ರೂಮಿ ದರ್ವಾಜ಼ಾ
From Wikipedia, the free encyclopedia
ರೂಮಿ ದರ್ವಾಜ಼ಾ (ಹಿಂದಿ: रूमी दरवाज़ा ಕೆಲವೊಮ್ಮೆ ಟರ್ಕಿಷ್ ಗೇಟ್ ಎಂದು ಕರೆಯಲ್ಪಡುತ್ತದೆ) ಭಾರತದ ಉತ್ತರ ಪ್ರದೇಶ ರಾಜ್ಯದ ಲಕ್ನೋದಲ್ಲಿರುವ ಒಂದು ಭವ್ಯವಾದ ಹೆಬ್ಬಾಗಿಲು. ಇದನ್ನು ನವಾಬ್ ಅಸಫ಼್ - ಉದ್ - ದೌಲಾನ ಆಶ್ರಯದಲ್ಲಿ ೧೭೮೪ರಲ್ಲಿ ನಿರ್ಮಿಸಲಾಯಿತು.[1] ಇದು ಅವಧಿ ವಾಸ್ತುಕಲೆಯ ಉದಾಹರಣೆಯಾಗಿದೆ. ಅರವತ್ತು ಅಡಿ ಎತ್ತರವಿರುವ ರೂಮಿ ದರ್ವಾಜ಼ಾವನ್ನು ಇಸ್ತಾಂಬುಲ್ನಲ್ಲಿರುವ ಬಾಬಿ ಹುಮಾಯ್ಞೂ ಕಟ್ಟಡವನ್ನು ಆಧರಿಸಿ ರಚಿಸಲಾಗಿದೆ.[2]
ಇದು ಲಕ್ನೋದಲ್ಲಿನ ಅಸಫ಼ಿ ಇಮಾಮ್ಬಾಡಾದ ಪಕ್ಕದಲ್ಲಿದೆ ಮತ್ತು ಲಕ್ನೋ ನಗರದ ಲಾಂಛನವಾಗಿಬಿಟ್ಟಿದೆ. ಇದು ಹಳೆ ಲಕ್ನೋ ನಗರದ ಪ್ರವೇಶದ್ವಾರವನ್ನು ಗುರುತಿಸುತ್ತಿತ್ತು. ಆದರೆ ನವಾಬರ ನಗರಿಯು ಬೆಳೆದು ವಿಸ್ತರಿಸಿದಂತೆ, ಇದನ್ನು ನಂತರ ಒಂದು ಅರಮನೆಯ ಪ್ರವೇಶದ್ವಾರವಾಗಿ ಬಳಸಲಾಯಿತು. ಈ ಅರಮನೆಯನ್ನು ನಂತರ ಬ್ರಿಟಿಷ್ ದಂಗೆಕೋರರು ನಾಶಪಡಿಸಿದರು.