ಸಿಮ್ಯುಲೇಶನ್ (=ಅನುಕರಣೆ)
From Wikipedia, the free encyclopedia
ಸಿಮ್ಯುಲೇಶನ್: ಕೆಲವು ನೈಜ ಸಂಗತಿ, ಸ್ಥಿತಿಗತಿಗಳು ಅಥವಾ ಪ್ರಕ್ರಿಯೆಯ ತದ್ರೂಪವನ್ನು ಸೃಸ್ಟಿಸಿ ಅಂಥ ಸನ್ನಿವೇಶದಲ್ಲಿ ವಾಸ್ತವದ ಕಾರ್ಯ ನಿರ್ವಹಣೆ ಮಾಡುವುದಕ್ಕೆ ಸಿಮ್ಯುಲೇಶನ್(=ಅನುಕರಣೆ) ಎನ್ನುತ್ತಾರೆ. ಒಂದು ವಸ್ತುವಿನ ಪ್ರತಿಕೃತಿ ಮಾಡುವುದೆಂದರೆ ಆಯ್ದ ಭೌತಿಕ ಅಥವಾ ಅಮೂರ್ತ ವ್ಯವಸ್ಥೆಯ ಪ್ರಮುಖ ಲಕ್ಷಣಗಳು ಅಥವಾ ನಡವಳಿಕೆಗಳನ್ನು ಪ್ರತಿನಿಧಿಸುವುದು ಎಂಬ ಅರ್ಥವನ್ನು ನೀಡುವುದು.
ನೈಸರ್ಗಿಕ ವ್ಯವಸ್ಥೆಗಳು ಅಥವಾ ಮಾನವ ವ್ಯವಸ್ಥೆಗಳ ಮಾದರಿಯ ಕಾರ್ಯನಿರ್ವಹಣೆಯ ಕುರಿತು ಅರಿವನ್ನು ಗಳಿಸುವುದೂ ಸೇರಿದಂತೆ ಸಿಮ್ಯುಲೇಶನ್ ಅನ್ನು ಹಲವಾರು ಸಂದರ್ಭಗಳಲ್ಲಿ ಬಳಸಲಾಗುವುದು.[1] ಸುರಕ್ಷತಾ ಇಂಜಿನಿಯರಿಂಗ್, ಪರೀಕ್ಷೆ, ತರಬೇತಿ ಮತ್ತು ಶಿಕ್ಷಣದಂತಹ ಇತರ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಣೆಯ ಗರಿಷ್ಠ ಸಾಮರ್ಥ್ಯ ಪಡೆಯಲು,ತಂತ್ರಜ್ಞಾನದ ಸಿಮ್ಯುಲೇಶನ್ ಅನ್ನು ಬಳಕೆ ಮಾಡಲಾಗುತ್ತದೆ. ಉಂಟಾಗಬಹುದಾದ ವಾಸ್ತವ ಪರಿಣಾಮವೇನು ಎಂಬುದನ್ನು ಪರ್ಯಾಯ ಪರಿಸ್ಥಿತಿಯೊಂದರಲ್ಲಿ ತಿಳಿಯಲೂ ಸಿಮ್ಯುಲೇಶನ್ ನೆರವಾಗುತ್ತದೆ.
ಪ್ರಮುಖ ಲಕ್ಷಣಗಳು ಮತ್ತು ನಡವಳಿಕೆಗಳ ಆಯ್ಕೆಯ ಕುರಿತು ಸೂಕ್ತ ಮೂಲ ಮಾಹಿತಿಯನ್ನು ಸ್ವಾಧೀನಪಡಿಸಿಕೊಳ್ಳುವುದು, ಸರಳವಾದ ಅಂದಾಜು/ಊಹೆಗಳನ್ನು ಬಳಸುವುದು ಮತ್ತು ಸಿಮ್ಯುಲೇಶನ್ನಲ್ಲಿನ ಊಹೆಗಳು ಮತ್ತು ಸಿಮ್ಯುಲೇಶನ್ನಿಂದ ದೊರೆತ ಫಲಿತಾಂಶದ ವಸ್ತುನಿಷ್ಠತೆ ಮತ್ತು ವಾಯಿದೆಯು ಸಿಮ್ಯುಲೇಶನ್ಗಿರುವ ಪ್ರಮುಖ ಸಮಸ್ಯೆಗಳಾಗಿವೆ.