ಸದಸ್ಯ:PRAJWAL G363/ನನ್ನ ಪ್ರಯೋಗಪುಟ/1
From Wikipedia, the free encyclopedia
ಪ್ರಾನ್ಸಸ್ ಬರ್ನಿಯವರು ಒರ್ವ ಕಾದಂಬರಿಕಾರರು, ಪತ್ರಕರ್ತರು ಹಾಗೂ ನಾಟಕಗಾರರು ಆಗಿದ್ದರು. ಇವರ ಬಹಳಷ್ಟು ಸಾಹಿತ್ಯ ಕೆಲಸಗಳು ಸಮಾಜದಲ್ಲಿನ ತಪ್ಪುಗಳನ್ನು ಲೇವಡಿ ಮಾಡಿ ಬರೆಯುತ್ತಿರುವಂತೆ ಕಾಣುತ್ತದೆ. ಪ್ರಾನ್ಸಸ್ ಬರ್ನಿಯವರು ೧೩ ಜೂನ್ ೧೭೫೨ ರಂದು ಖ್ಯಾತ ಸಂಗೀತಕಾರ ಡಾ.ಚಾರ್ಲಸ್ ಬರ್ನಿಯವರ ಮಗಳಾಗಿ ಜನಿಸಿದರು. ಆರು ಜನ ಒಡಹುಟ್ಟಿದವರಲ್ಲಿ ಇವರು ಮೂರನೆಯವರು. ಇವರು ಲಿನ್ ರಿಜೀಸ್ ಇಂಗ್ಲೆಂಡ್ ನಲ್ಲಿ ಜನಿಸಿದರು. ಇವರ ಇನ್ನೊಂದು ವಿಶೇಷವೆಂದರೆ ಇವರು ಶಿಕ್ಷಣವನ್ನು ಶಾಲೆಯಲ್ಲಿ ಪಡೆಯಲಿಲ್ಲ. ಅವರೇ ಸ್ವಯಂ ಅಕ್ಷರಗಳನ್ನು ಬರೆಯುವುದನ್ನು ಕಲಿತು, ತಮ್ಮ ಹತ್ತನೇ ವಯಸ್ಸಿನಲ್ಲಿಯೇ ಕಾದಂಬರಿಗಳನ್ನು ಬರೆಯಲು ಪ್ರಾರಂಭ ಮಾಡಿದರು. ಅವರು ೧೭೯೩ ರಲ್ಲಿ, ತಮ್ಮ ನಲವತ್ತೊಂದನೇ ವಯಸ್ಸಿನಲ್ಲಿ ಫ್ರೆಂಚಿನ ಜನರಲ್ ಅಲೆಕ್ಸಾಂಡರ್ ದಿ ೧ ಅರಬ್ಲೆ ಎಂಬುವವರನ್ನು ವಿವಾಹವಾದರು. ೧೭೯೪ ರಲ್ಲಿ ಅವರಿಗೆ ಅಲೆಕ್ಸಾಂಡರ್ ಎಂಬ ಪುತ್ರ ಜನಿಸಿದನು. ತಮ್ಮ ಸುದೀರ್ಘ ಬರಹದ ವೃತ್ತಿ ಜೀವನದ ನಂತರ ಮತ್ತು ಸಾಕಷ್ಟು ಪ್ರಯಾಣದ ನಂತರ ಹತ್ತು ವರ್ಷಗಳ ಕಾಲ ಬಾತ್ ಇಂಗ್ಲೆಂಡ್ ಎಂಬ ಸ್ಥಳದಲ್ಲಿದ್ದರು ಮತ್ತು ಅಲ್ಲಿಯೇ ೬ ಜನವರಿ ೧೮೪೦ ರಂದು ತಮ್ಮ ಕೊನೆಯುಸಿರೆಳೆದರು. [1] ತಮ್ಮ ವೃತ್ತಿ ಜೀವನದಲ್ಲಿ ಅವರು ನಾಲ್ಕು ಕಾದಂಬರಿಗಳನ್ನು, ಎಂಟು ನಾಟಕಗಳನ್ನು, ಒಂದು ಜೀವನ ಚರಿತ್ರೆಯನ್ನು ಹಾಗೂ, ೨೦ ಸಂಪುಟಗಳ ನಿಯತಕಾಲಕೆ ಮತ್ತು ಪತ್ರಗಳನ್ನು ರಚಿಸಿದ್ದಾರೆ. ಇವರ ಕೃತಿಗಳು ವಿಮರ್ಶಾತ್ಮಕ ಗೌರವವನ್ನು ಪಡೆಯಿತು. ಇವರ ಲೇವಡಿ ಮಾಡಿ ಬರೆಯುವುದರಲ್ಲಿ ತುಂಬಾ ಪ್ರಖ್ಯಾತರು. ಆದರಿಂದಾಗಿಯೇ ಇವರಿಗೆ ಇವರದೆಯಾದ ಗುರುತು ಇದೆ. ಇವರು ತಮ್ಮ ಎಂಟನೇ ವಯಸ್ಸಿನವರಿಗೂ ಒಂದೂ ಅಕ್ಷರವನ್ನು ಸಹ ಕಲಿತಿರಲಿಲ್ಲ. ಕೆಲವೊಬ್ಬರು ಅವರಿಗೆ ಡಿಸ್ಲೆಕ್ಷಿಯಾ ಇದೆ ಎಂದು ಸಹ ವಾದ ಮಾಡುತ್ತಾರೆ. ಆದರೆ ಅವರು ಹತ್ತನೇ ವರ್ಷದ ಅಷ್ಟೊತ್ತಿಗೆ ಬರೆಯಲು ಶುರು ಮಾಡಿದರು. ಇವರ ಅಕ್ಕಂದಿರು ವಿದ್ಯಾಭ್ಯಾಸಕ್ಕಾಗಿ ಪ್ಯಾರಿಸ್ಗೆ ಹೋದರು. ಇವರು ತಮ್ಮ ಮನೆಯಲ್ಲಿಯೇ ಇದ್ದುಕೊಂಡು ಕಾದಂಬರಿಗಳನ್ನು, ಮನೆಯಲ್ಲಿರುವ ಪುಸ್ತಕಗಳನ್ನು ಓದಿ ತಿಳುವಳಿಕೆ ಪಡೆದುಕೊಂಡರು.