ವೇಟಿಂಗ್ ಫಾರ್ ಗೊಡಾಟ್
From Wikipedia, the free encyclopedia
ವೇಟಿಂಗ್ ಫಾರ್ ಗೊಡಾಟ್ (/[unsupported input]ˈɡɒdoʊ/ GOD-oh) ಎಂಬುದು ಸ್ಯಾಮ್ಯುಯೆಲ್ ಬೆಕೆಟ್ ಬರೆದಿರುವ ಒಂದು ಅಸಂಗತತೆಯ ನಾಟಕವಾಗಿದ್ದು, ಇದರಲ್ಲಿ ವ್ಲಾದಿಮಿರ್ ಮತ್ತು ಎಸ್ಟ್ರಾಗನ್ ಎಂಬ ಎರಡು ಪಾತ್ರಗಳು, ಗೊಡಾಟ್ ಎಂಬ ಹೆಸರನ್ನು ಹೊಂದಿರುವ ಯಾರೋ ಒಬ್ಬನು ಆಗಮಿಸುತ್ತಾನೆಂದು ಬಿಡುವಿಲ್ಲದಂತೆ ಮತ್ತು ವ್ಯರ್ಥವಾಗಿ ಕಾಯುತ್ತಿರುತ್ತವೆ. ಗೊಡಾಟ್ನ ಗೈರುಹಾಜರಿಯಷ್ಟೇ ಅಲ್ಲದೇ ನಾಟಕದ ಇತರ ಹಲವಾರು ಮಗ್ಗುಲುಗಳು ಅನೇಕ ವಿಭಿನ್ನ ಅರ್ಥಕಲ್ಪನೆಗಳಿಗೆ ದಾರಿಮಾಡಿಕೊಟ್ಟಿದ್ದು, ಇದು ನಾಟಕದ ಪ್ರಥಮ-ಪ್ರದರ್ಶನದ ಕಾಲದಿಂದಲೂ ಬೆಳೆದುಕೊಂಡು ಬಂದಿದೆ ಎಂಬುದು ಗಮನಾರ್ಹ ಸಂಗತಿ. ಇದನ್ನು "೨೦ನೇ ಶತಮಾನದ ಅತ್ಯಂತ ಗಮನಾರ್ಹವಾದ ಇಂಗ್ಲಿಷ್ ಭಾಷಾ ನಾಟಕ" ಎಂದು ಸರ್ವಸಮ್ಮತಿಯಿಂದ ಘೋಷಿಸಲಾಯಿತು.[1] ಎನ್ ಅಟೆಂಡೆಂಟ್ ಗೊಡಾಟ್ ಎಂಬ ಹೆಸರನ್ನುಳ್ಳ ತನ್ನದೇ ಮೂಲ ಫ್ರೆಂಚ್ ಕೃತಿಯ ಆವೃತ್ತಿಯನ್ನು ವೇಟಿಂಗ್ ಫಾರ್ ಗೊಡಾಟ್ ಎಂಬ ಹೆಸರಿನಲ್ಲಿ ಬೆಕೆಟ್ ಅನುವಾದಿಸಿದ್ದು, ಇದಕ್ಕೆ (ಇಂಗ್ಲಿಷ್ನಲ್ಲಿ ಮಾತ್ರ) "ಎರಡು ಅಂಕಗಳಲ್ಲಿರುವ ಒಂದು ದುರಂತಹರ್ಷ ನಾಟಕ" ಎಂಬ ಅಡಿಬರಹವನ್ನು ನೀಡಲಾಗಿದೆ.[2] ೧೯೪೮ರ ಅಕ್ಟೋಬರ್ ೯ ಮತ್ತು ೧೯೪೯ರ ಜನವರಿ ೨೯ರ ನಡುವೆ ಮೂಲ ಫ್ರೆಂಚ್ ಪಠ್ಯವು ರಚಿಸಲ್ಪಟ್ಟಿತು.[3] ಪ್ಯಾರಿಸ್ನ ಥಿಯೇಟ್ರೆ ಡಿ ಬ್ಯಾಬಿಲೋನ್ ಎಂಬ ರಂಗಮಂದಿರದಲ್ಲಿ ೧೯೫೩ರ ಜನವರಿ ೫ರಂದು ಇದರ ಪ್ರಥಮ ಪ್ರದರ್ಶನವು ನಡೆಯಿತು. ಸದರಿ ಕೃತಿಯನ್ನು ರೋಜರ್ ಬ್ಲಿನ್ ಎಂಬಾತ ನಿರ್ದೇಶಿಸಿದ; ಈತ ಅದರಲ್ಲಿ ಪೊಝೊನ ಪಾತ್ರವನ್ನೂ ನಿರ್ವಹಿಸಿದ ಎಂಬುದು ವಿಶೇಷ.