ಅಲೆಕ್ಸಾಂಡ್ರಿಯ
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
Alexandria
إسكندرية Iskendereyya الإسكندرية Al-Iskandariya (Standard Arabic) | |
---|---|
Nickname: Pearl of the Mediterranean | |
Country | ಈಜಿಪ್ಟ್ |
Governates | Alexandria Governorate |
Founded | 331 BC |
Government | |
• Governor | Adel Labib |
Area | |
• Total | ೧೦೩೪ sq mi (೨,೬೭೯ km2) |
Population (2006) | |
• Total | ೪೧,೧೦,೦೧೫ |
CAPMS 2006 Census | |
Time zone | UTC+2 (EST) |
• Summer (DST) | +3 |
Area code | ++3 |
Website | Official website |
ಅಲೆಕ್ಸಾಂಡ್ರಿಯ (ಅರೇಬಿಕ್ : الإسكندرية ಅಲ್ -ಇಸ್ಕಾನ್ದರಿಯ್ಯ ; ಕಾಪ್ಟಿಕ್ : Ⲣⲁⲕⲟⲧⲉ Rakotə ; ಗ್ರೀಕ್ : Ἀλεξάνδρεια ; ) 4.1 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದ್ದು, ಈಜಿಪ್ಟಿನಲ್ಲಿ ಎರಡನೇ ದೊಡ್ಡ ನಗರವಾಗಿದೆ, ಮತ್ತು ದೇಶದ ದೊಡ್ಡ ಸಮುದ್ರ ಬಂದರು ಆಗಿದ್ದು,ಈಜಿಪ್ಟಿನ ಸುಮಾರು ಶೇಕಡಾ 80 ರಷ್ಟು ಆಮದು ಮತ್ತು ರಫ್ತನ್ನು ನೋಡಿಕೊಳ್ಳುತ್ತಿದೆ. ಅಲೆಕ್ಸಾಂಡ್ರಿಯ ಬಹು ಮುಖ್ಯವಾದ ಪ್ರಯಾಣಿಕರ ತಾಣವಾಗಿದೆ. ಉತ್ತರ-ಕೇಂದ್ರ ಈಜಿಪ್ಟಿನ ಮೆಡಿಟರೇನಿಯನ್ ಸಮುದ್ರದ ಬಂದರಿನವರೆವಿಗೂ ಅಲೆಕ್ಸಾಂಡ್ರಿಯಾವು ವಿಸ್ತರಿಸಲ್ಪಟ್ಟಿದೆ.32 km (20 mi) ಬಿಬ್ಲಿಯೋಥಿಕ ಅಲೆಕ್ಸಾಂಡ್ರಿನಾದ ( ಹೊಸ ಗ್ರಂಥಾಲಯ ) ಕ್ಕೆ ಮನೆಯೂ ಆಗಿದೆ. ಇದು ಬಹು ಮುಖ್ಯ ಕೈಗಾರಿಕಾ ಕೇಂದ್ರವಾಗಿದ್ದು, ಸುಯೆಜ್ ನಿಂದ ಪ್ರಾಕೃತಿಕ ಅನಿಲ ಮತ್ತು ಎಣ್ಣೆ ಕೊಳವೆ ಗಳನ್ನೂ ಹೊಂದಿರುವ ಇನ್ನೊಂದು ಈಜಿಪ್ಟ್ ನಗರವಾಗಿದೆ. ಪ್ರಾಚೀನ ಕಾಲದಲ್ಲಿ ಅಲೆಕ್ಸಾಂಡ್ರಿಯ, ವಿಶ್ವದಲ್ಲಿಯೇ ಬಹಳ ಪ್ರಸಿದ್ಧವಾದ ನಗರಗಳಲ್ಲಿ ಒಂದಾಗಿತ್ತು. ಸಣ್ಣ ಫರೋನಿಕ್ ಪಟ್ಟಣ ಸಿ ಸುತ್ತ-ಮುತ್ತ ಇದೆ. 