿಯಂ | ೩೧.೭% | |||||||||
ಸೋಡಿಯಂ | ೨೪.೯% | |||||||||
ಮೂಲ ಆಮ್ಲಜನಕ | ೯.೫% | |||||||||
ಆರ್ಗಾನ್ | ೭.೦% | |||||||||
ಹೀಲಿಯಂ | ೫.೯% | |||||||||
ಆಮ್ಲಜನಕ | ೫.೬% | |||||||||
ಸಾರಜನಕ | ೫.೨% | |||||||||
ಇಂಗಾಲದ ಡೈ-ಆಕ್ಸೈಡ್ | ೩.೬% | |||||||||
ನೀರು | ೩.೪% | |||||||||
ಜಲಜನಕ | ೩.೨% | |||||||||
ಅಪ್ಪಳಿಕೆ ಕುಳಿಗಳಿರುವ ಕಾರಣ, ಬುಧವು ಹೊರಗಿನಿಂದ ನೋಡುವುದಕ್ಕೆ ನಮ್ಮ ಚಂದ್ರನಂತೆಯೇ ಇದೆ. ಬುಧಕ್ಕೆ ಯಾವುದೇ ನೈಸರ್ಗಿಕ ಉಪಗ್ರಹಗಳಿಲ್ಲ ಮತ್ತು ಗಮನಾರ್ಹವಾದ ವಾಯುಮಂಡಲವೂ ಇಲ್ಲ. ಈ ಗ್ರಹದ ಒಳಭಾಗದಲ್ಲಿ ಕಬ್ಬಿಣದ ದೊಡ್ಡದೊಂದು ವಲಯವಿದೆ. ಭೂಮಿಯ ಕಾಂತಕ್ಷೇತ್ರದ ೧%ರಷ್ಟು ಶಕ್ತಿಯುಳ್ಳ ಕಾಂತಕ್ಷೇತ್ರವನ್ನು ಈ ಕಬ್ಬಿಣದ ವಲಯವು ಬುಧದ ಮೇಲೆ ಉಂಟುಮಾಡುತ್ತದೆ. ಬುಧದ ಮೇಲ್ಮೈ ತಾಪಮಾನವು -೧೮೦ ರಿಂದ ೪೩೦°ಸೆ. ವ್ಯಾಪ್ತಿಯಲ್ಲಿರುತ್ತದೆ. ಸೂರ್ಯನಿಗೆ ನೇರವಾಗಿ ಕೆಳಗಿರುವ ಬಿಂದುವು (subsolar point) ಅತ್ಯಂತ ಬಿಸಿಯಾಗಿರುತ್ತದೆ ಹಾಗೂ ಧ್ರುವಗಳ ಬಳಿಯಿರುವ ಕುಳಿಗಳ ಕೆಳಭಾಗಗಳು ಬೇರೆಲ್ಲೆಡೆಗಳಿಗಿಂತ ತಣ್ಣಗಿರುತ್ತವೆ.
ಪ್ರಾಚೀನ ರೋಮನ್ನರು ವೇಗವಾಗಿ ಚಲಿಸುವ ರೋಮನ್ ದೇವತೆಯಾದ ಮರ್ಕ್ಯೂರಿಯ ಆಧಾರದ ಮೇಲೆ ಈ ಗ್ರಹಕ್ಕೆ ಹೆಸರಿಟ್ಟರು (ಬಹುಶಃ ಬುಧವು ಸೂರ್ಯನ ಸುತ್ತ ವೇಗವಾಗಿ ಚಲಿಸುವ ಕಾರಣದಿಂದಾಗಿ). ಕ್ರಿ.ಪೂ. ೫ನೇ ಶತಮಾನಕ್ಕೆ ಮುನ್ನ ಗ್ರೀಕ್ ಖಗೋಳಶಾಸ್ತ್ರಜ್ಞರು ಬುಧವನ್ನು ಎರಡು ಪ್ರತ್ಯೇಕವಾದ ಕಾಯಗಳೆಂದು ನಂಬಿದ್ದರು. ಇವುಗಳಲ್ಲಿ ಒಂದು ಕಾಯವು ಸೂರ್ಯೋದಯದ ಹೊತ್ತಿನಲ್ಲಿ ಮಾತ್ರ ಕಾಣಿಸುತ್ತದೆ ಮತ್ತು ಇನ್ನೊಂದು ಸೂರ್ಯಾಸ್ತದ ಹೊತ್ತಿನಲ್ಲಿ ಮಾತ್ರ ಕಾಣಿಸುತ್ತದೆ ಎಂದು ಅವರ ನಂಬಿಕೆಯಾಗಿತ್ತು. ಭಾರತದಲ್ಲಿ ಈ ಗ್ರಹಕ್ಕೆ ಚಂದ್ರನ ಮಗನಾದ ಬುಧನ ಹೆಸರನ್ನು ಇಡಲಾಗಿದೆ. ಚೀನಾ, ಕೊರಿಯಾ, ಜಪಾನ್ ಮತ್ತು ವಿಯತ್ನಾಮ್ ಸಂಸ್ಕೃತಿಗಳಲ್ಲಿ ಬುಧವನ್ನು ಜಲ ನಕ್ಷತ್ರ ಎಂದು ಕರೆಯಲಾಗುತ್ತದೆ. ಪಂಚಭೂತಗಳ ಆಧಾರದ ಮೇಲೆ ಈ ಹೆಸರನ್ನು ಇಡಲಾಯಿತು ಎನ್ನಲಾಗಿದೆ. ಯೆಹೂದಿಗಳು ಇದನ್ನು ಬಿಸಿಕಾಯದ ನಕ್ಷತ್ರವೆಂದು ಕರೆದರು (ಇಲ್ಲಿ ಬಿಸಿಕಾಯವು ಸೂರ್ಯನನ್ನು ಸೂಚಿಸುತ್ತದೆ).