ಒಂದು ಪ್ರಮುಖ ಧರ್ಮವನ್ನು ವ್ಯಾಖ್ಯಾನಿಸುವ ಒಂದು ಮಾರ್ಗವೆಂದರೆ ಪ್ರಸ್ತುತ ಅನುಯಾಯಿಗಳ ಸಂಖ್ಯೆಯಿಂದ. ಧರ್ಮದ ಜನಸಂಖ್ಯೆಯ ಸಂಖ್ಯೆಯನ್ನು ಜನಗಣತಿ ವರದಿಗಳು ಮತ್ತು ಜನಸಂಖ್ಯಾ ಸಮೀಕ್ಷೆಗಳ ಸಂಯೋಜನೆಯಿಂದ ಲೆಕ್ಕಹಾಕಲಾಗುತ್ತದೆ (ಜನಗಣತಿಯಲ್ಲಿ ಧರ್ಮದ ಮಾಹಿತಿಯನ್ನು(ಡೇಟಾವನ್ನು) ಸಂಗ್ರಹಿಸದ ದೇಶಗಳಲ್ಲಿ, ಉದಾಹರಣೆಗೆ ಯುನೈಟೆಡ್ ಸ್ಟೇಟ್ಸ್ ಅಥವಾ ಫ್ರಾನ್ಸ್), ಆದರೆ ಪ್ರಶ್ನೆಗಳನ್ನು ರಚಿಸುವ ವಿಧಾನವನ್ನು ಅವಲಂಬಿಸಿ ಫಲಿತಾಂಶಗಳು ವ್ಯಾಪಕವಾಗಿ ಬದಲಾಗಬಹುದು, ಬಳಸಿದ ಧರ್ಮದ ವ್ಯಾಖ್ಯಾನಗಳು ಮತ್ತು ಸಮೀಕ್ಷೆಯನ್ನು ನಡೆಸುವ ಏಜೆನ್ಸಿಗಳು ಅಥವಾ ಸಂಸ್ಥೆಗಳ ಪಕ್ಷಪಾತ. ಅನೌಪಚಾರಿಕ ಅಥವಾ ಅಸಂಘಟಿತ ಧರ್ಮಗಳನ್ನು ಎಣಿಸುವುದು ವಿಶೇಷವಾಗಿ ಕಷ್ಟ.
ವಿಶ್ವದ ಜನಸಂಖ್ಯೆಯ ಧಾರ್ಮಿಕತೆಯ ವಿವರವನ್ನು ನಿರ್ಧರಿಸುವ ಅತ್ಯುತ್ತಮ ವಿಧಾನದ ಬಗ್ಗೆ ಸಂಶೋಧಕರಲ್ಲಿ ಒಮ್ಮತವಿಲ್ಲ. ಹಲವಾರು ಮೂಲಭೂತ ಅಂಶಗಳು ಬಗೆಹರಿಯದವು:[1]