ಜೆಡ್ಡಾ
From Wikipedia, the free encyclopedia
ಜೆಡ್ಡಾ ಅಥವಾ ಜಿದ್ದ - ಸೌದೀ ಅರೇಬಿಯದ ಮುಖ್ಯ ರೇವುಪಟ್ಟಣ. ಕೆಂಪುಸಮುದ್ರ ತೀರದಲ್ಲಿದೆ. ಹೆಜಾಝ್ ಪ್ರಾಂತ್ಯಕ್ಕೆ ಸೇರಿದೆ. ಜನಸಂಖ್ಯೆ 1,94,000(1965). ಇದು ಈವ್ ಳ ರುದ್ರಭೂಮಿ ಎಂಬ ನಂಬಿಕೆ ಹಿಂದೆ ಇದ್ದದ್ದರಿಂದ ಇದಕ್ಕೆ ಜಿದ್ದ ಎಂಬ ಹೆಸರು ಬಂತು. ಜುದ್ದ ಎಂದರೆ ಪೂರ್ವಜೆ. ಈವ್ ಳದೆಂದು ಪ್ರಸಿದ್ಧವಾಗಿದ್ದ ಗೋರಿಯನ್ನು ಸೌದೀ ಅರೇಬಿಯ ಸರ್ಕಾರ 1928ರಲ್ಲಿ ನಾಶಮಾಡಿತು. ಇದು ಮೂಢನಂಬಿಕೆಯನ್ನು ಪ್ರೋತ್ಸಾಹಿಸುವುದೆಂಬುದು ಕಾರಣ. ಮುಸ್ಲಿಂ ಯಾತ್ರಾಸ್ಥಳವಾದ ಮೆಕ್ಕ ಇರುವುದು ಇದರಿಂದ ಸು. 50 ಮೈ. ದೂರದಲ್ಲಿ. ಮೆಕ್ಕಕ್ಕೆ ಬರುವ ಯಾತ್ರಿಕರಲ್ಲಿ ಬಹಳ ಮಂದಿ ಈ ರೇವಿನಲ್ಲಿ ಇಳಿದು ಪ್ರಯಾಣ ಮುಂದುವರಿಸುತ್ತಾರೆ. ಆದ್ದರಿಂದ ಈ ನಗರ ಐತಿಹಾಸಿಕ ಪ್ರಾಮುಖ್ಯ ಗಳಿಸಿದೆ. ಬಂದರು 17ನೆಯ ಶತಮಾನದಿಂದ ಈಗಿನ ಸ್ಥಳದಲ್ಲಿದೆ. ಹಿಂದೆ ಅದು ಇಲ್ಲಿಂದ 12 ಮೈ. ದಕ್ಷಿಣಕ್ಕೆ ಇರುವ ಅಲ್ ಆಸ್ವಾದ್ನಲ್ಲಿತ್ತು.