ರೋಸಾಲಿಂಡ್ ಫ್ರಾಂಕ್ಲಿನ್
From Wikipedia, the free encyclopedia
ರೋಸಾಲಿಂಡ್ ಎಲ್ಸೀ ಫ್ರಾಂಕ್ಲಿನ್ (೨೫ ಜುಲೈ ೧೯೨೦-೧೬ ಎಪ್ರಿಲ್ ೧೯೬೮) ಒಬ್ಬ ಪ್ರಖ್ಯಾತ ಆಂಗ್ಲ ರಸಾಯನತಜ್ಞೆ ಮತ್ತು ಕ್ಷ-ಕಿರಣ ಸ್ಫಟಿಕ ವಿಜ್ಞಾನಿ[1].ಡಿ.ಎನ್.ಎ (ಡಿ ಆಕ್ಸಿ ರೈಬೊನ್ಯುಕ್ಲಿಕ್ ಆಸಿಡ್) ,ಆರ್.ಎನ್.ಎ(ರೈಬೊನ್ಯುಕ್ಲಿಕ್ ಆಸಿಡ್) ,ವೈರಾಣು,ಕಲ್ಲಿದ್ದಲು ಮತ್ತು ಗ್ರಾಫೈಟ್ ಗಳ ಆಣ್ವಿಕ ರಚನೆಗಳನ್ನು ಅರ್ಥೈಸಿಕೊಳ್ಳುವುದರಲ್ಲಿ ಇವರ ಕೊಡುಗೆಗಳು ಅಪಾರ.ಕಲ್ಲಿದ್ದಲು ಮತ್ತು ವೈರಾಣುಗಳ ಮೇಲಿನ ಇವರ ಕೃತಿಗಳು ಅವರ ಜೀವಿತಾವಧಿಯಲ್ಲಿ ಮೆಚ್ಚುಗೆ ಪಡೆದಿತ್ತಾದರೂ,ಇವರು ಡಿ.ಎನ್.ಎ ಸಂಶೋಧನೆಗೆ ನೀಡಿದ ಕೊಡುಗೆಗಳನ್ನು ಹೆಚ್ಚಾಗಿ ಮರಣೋತ್ತರವಾಗಿ ಗುರುತಿಸಲಾಯಿತು.ರೊಸಾಲಿಂಡ್ ಫ್ರಾಂಕ್ಲಿನ್ ನಂತೆ ತನ್ನ ಬದುಕು ಮತ್ತು ಕೃತಿಗಳ ವಿಚಾರವಾಗಿ ಹೆಚ್ಚು ವಿವಾದಕ್ಕೀಡಾದ ಯಾವುದೇ ಇತರ ಮಹಿಳಾ ವಿಜ್ಞಾನಿ ಬಹುಶಃ ಇಲ್ಲ[2].
Quick Facts ರೋಸಾಲಿಂಡ್ ಫ್ರಾಂಕ್ಲಿನ್, ಜನನ ...
ರೋಸಾಲಿಂಡ್ ಫ್ರಾಂಕ್ಲಿನ್ | |
---|---|
ಜನನ | ರೋಸಾಲಿಂಡ್ ಫ್ರಾಂಕ್ಲಿನ್ ೨೫-೦೭-೧೯೨೦ |
ಮರಣ | ೧೬-೦೪-೧೯೬೮ |
Cause of death | ಅಂಡಾಶಯ ಕ್ಯಾನ್ಸರ್ |
ರಾಷ್ಟ್ರೀಯತೆ | ಬ್ರಿಟಿಷ್ |
ವೃತ್ತಿ | ಕ್ಷ-ಕಿರಣ ಸ್ಫಟಿಕ ವಿಜ್ಞಾನಿ |
Close
ಈ ಹೊಸ ವಿಕಿಪೀಡಿಯ ಪುಟವನ್ನು ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಹೊಸದಾಗಿ ವಿಕಿಪೀಡಿಯ ಕಲಿಯುತ್ತಿರುವವರಿಂದ ತಯಾರಾದ ಲೇಖನವಿದು. ವಿಕಿಪೀಡಿಯದ ಉತ್ತಮ ಲೇಖನದ ಎಲ್ಲ ಗುಣಮಟ್ಟಗಳನ್ನು ಇದು ಒಳಗೊಂಡಿಲ್ಲದಿರಬಹುದು. ಸಮುದಾಯದವರು ಈ ಲೇಖನವನ್ನು ಉತ್ತಮ ಲೇಖನವನ್ನಾಗಿಸಬಹುದು. ಹಾಗೆ ಮಾಡುವುದರಿಂದ ಲೇಖನ ತಯಾರಿಸಿದ ಹೊಸ ಸಂಪಾದಕರಿಗೆ ಉತ್ತಮ ಲೇಖನ ಹೇಗಿರಬೇಕು ಎಂಬ ಮಾಹಿತಿಯೂ ದೊರೆಯುತ್ತದೆ. |