ವೆಸ್ಟ್ಮಿನಿಸ್ಟರ್ ಅರಮನೆ
From Wikipedia, the free encyclopedia
ವೆಸ್ಟ್ಮಿನಿಸ್ಟರ್ ಅರಮನೆ ಯನ್ನು ಸಂಸತ್ತು ಭವನಗಳು ಅಥವಾ ವೆಸ್ಟ್ಮಿನಿಸ್ಟರ್ ಅರಮನೆ ಎಂದೂ ಸಹ ಕರೆಯಲಾಗುತ್ತದೆ. ಇದು ಯುನೈಟೆಡ್ ಕಿಂಗ್ಡಮ್ ಸಂಸತ್ತಿನ ಎರಡೂ ಸದನಗಳು ಸಭೆ ಸೇರುವ ಕೇಂದ್ರ ಸ್ಥಳವಾಗಿದೆ— ಹೌಸ್ ಆಫ್ ಲಾರ್ಡ್ಸ್ ಹಾಗು ಹೌಸ್ ಆಫ್ ಕಾಮನ್ಸ್. ಇದು ವೆಸ್ಟ್ಮಿನಿಸ್ಟರ್ ನಗರದಲ್ಲಿರುವ ಲಂಡನ್ ಬರೋನ ಪೌರಾಡಳಿತ ಪ್ರದೇಶದ ಹೃದಯಭಾಗದಲ್ಲಿದ್ದು ಥೇಮ್ಸ್ ನದಿಯ [note 1]ಉತ್ತರ ದಂಡೆಯಲ್ಲಿ ಸ್ಥಿತವಾಗಿದೆ. ಇದು ಐತಿಹಾಸಿಕ ವೆಸ್ಟ್ಮಿನಿಸ್ಟರ್ ಅಬ್ಬೆಗೆ ಸಮೀಪದಲ್ಲಿರುವುದರ ಜೊತೆಗೆ, ವೈಟ್ ಹಾಲ್ ಹಾಗು ಡೌನಿಂಗ್ ಸ್ಟ್ರೀಟ್ ನ ಸರ್ಕಾರಿ ಕಟ್ಟಡಗಳಿಗೆ ನಿಕಟವಾಗಿದೆ. ಈ ಹೆಸರು ಅರಮನೆಯ ಎರಡು ವಿನ್ಯಾಸಗಳಲ್ಲಿ ಯಾವುದಕ್ಕೆ ಬೇಕಾದರೂ ಉಲ್ಲೇಖಿತವಾಗಬಹುದು: ಹಳೆಯ ಅರಮನೆ , ಮಧ್ಯಕಾಲೀನ ಕಟ್ಟಡ ಸಂಕೀರ್ಣವು ಬಹುತೇಕವಾಗಿ ೧೮೩೪ರಲ್ಲಿ ನಾಶವಾಯಿತು, ಹಾಗು ನಾವು ಇಂದು ಕಾಣುವುದು ಮರುವಿನ್ಯಾಸವಾದ ಹೊಸ ಅರಮನೆ ; ಇದು ವಿಧ್ಯುಕ್ತವಾದ ಸಮಾರಂಭಗಳಿಗೆ ರಾಜವಂಶದ ನೆಲೆಯಾಗಿ ತನ್ನ ಮೂಲ ಶೈಲಿ ಹಾಗು ಸ್ಥಾನಮಾನಗಳನ್ನು ಹಾಗೆ ಉಳಿಸಿಕೊಂಡಿದೆ.
Westminster Palace, Westminster Abbey and Saint Margaret's Church | |
---|---|
ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವ ಹೆಸರು | |
ಪ್ರಕಾರ | Cultural |
ಮಾನದಂಡಗಳು | i, ii, iv |
ಉಲ್ಲೇಖ | 426 |
ಯುನೆಸ್ಕೊ ಪ್ರದೇಶ | Europe and North America |
ದಾಖಲೆಯ ಇತಿಹಾಸ | |
Inscription | 1987 (11th ಸಮಾವೇಶ) |
