ಸದಸ್ಯ:Namita Gurudas/sandbox
From Wikipedia, the free encyclopedia
ಲಾರೆನ್ಸ್ ಎಡ್ವರ್ಡ್ ಪೇಜ್ (ಜನನ ಮಾರ್ಚ್ ೨೬, ೧೯೭೩)[2] ಇವರು ಅಮೇರಿಕನ್ ಉದ್ಯಮಿ, ಕಂಪ್ಯೂಟರ್ ವಿಜ್ಞಾನಿ ಮತ್ತು ಇಂಟರ್ನೆಟ್ ಉದ್ಯಮಿಯಾಗಿದ್ದು,[3][4] ಸೆರ್ಗೆ ಬ್ರಿನ್ ಅವರೊಂದಿಗೆ ಗೂಗಲ್ನಲ್ಲಿ ಸಹ-ಸಂಸ್ಥಾಪಕರಾಗಿ ಪ್ರಸಿದ್ಧರಾಗಿದ್ದಾರೆ.[5]
ಲ್ಯಾರಿ ಪೇಜ್ | |
---|---|
ಜನನ | ಲಾರೆನ್ಸ್ ಎಡ್ವರ್ಡ್ ಪೇಜ್ (1973-03-26) ಮಾರ್ಚ್ ೨೬, ೧೯೭೩ (ವಯಸ್ಸು ೫೧) ಲ್ಯಾನ್ಸಿಂಗ್, ಮಿಚಿಗನ್, ಯು.ಎಸ್. |
ನಾಗರಿಕತೆ | |
ವಿದ್ಯಾಭ್ಯಾಸ | |
ವೃತ್ತಿs | |
Organizations | |
Known for |
|
ಸಂಗಾತಿ | ಲುಸಿಂಡಾ ಸೌತ್ವರ್ತ್ (ವಿವಾಹ ೨೦೦೭) |
ಮಕ್ಕಳು | ೨[1] |
Relatives | ಕ್ಯಾರಿ ಸೌತ್ ವರ್ತ್ (ಅತ್ತಿಗೆ) |
Signature | |
ಲ್ಯಾರಿ ಪೇಜ್ ಅವರು ೧೯೯೭ ರಿಂದ ಆಗಸ್ಟ್ ೨೦೦೧ ರವರೆಗೆ, ಗೂಗಲ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು.[6] ನಂತರ, ಅವರು ಎರಿಕ್ ಸ್ಮಿತ್ರವರ ಪರವಾಗಿ ಕೆಳಗಿಳಿಯಬೇಕಾಯಿತು. ತದನಂತರ, ಏಪ್ರಿಲ್ ೨೦೧೧ ರಿಂದ ಜುಲೈ ೨೦೧೫ ರವರೆಗೆ ಹೊಸದಾಗಿ ರೂಪುಗೊಂಡ ಮಾತೃ ಸಂಸ್ಥೆಯಾದ ಆಲ್ಫಾಬೆಟ್ ಇಂಕ್ನ ಸಿಇಒ ಆದರು.[7] ಅವರು ಡಿಸೆಂಬರ್ ೪, ೨೦೧೯ ರವರೆಗೆ ಆ ಹುದ್ದೆಯಲ್ಲಿದ್ದರು, ಯಾವಾಗ ಪೇಜ್ ಅವರು ಮತ್ತು ಬ್ರಿನ್ರವರು ಎಲ್ಲಾ ಕಾರ್ಯನಿರ್ವಾಹಕ ಸ್ಥಾನಗಳಿಂದ ಮತ್ತು ಕಂಪನಿಯೊಳಗಿನ ದೈನಂದಿನ ಪಾತ್ರಗಳಿಂದ ಕೆಳಗಿಳಿದ ನಂತರ ಅವರು ಆಲ್ಫಾಬೆಟ್ ಮಂಡಳಿಯ ಸದಸ್ಯ, ಉದ್ಯೋಗಿ ಮತ್ತು ನಿಯಂತ್ರಿಸುವ ಷೇರುದಾರರಾಗಿ ಉಳಿದಿದ್ದಾರೆ.[8]
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಮಾರ್ಚ್ ೨೦೨೪ ರ ಹೊತ್ತಿಗೆ ಪೇಜ್ರವರು ಅಂದಾಜು $ ೧೨೫ ಬಿಲಿಯನ್[9] ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ ಮತ್ತು ಫೋರ್ಬ್ಸ್ ಅವರ ಪ್ರಕಾರ, $ ೧೨೨.೮ ಬಿಲಿಯನ್ ಹೊಂದಿದ್ದಾರೆ. ಇದು ಅವರನ್ನು ವಿಶ್ವದ ಒಂಬತ್ತನೇ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡಿದೆ.[10] ಅವರು ಫ್ಲೈಯಿಂಗ್ ಕಾರ್ ಸ್ಟಾರ್ಟ್ಅಪ್ಗಳಾದ ಕಿಟ್ಟಿ ಹಾಕ್ ಮತ್ತು ಓಪನರ್ನಲ್ಲಿಯೂ ಹೂಡಿಕೆ ಮಾಡಿದ್ದಾರೆ.[11]
ಪೇಜ್ರವರು ಗೂಗಲ್ನ ಹುಡುಕಾಟ ಶ್ರೇಯಾಂಕ ಕ್ರಮಾವಳಿಯಾದ ಪೇಜ್ ಶ್ರೇಣಿಯ ಸಹ-ಸೃಷ್ಟಿಕರ್ತ ಮತ್ತು ಹೆಸರಾಗಿದ್ದಾರೆ.[12] ಇದಕ್ಕಾಗಿ ಅವರು ಸಹ-ಬರಹಗಾರ ಬ್ರಿನ್ ಅವರೊಂದಿಗೆ ೨೦೦೪ ರಲ್ಲಿ, ಮಾರ್ಕೋನಿ ಪ್ರಶಸ್ತಿಯನ್ನು ಪಡೆದರು.[13][14][15]