ಸಮಸ್ಥಾನಿ
ಐಸೋಟೋಪು / From Wikipedia, the free encyclopedia
ಸಮಸ್ಥಾನಿ (ಐಸೋಟೋಪು) ಎಂದರೆ ಒಂದು ಮೂಲಧಾತುವಿನ ಭಿನ್ನ ಪರಮಾಣು ತೂಕವನ್ನು ಹೊಂದಿರುವ ಒಂದು ಅಥವಾ ಹೆಚ್ಚಿನ ಪರಮಾಣುಗಳು. ಐಸೋಟೋಪುಗಳು ಒಂದೇ ಪರಮಾಣು ಸಂಖ್ಯೆ ಇರುವ (ಆದ್ದರಿಂದ ಒಂದೇ ಧಾತು ಆಗಿರುವ) ಆದರೆ ದ್ರವ್ಯಮಾನ ಸಂಖ್ಯೆಯಲ್ಲಿ (ರಾಶಿಸಂಖ್ಯೆ) ಭಿನ್ನವಾಗಿರುವ ಎರಡು ಅಥವಾ ಹೆಚ್ಚು ನ್ಯೂಕ್ಲೈಡುಗಳು.[1] ಸಮಸ್ಥಾನಿಗಳ ಪರಮಾಣು ಕೇಂದ್ರ(nuclei)ದಲ್ಲಿ ಪ್ರೋಟಾನ್ನ ಸಂಖ್ಯೆ ಸಮನಾಗಿದ್ದರೂ ನ್ಯೂಟ್ರಾನ್ಗಳ ಸಂಖ್ಯೆ ಭಿನ್ನವಾಗಿರುತ್ತದೆ.
ಧಾತುಗಳ ಆವರ್ತಕೋಷ್ಟಕದಲ್ಲಿ ಇವು ಒಂದೇ ಸ್ಥಾನವನ್ನು ಪಡೆಯುತ್ತವೆ. ಪ್ರಪಂಚದ ಸಮಸ್ತ ವಸ್ತುಗಳಲ್ಲೂ ಸು. ೧೦೪ ಪ್ರತ್ಯೇಕ ಧಾತುಗಳ (ಎಂದರೆ ಪ್ರತ್ಯೇಕ ಪರಮಾಣುಗಳು) ಇವೆ; ಆದರೆ ಇಂಥ ನೈಸರ್ಗಿಕ ಮತ್ತು ಕೃತಕ ಧಾತುಗಳ ಸು. ೧೩೦೦ ಐಸೊಟೋಪುಗಳನ್ನು ಗುರುತಿಸಲಾಗಿದೆ.[2]