ಈ ಸ್ಥಳದಲ್ಲಿ ಮೊದಲ ರಾಜವಂಶದ ಅರಮನೆಯನ್ನು ಹನ್ನೊಂದನೇ ಶತಮಾನದಲ್ಲಿ ನಿರ್ಮಿಸಲಾಯಿತು;ಹಾಗು ವೆಸ್ಟ್ಮಿನಿಸ್ಟರ್ ಅರಮನೆ ಸಂಕೀರ್ಣವು ೧೫೧೨ರಲ್ಲಿ ಬೆಂಕಿಗಾಹುತಿಯಾಗುವ ಮುನ್ನ ಇಂಗ್ಲೆಂಡ್ ರಾಜರುಗಳಿಗೆ ಪ್ರಮುಖ ಲಂಡನ್ ನಿವಾಸವಾಗಿತ್ತು. ಇದರ ನಂತರ, ಇದನ್ನು ಸಂಸತ್ತಿನ ಭವನವಾಗಿ ಬಳಸಿಕೊಳ್ಳಲಾಗುತ್ತಿತ್ತು. ಅಲ್ಲಿಂದೀಚೆಗೆ ಹದಿಮೂರನೇ ಶತಮಾನದಿಂದ ಶಾಸನ ಸಭೆಗಳು ಇಲ್ಲಿಯೇ ನಡೆಯುತ್ತವೆ, ಹಾಗು ರಾಯಲ್ ಕೋರ್ಟ್ ಆಫ್ ಜಸ್ಟಿಸ್ ನ ಪೀಠವು, ವೆಸ್ಟ್ಮಿನಿಸ್ಟರ್ ಹಾಲ್ ನ ಒಳಗೆ ಹಾಗು ಸುತ್ತಮುತ್ತ ನೆಲೆಯಾಗಿದೆ. ಆಗ ೧೮೩೪ರಲ್ಲಿ, ಸಂಸತ್ತು ಭವನಗಳ ಮೇಲೆ ಭೀಕರ ಬೆಂಕಿ ಅನಾಹುತ ಸಂಭವಿಸಿತು.ಈ ಸಂದರ್ಭದಲ್ಲಿನ ಈ ಅನಾಹುತದಲ್ಲಿ ಉಳಿದ ಮಹತ್ವದ ವಿನ್ಯಾಸಗಳೆಂದರೆ ವೆಸ್ಟ್ಮಿನಿಸ್ಟರ್ ಹಾಲ್, ಸೆಂಟ್ ಸ್ಟೀಫನ್ಸ್ ನ ಸನ್ಯಾಸಿಗೃಹ, ಚ್ಯಾಪಲ್ ಆಫ್ ಸೆಂಟ್ ಮೇರಿ ಅಂಡರ್ಕ್ರಾಫ್ಟ್ ಹಾಗು ಜ್ಯುವೆಲ್ ಟವರ್.
ತರುವಾಯ ಅರಮನೆಯ ಮರುನಿರ್ಮಿಸುವ ವಿನ್ಯಾಸಕ್ಕಾಗಿ ನಡೆದ ಹರಾಜು ಪೈಪೋಟಿಯಲ್ಲಿ ವಿನ್ಯಾಸಕಾರ ಚಾರ್ಲ್ಸ್ ಬ್ಯಾರಿ ವಿಜಯಿಯಾದರು; ಹೀಗೆ ಈ ಕಟ್ಟಡವನ್ನು ಪರ್ಪೆಂಡಿಕ್ಯುಲರ್ ಗೋಥಿಕ್(ದೊಡ್ಡ ಕಿಟಕಿಗಳ ತಲೆಭಾಗದಲ್ಲಿ ಲಂಬ ಕೆತ್ತನೆ ಅಲಂಕಾರವಿರುವ ಇಂಗ್ಲೀಷ್ ಗೋಥಿಕ್ ಶೈಲಿ) ಶೈಲಿಯಲ್ಲಿ ವಿನ್ಯಾಸಗೊಳಿಸಲಾಯಿತು. ಹಳೆ ಅರಮನೆಯ ಅವಶೇಷಗಳನ್ನು(ಬೇರ್ಪಟ್ಟ ಜ್ಯುವೆಲ್ ಟವರ್ ನ್ನು ಹೊರತುಪಡಿಸಿ) ಇನ್ನು ಹೆಚ್ಚಿನ ಬದಲಾವಣೆಯೊಂದಿಗೆ ಸಂಘಟಿಸಲಾಯಿತು. ಇದು ಅರಮನೆ ಅಂಗಳದ ಎರಡು ಸರಣಿಗಳ ಸುತ್ತಲೂ ಸಮ್ಮಿತೀಯವಾಗಿ ವ್ಯವಸ್ಥೆಗೊಳಿಸಿದ ೧,೧೦೦ಕ್ಕೂ ಅಧಿಕ ಕೊಠಡಿಗಳನ್ನು ಹೊಂದಿದೆ. ಹೊಸ ಅರಮನೆ ಪ್ರದೇಶದ ಸ್ವಲ್ಪ ಸ್ಥಳಾವಕಾಶವನ್ನು3.24 hectares (8 acres) ಥೇಮ್ಸ್ ನಿಂದ ತೆಗೆದುಕೊಳ್ಳಲಾಯಿತು, ಇದು ಪ್ರಮುಖ ಮುಂಭಾಗವಾಗಿದ್ದು, ನದಿಯ ಸಮ್ಮುಖದಲ್ಲಿ 265.8-metre (872 ft)ನಿರ್ಮಾಣಗೊಂಡಿದೆ. ವಿನ್ಯಾಸಕಾರ ಬ್ಯಾರಿಗೆ ಅಗಸ್ಟಸ್ W.N. ಪುಗಿನ್ ,ನಿರ್ಮಾಣಕಾರ್ಯದಲ್ಲಿ ನೆರವು ನೀಡಿದರು.