331 ಬಿಸಿ ಯಲ್ಲಿ ಈ ನಗರವನ್ನು ಮಹಾನ್ ಅಲೆಕ್ಸಾಂಡರನು ಕಂಡು ಹಿಡಿದನು. ಹೆಚ್ಚೂ ಕಡಿಮೆ ಸಾವಿರ ವರ್ಷಗಳ ಕಾಲ ಇದು ಈಜಿಪ್ಟಿನ ರಾಜಧಾನಿಯಾಗಿಯೇ ಉಳಿದಿತ್ತು, ಮುಸ್ಲಿಂ ದಾಳಿಕಾರರು ಈಜಿಪ್ತನ್ನು 641 AD ಯಲ್ಲಿ ಆಕ್ರಮಿಸಿದ ಮೇಲೆ,ಫಾಸ್ತತ್ ಅನ್ನು ಹೊಸ ರಾಜಧಾನಿಯನ್ನಾಗಿ ಮಾಡಿಕೊಂಡರು. ( ನಂತರದ ದಿನಗಳಲ್ಲಿ ಫಾಸ್ತತ್ ಕೈರೋದಲ್ಲಿ ಲೀನವಾಯಿತು.) ಪ್ರಾಚೀನ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ಲೈಟ್ ಹೌಸ್/ದೀಪದ ಮನೆ(ಫರೋಸ್ )ಅಲೆಕ್ಸಾಂಡ್ರಿಯಾದಲ್ಲಿದೆ. ಅಲ್ಲಿನ ಗ್ರಂಥಾಲಯ ಹಾಗೆಯೇ (ಪ್ರಾಚೀನ ಪ್ರಪಂಚದ ಬಹುದೊಡ್ಡ ಗ್ರಂಥಾಲಯ ); ಶೋಕಫದ ಕ್ಯಾಟಕಂಬ್ಸ್ ಕೋಮೆಲ್ ಹೆಸರುವಾಸಿಯಾಗಿದೆ. ಮಧ್ಯ ಯುಗದ ಏಳು ಅದ್ಭುತಗಳಲ್ಲಿ ಇದು ಒಂದಾಗಿದೆ. ಅಲೆಕ್ಸಾಂಡ್ರಿಯಾದ ಬಂದರಿನಲ್ಲಿರುವ ಚಾಲ್ತಿಯಲ್ಲಿರುವ ಮರಿ ಟೈಮ್ ಆರ್ಕಿಯಾಲಜಿ 1994 ರಲ್ಲಿ ಪ್ರಾರಂಭವಾಗಿದ್ದು, ಅಲೆಕ್ಸಾಂಡ್ರಿಯಾದ ಅಲೆಕ್ಸಾಂಡರನ ಆಗಮನದ ಮುಂಚಿನ,ವಿವರವನ್ನು ಪ್ರಕಾಶಪಡಿಸಿದೆ.ಆ ಸಮಯದಲ್ಲಿ ರಹ್ಕೋಟೀಸ್ ಹಸರಿನ ನಗರ ಅಲ್ಲಿ ಅಸ್ಥಿತ್ವದಲ್ಲಿದ್ದು , ಪ್ತೋಲೆಮೈಕ್ ಸಾಮ್ರಾಜ್ಯ ಚಾಲ್ತಿಯಲ್ಲಿತ್ತು. 19ನೇ ಶತಮಾನದ ಅಂತ್ಯದಲ್ಲಿ , ಅಂತರ ರಾಷ್ಟ್ರೀಯ ಮಟ್ಟದ ಕೇಂದ್ರ ನೌಕಾಯಾನ ಕೈಗಾರಿಕೆಯಾಗಿ ಬೆಳೆದು, ಒಂದಾದ ಬಹು ಮುಖ್ಯ ವ್ಯಾಪಾರೀ ಕೇಂದ್ರವಾಗಿ ಪ್ರಪಂಚದಲ್ಲಿ ಹೆಸರಾಯಿತು. ಮೆಡಿಟರೇನಿಯನ್ ಸಮುದ್ರ ಮತ್ತು ಕೆಂಪು ಸಮುದ್ರದ ಸಂಪರ್ಕದಿಂದ ಇದು ಸಾಧ್ಯವಾಯಿತು. ಹಾಗೆಯೇಈಜಿಪ್ಟಿನ ಹತ್ತಿ ವ್ಯಾಪಾರಕ್ಕೆ ಲಾಭಧಾಯಕವಾಗಿದೆ.