ವಿಧಾನಸೌಧ
From Wikipedia, the free encyclopedia
ವಿಧಾನಸೌಧವು ಕರ್ನಾಟಕದ ವಿಧಾನ ಮಂಡಲದ ಸಭೆ ನಡೆಯುವ ಕಟ್ಟಡ [1].ಇದರ ನಿರ್ಮಾಣವು ಮಾಜಿಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಆಡಳಿತದ ಅವಧಿಯಲ್ಲಿ ನಿರ್ಮಾಣವಾಯಿತು. ವಿಧಾನಸೌಧಕ್ಕೆ 1951 ಜುಲೈ 13ರಂದು ಅಂದಿನ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಶಂಕುಸ್ಥಾಪನೆ ಮಾಡಿದರು. ೧೯೫೨ರಲ್ಲಿ ಪ್ರಾರಂಭವಾದ ಕಟ್ಟಡ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಲು ನಾಲ್ಕು ವರ್ಷಗಳಾದವು. ೫೦೦೦ಕ್ಕೂ ಹೆಚ್ಚು ಕೆಲಸಗಾರರು ಈ ಕಟ್ಟಡ ನಿರ್ಮಾಣದಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಸಾರ್ವಜನಿಕ ಕಾರ್ಯಗಳ ಇಲಾಖೆಯಲ್ಲಿ ಮುಖ್ಯ ಎಂಜಿನಿಯರ್ ಹಾಗೂ ವಾಸ್ತುಶಿಲ್ಪಿಯಾಗಿದ್ದ ಮಾಣಿಕ್ಯಂ ಕಟ್ಟಡ ನಿರ್ಮಾಣದ ಉಸ್ತುವಾರಿ ನೋಡಿಕೊಂಡರು. ಇದರ ವಾಸ್ತುಶಿಲ್ಪವು ಮೈಸೂರು ದ್ರಾವಿಡ ಶೈಲಿ ಎಂದು ಕೆಲವರು ಕರೆಯುತ್ತಾರೆ.[2]. ಈ ಕಟ್ಟಡದ ವಾಸ್ತುಶೈಲಿಯಲ್ಲಿ ಇಂಡೋ ಸಾರ್ಸೆನಿಕ್ ಮತ್ತು ದ್ರಾವಿಡ ಶೈಲಿಯ ಹಲವಾರು ಅಂಶಗಳು ಆಡಕವಾಗಿದೆ.[3] ಕರ್ನಾಟಕದ ಗೆಜೆಟ್ ಪ್ರಕಾರ ಅಂದು ವಿಧಾನಸೌಧ ಕಟ್ಟಲು ತಗುಲಿದ ವೆಚ್ಚ ₹ 1.75ಕೋಟಿ.
Quick Facts ವಿಧಾನ ಸೌಧ, ಸಾಮಾನ್ಯ ಮಾಹಿತಿ ...
ವಿಧಾನ ಸೌಧ | |
---|---|
ವಿಧಾನ ಸೌಧ | |
ಸಾಮಾನ್ಯ ಮಾಹಿತಿ | |
ಮಾದರಿ | Legislative building |
ವಾಸ್ತುಶಾಸ್ತ್ರ ಶೈಲಿ | Neo-Dravidian |
ಸ್ಥಳ | ಬೆಂಗಳೂರು,ಕರ್ನಾಟಕ |
ದೇಶ | ಭಾರತ |
ನಿರ್ದೇಶಾಂಕ | 12.979693°N 77.590658°E / 12.979693; 77.590658 |
ನಿರ್ಮಾಣ ಪ್ರಾರಂಭ | 1952 |
ಮುಕ್ತಾಯ | 1956 |
ಬೆಲೆ | ₹14.8 ದಶಲಕ್ಷ (ಯುಎಸ್$೩,೨೮,೫೬೦) |
ಎತ್ತರ | 150 feet (46 m) |
ತಾಂತ್ರಿಕ ವಿವರಗಳು | |
Floor count | 4 + 1 basement |
ನೆಲದ ವಿಸ್ತೀರ್ಣ | 505,505 square feet (46,963.0 m2) |
ವಿನ್ಯಾಸ ಮತ್ತು ನಿರ್ಮಾಣ | |
Owner | ಕರ್ನಾಟಕ ಸರಕಾರ |
Main contractor | KPWD |
ವಾಸ್ತುಶಿಲ್ಪಿ | ಬಿ.ಆರ್.ಮಾಣಿಕ್ಯಮ್ |
Other information | |
Seating capacity | ೩೦೦ ಸದಸ್ಯರು |
Close