ಎಡ್ಮಂಡ್ ಹ್ಯಾಲೆ
ಗಣಿತಜ್ಞ / From Wikipedia, the free encyclopedia
ಎಡ್ಮಂಡ್ ಹ್ಯಾಲೆ ಓರ್ವ ಖಗೋಳಶಾಸ್ತ್ರಜ್ಞ, ಭೂಭೌತವಿಜ್ಞಾನಿ, ಗಣಿತಶಾಸ್ತ್ರಜ್ಞ, ಪವನಶಾಸ್ತ್ರಜ್ಞ ಮತ್ತು ಭೌತವಿಜ್ಞಾನಿ. ಇವರು ೧೭೨೦ ರಲ್ಲಿ ಜಾನ್ ಫ಼್ಲ್ಯಾಮ್ಸ್ಟೀಡ್ ಉತ್ತರಾಧಿಕಾರಿಯಾಗಿ ಬ್ರಿಟನ್ನಲ್ಲಿ ಎರಡನೇ ಅಸ್ಟ್ರಾನಾಮರ್ ರಾಯಲ್ ಆಗಿದ್ದರು. ಇವರು ಸೇಂಟ್ ಹೆಲೆನಾದಲ್ಲಿ ನಿರ್ಮಿಸಿದ ವೀಕ್ಷಣಾಲಯದಿಂದ, ಸೂರ್ಯನ ಅಡ್ದಲಾಗಿ ಬುಧದ ಸಂಕ್ರಮಣವನ್ನು ದಾಖಲಿಸಬಹುದೆಂದು ಅರಿತುಕೊಂಡರು. ಇವರು ತಮ್ಮ ವೀಕ್ಷಣೆಗಳನ್ನು ಸಮಕಾಲೀನ ನಕ್ಷತ್ರ ನಕ್ಷೆಗಳನ್ನು ವಿಸ್ತರಿಸಲು ಬಳಸಿದರು. ಇವರು ಐಸಾಕ್ ನ್ಯೂಟನ್ರ ಚಲನೆಯ ನಿಯಮಗಳನ್ನು ಸಾಬೀತುಪಡಿಸುವ ದೃಷ್ಟಿಯಿಂದ ಸಹಾಯ ಮಾಡಿದರು ಮತ್ತು ನ್ಯೂಟನ್ರ ಪ್ರಭಾವಶಾಲಿ ಫಿಲೋಸಫಿಯ ನ್ಯಾಚುರಲಿಸ್ ಪ್ರಿನ್ಸಿಪಿಯಾ ಮ್ಯಾಥೆಮೆಟಿಕಾದ ಪ್ರಕಟಣೆಗೆ ಹಣ ನೀಡಿದರು. ತಮ್ಮ ೧೬೮೨ ರ ವೀಕ್ಷಣೆಯಿಂದ, ೧೭೦೫ರ ಪುಸ್ತಕ Synopsis of the Astronomy of Comets ನ ಸಾರಾಂಶದಲ್ಲಿ ಹ್ಯಾಲಿ ಕಾಮೆಟ್ನ ಆವರ್ತಕತೆಯನ್ನು ಲೆಕ್ಕಾಚಾರ ಮಾಡಲು ಚಲನೆಯ ನಿಯಮಗಳನ್ನು ಅವರು ಬಳಸಿದರು. ೧೭೫೮ ರಲ್ಲಿ ಅದು ಮತ್ತೆ ಕಾಣಿಸಿಕೊಂಡ ಮೇಲೆ ಅದನ್ನು ಇವರ ಹೆಸರಲ್ಲಿ ಹೆಸರಿಸಲಾಯಿತು. ಆದರೆ, ಅದನ್ನು ನೋಡಲು ಅವರು ಬದುಕಿರಲಿಲ್ಲ.
ಎಡ್ಮಂಡ್ ಹ್ಯಾಲೆ | |
---|---|
ಜನನ | 8 November [O.S. 29 October] 1656 Haggerston, Middlesex, England |
ಮರಣ | ಟೆಂಪ್ಲೇಟು:OldStyleDateDY (aged 85) ಗ್ರೀನ್ವಿಚ್, ಕೆಂಟ್, ಇಂಗ್ಲೆಂಡ್ |
ಸಮಾಧಿ ಸ್ಥಳ | St. Margaret's, ಲೀ,ಲಂಡನ್ |
ರಾಷ್ಟ್ರೀಯತೆ | English |
ಕಾರ್ಯಕ್ಷೇತ್ರ | Astronomy, geophysics, ಗಣಿತ , meteorology, ಭೌತಶಾಸ್ತ್ರ, cartography |
ಸಂಸ್ಥೆಗಳು | University of Oxford Royal Observatory, Greenwich |
ಅಭ್ಯಸಿಸಿದ ವಿದ್ಯಾಪೀಠ | The Queen's College, Oxford |
ಸಂಗಾತಿ | ಮೇರಿ ಟೂಕ್ |
ಮಕ್ಕಳು | Edmond Halley (d. 1741) Margaret (d. 1713) Richelle (d. 1748) |
೧೬೯೮ ರಲ್ಲಿ ಆರಂಭಗೊಂಡು, ಅವರು ತೇಲುವ ದಂಡಯಾತ್ರೆಗಳನ್ನು ಕೈಗೊಂಡರು ಮತ್ತು ಭೂಮಿಯ ಕಾಂತೀಯತೆಯ ಪರಿಸ್ಥಿತಿಗಳ ಬಗ್ಗೆ ವೀಕ್ಷಣೆಗಳನ್ನು ಮಾಡಿದರು. ೧೭೧೮ ರಲ್ಲಿ ಅವರು "ಸ್ಥಿರ" ನಕ್ಷತ್ರಗಳ ಸರಿಯಾದ ಚಲನೆಯನ್ನು ಕಂಡುಹಿಡಿದರು.[1]