ಸದಸ್ಯ:Tubelight87/ನನ್ನ ಪ್ರಯೋಗಪುಟ
From Wikipedia, the free encyclopedia
ದೂರದರ್ಶನ ( ಟೆಲಿವಿಷನ್, ಟಿವಿ), ಒಂದು ದೂರಸಂವಹನ ಸಾಧನ. ಇದು ಕಪ್ಪು - ಬಿಳುಪು ಹಾಗು ಬಣ್ಣದ ಚಿತ್ರಗಳನ್ನು ಪ್ರದರ್ಶಿಸುತ್ತದೆ. ಇದೊಂದು ಸಮೂಹ ಸಂವಹನ ಸಾಧನವಾಗಿದ್ದು, ಸುದ್ದಿ, ಮನೋರಂಜನೆ ಹಾಗು ಇತರೆ ಕಾರ್ಯಕ್ರಮಗಳನ್ನು ಬಿತ್ತರಿಸುತ್ತದೆ.
2013 ರ ಅಂಕಿ ಅಂಶಗಳ ಪ್ರಕಾರ, ಜಗತ್ತಿನ ಶೇಕಡಾ 79 ಪ್ರತಿಶತ ಮನೆಗಳು ದೂರದರ್ಶನವನ್ನು ಹೊಂದಿವೆ. ಈ ಹಿಂದೆ CRT ತಂತ್ರಜ್ಞಾನದಿಂದ ತಯಾರಿಸಲ್ಪಡುತ್ತಿದ್ದ ದೂರದರ್ಶನಗಳು, ಈಗ LED ಹಾಗು OLED ತಂತ್ರಜ್ಞಾನದಿಂದ ತಯಾರಿಸಲ್ಪಡುತ್ತಿವೆ. ಈಗಿನ ದಿನಗಳಲ್ಲಿ ಅಂತರ್ಜಾಲವನ್ನೊಳಗೊಂಡ ಸ್ಮಾರ್ಟ್ ದೂರದರ್ಶನಗಳು ಜನಪ್ರಿಯಗೊಳ್ಳುತ್ತಿವೆ.