ಟಿಬೆಟ್
From Wikipedia, the free encyclopedia
ಟಿಬೆಟ್ ಮಧ್ಯ ಏಷ್ಯಾದಲ್ಲಿ ಟಿಬೆಟ್ಟಿನ ಜನರ ಮೂಲವಾದ ಒಂದು ಪ್ರಸ್ಥಭೂಮಿ. ಸರಾಸರಿ ೪,೯೦೦ ಮೀ. ಎತ್ತರದಲ್ಲಿರುವ ಇದು ಭೂಮಿಯ ಅತ್ಯಂತ ಎತ್ತರದ ಪ್ರದೇಶ. ಈ ಪ್ರದೇಶದ ಸಾಂಪ್ರದಾಯಿಕ ರಾಜಧಾನಿ ಲ್ಹಾಸ. ಇದು ಚೀನಾ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಚೀನೀ ಸಮಾಜವಾದಿ ಗಣರಾಜ್ಯದ ಒಂದು ಸ್ವಯಮಾಡಳಿತ ಪ್ರದೇಶವಾಗಿದೆ.
ಭಾರತ ಗಣರಾಜ್ಯದೊಳಗಿರುವ ಟಿಬೆಟ್ ಪ್ರಾಂತ್ರ್ಯ | |||||||||
ಪ್ರತ್ಯೇಕತಾವಾದಿಗಳ ನಿಲುವಿನಂತೆ ಐತಿಹಾಸಿಕ ಟಿಬೆಟ್ | |||||||||
ಭಾರತ ಗಣರಾಜ್ಯದಿಂದ ನಿರ್ಧಿಷ್ಟ ಟಿಬೆಟಿನವರ ಪ್ರದೇಶ | |||||||||
ಅಕ್ಸಾಯ್ ಚಿನ್ ಗೆ ಸೇರುವ, ಭಾರತವು ತನ್ನದೆನ್ನುವ ಚೀನಿ ಆಡಳಿತದಲ್ಲಿರುವ ಪ್ರದೇಶ | |||||||||
ಭಾರತದ ಆಡಳಿತದಲ್ಲಿರುವ ಚೀನಿಯರು ಟಿಬೆಟ್ಟಿನ ಭಾಗವಾಗಿ ತಮ್ಮದೆನ್ನುವ ಪ್ರದೇಶ | |||||||||
ಟಿಬೆಟ್ಟಿನ ಸಂಸ್ಕೃತಿಯಿಂದ ಪ್ರಭಾವಿತ ಇತರ ಪ್ರದೇಶಗಳು |
ಟಿಬೆಟ್ - ಮಧ್ಯ ಏಷ್ಯದಲ್ಲಿ ಸ್ಥೂಲವಾಗಿ ಪೂ.ರೇ. 74°-100°ಮತ್ತು ಉ.ಅ. 27°-37° ನಡುವೆ ಹಬ್ಬಿರುವ ಪ್ರಸ್ಥಭೂಮಿಯ ಮೇಲೆ ಇದೆ. ಉತ್ತರದಲ್ಲಿ ಷಿಂಜೀಯಾಂಗ್ ವೀಗುರ್ ಹಾಗೂ ಚಿಂಗೈ, ಪೂರ್ವದಲ್ಲಿ ಸೆಚ್ವಾನ್, ಆಗ್ನೇಯದಲ್ಲಿ ಯೂನ್ನಾನ್ ಮತ್ತು ಬರ್ಮ, ದಕ್ಷಿಣದಲ್ಲಿ ಭಾರತ, ನೇಪಾಳ, ಮತ್ತು ಭೂತಾನ, ಪಶ್ಚಿಮದಲ್ಲಿ ಭಾರತ-ಇವು ಇದರ ಮೇರೆಗಳು. ವಿಸ್ತೀರ್ಣ 4,71,660 ಚ.ಮೈ. (12,21,601 ಚ.ಕಿಮೀ.). ಜನಸಂಖ್ಯೆ 14,00,000 (1968 ಅಂ.). ರಾಜಧಾನಿ ಲಾಸ.