ಇವರು ಗೋಥಿಕ್ ವಿನ್ಯಾಸ ಹಾಗು ಶೈಲಿಯ ಒಬ್ಬ ಮುಂಚೂಣಿ ವಿನ್ಯಾಸಕಾರನಾಗಿದ್ದರು, ಅಲ್ಲದೇ ಅರಮನೆಯ ಅಲಂಕರಣ ಹಾಗು ಪೀಠೋಪಕರಣಗಳ ವಿನ್ಯಾಸಗಳನ್ನೂ ಒದಗಿಸಿದರು. ನಿರ್ಮಾಣಕಾರ್ಯವು ೧೮೪೦ರಲ್ಲಿ ಆರಂಭಗೊಂಡು, ಮೂವತ್ತು ವರ್ಷಗಳ ಕಾಲ ನಡೆಯಿತು, ನಿರ್ಮಾಣಕಾರ್ಯದಲ್ಲಿ ವಿಳಂಬ ಹಾಗು ಹೆಚ್ಚಿನ ವೆಚ್ಚಗಳು ತಗುಲಿದವು. ಜೊತೆಗೆ ಈ ವೇಳೆಯಲ್ಲಿಯೇ ಇಬ್ಬರು ಪ್ರಮುಖ ವಿನ್ಯಾಸಕಾರರು ನಿಧನರಾದರು; ಒಳಾಂಗಣ ವಿನ್ಯಾಸವು ಇಪ್ಪತ್ತನೆ ಶತಮಾನದವರೆಗೂ ಅಷ್ಟಿಷ್ಟಾಗಿ ನಡೆಯಿತು. ಅಲ್ಲಿಂದೀಚೆಗೆ ಪ್ರಮುಖ ಸಂರಕ್ಷಣಾ ಕಾರ್ಯ ನಡೆಯುತ್ತಿದೆ, ಏಕೆಂದರೆ ಲಂಡನ್ ನಲ್ಲಿ ಉಂಟಾಗುತ್ತಿರುವ ವಾಯು ಮಾಲಿನ್ಯ, ಹಾಗು ಎರಡನೇ ವಿಶ್ವ ಸಮರದ ನಂತರ ವ್ಯಾಪಕವಾಗಿ ದುರಸ್ತಿ ಕೆಲಸಗಳು ನಡೆಯುತ್ತಿವೆ. ಇದರಲ್ಲಿ ೧೯೪೧ರಲ್ಲಿ ನಡೆದ ಬಾಂಬ್ ದಾಳಿಯ ನಂತರದ ಕಾಮನ್ಸ್ ಚೇಂಬರ್ ನ ಮರುನಿರ್ಮಾಣ ಕಾರ್ಯವೂ ಸೇರಿದೆ.
ಅರಮನೆಯು, ಯುನೈಟೆಡ್ ಕಿಂಗ್ಡಂನ ರಾಜಕೀಯ ಜೀವನದ ಕೇಂದ್ರಬಿಂದುವಾಗಿದೆ; "ವೆಸ್ಟ್ಮಿನಿಸ್ಟರ್" UK ಸಂಸತ್ತಿಗೆ ಒಂದು ಲಾಕ್ಷಣಿಕ ಪದವಾಗಿ ಪರಿಣಮಿಸಿದೆ. ಅಲ್ಲದೇ ವೆಸ್ಟ್ಮಿನಿಸ್ಟರ್ ಆಡಳಿತ ವ್ಯವಸ್ಥೆಯು ಇದರಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಅದರಲ್ಲೂ ವಿಶೇಷವಾಗಿ ಇದರ ಗಡಿಯಾರ ಗೋಪುರವು, ತನ್ನ ಪ್ರಮುಖ ಗಂಟೆಯಿಂದ "ಬಿಗ್ ಬೆನ್" ಎಂಬ ಹೆಸರಿನಿಂದ ಪರಿಚಿತವಾಗಿದೆ. ಇದು ಲಂಡನ್ ನ ಹಾಗು ಒಟ್ಟಾರೆಯಾಗಿ ಯುನೈಟೆಡ್ ಕಿಂಗ್ಡಂನ ಒಂದು ಪ್ರತಿಮಾರೂಪದ ಹೆಗ್ಗುರುತಾಗಿದೆ.ಇದು ನಗರದ ಒಂದು ಅತ್ಯಂತ ಜನಪ್ರಿಯ ಆಕರ್ಷಣೆಗಳಲ್ಲಿ ಒಂದಾಗಿರುವುದರ ಜೊತೆಗೆ ಸಂಸತ್ತಿನ ಪ್ರಜಾಸತ್ತೆಯ ಒಂದು ಲಾಂಛನವಾಗಿದೆ. ವೆಸ್ಟ್ಮಿನಿಸ್ಟರ್ ಅರಮನೆಯು, ೧೯೭೦ರಿಂದಲೂ ಗ್ರೇಡ್ I ಪಟ್ಟಿಯಲ್ಲಿರುವ ಕಟ್ಟಡವಾಗಿದೆ; ಹಾಗು ೧೯೮೭ರಿಂದ UNESCO ವರ್ಲ್ಡ್ ಹೆರಿಟೇಜ್ ಸೈಟ್ ನ(ವಿಶ್ವ ಪರಂಪರೆಯ ಸ್ಮಾರಕ) ಭಾಗವಾಗಿದೆ.