ಹಳದಿ-ಕೊರಳಿನ ಪಿಕಳಾರ
From Wikipedia, the free encyclopedia
ಹಳದಿ ಕೊರಳಿನ ಪಿಕಳಾರ, ಭಾರತ ಪರ್ಯಾಯ ದ್ವೀಪದ ಸಾಧಾರಣ ಪಿಕಳಾರಗಳ ಜಾತಿಗೆ ಸೇರಿದ್ದು, ಇವು ಬಹಳ ಅಪರೂಪ. ಇವು ಬೆಟ್ಟ-ಗುಡ್ಡಗಳ ಕುರುಚಲು ಪ್ರದೇಶಗಳಲ್ಲಿ ವಾಸಿಸುತ್ತವೆ. ಇಂದು ಹೆಚ್ಚಾಗಿ ನಗರಗಳ ಬೆಳವಣಿಗೆಯಿಂದ ಬೆಟ್ಟಗಳನ್ನು ಕಡಿದು ಜೆಲ್ಲಿಕಲ್ಲಿನ ಕಾರ್ಖಾನೆಗಳಾಗಿ ಮಾಡುತ್ತಿರುವುದರಿಂದ ಇವುಗಳ ಸಂತತಿಗೆ ತೀವ್ರ ಏಟು ಬೀಳುತ್ತಿದೆ. ಮೇಲ್ನೋಟಕ್ಕೆ ಇವುಗಳ ವ್ಯಾಪ್ತಿ, ಕೂಗು (ಬಿಳಿ ಹುಬ್ಬಿನ ಪಿಕಳಾರ)ಗಳನ್ನು ಹೋಲುತ್ತವೆಯಾದರೂ ಇವುಗಳ ತಲೆ, ಕೊರಳು ಮತ್ತು ಬಾಲಗಳ ಮೇಲಿನ ಹಳದಿ ಬಣ್ಣಗಳಿಂದ ಹಳದಿ ಕೊರಳಿನ ಪಿಕಳಾರಗಳನ್ನು ನಿರ್ದಿಷ್ಟವಾಗಿ ಗುರುತಿಸಬಹುದು.[4]
Quick Facts ಹಳದಿ ಕೊರಳಿನ ಪಿಕಳಾರ, Conservation status ...
Close