ಮಧ್ಯ ಪ್ರಾಚ್ಯ
From Wikipedia, the free encyclopedia
ಮಧ್ಯ ಪ್ರಾಚ್ಯ (Middle East)(ಅಥವಾ, ಹಿಂದೆ ಸಾಮಾನ್ಯವಾಗಿ ಕರೆಯಲ್ಪಡುತ್ತಿದ್ದ ಹತ್ತಿರದ ಪ್ರಾಚ್ಯ[1]) ನೈರುತ್ಯ ಏಷ್ಯಾ, ಪಶ್ಚಿಮ ಏಷ್ಯಾ ಮತ್ತು ಈಶಾನ್ಯ ಆಫ್ರಿಕವನ್ನು ವ್ಯಾಪಿಸಿರುವ ಪ್ರದೇಶ. ಈ ಪ್ರದೇಶಕ್ಕೆ ಯಾವುದೆ ನಿಗದಿತವಾದ ಗಡಿ ಇಲ್ಲ. ೧೯೦೦ ರಲ್ಲಿ ಯುನೈಟೆಡ್ ಕಿಂಗ್ಡಮ್ನಲ್ಲಿ ಈ ಪದವು ಬಳಕೆಗೆ ಬಂದಿತು.
ಮಧ್ಯ ಪ್ರಾಚ್ಯವು ಪ್ರಪಂಚದ ಮೂರು ಪ್ರಮುಖ ಏಕೀಶ್ವರವಾದದ ಧರ್ಮಗಳಾದ ಇಸ್ಲಾಂ, ಕ್ರೈಸ್ತ ಧರ್ಮ ಮತ್ತು ಯಹೂದಿ ಧರ್ಮಗಳ ಉಗಮ ಸ್ಥಾನವಾಗಿದೆ.