ಯಕ್ಕ
From Wikipedia, the free encyclopedia
ಯಕ್ಕ ಅಮೆರಿಕ ಸಂಯುಕ್ತ ಸಂಸ್ಥಾನಗಳ ನೈಋತ್ಯ ಭಾಗ ಮತ್ತು ಮೆಕ್ಸಿಕೋ ಪ್ರದೇಶಗಳಲ್ಲಿ ಕಾಣದೊರೆಯುವ ಉಪಯುಕ್ತ ಸಸ್ಯಜಾತಿ.[2][3] ಲಿಲಿಯೇಸೀ ಕುಟುಂಬಕ್ಕೆ ಸೇರಿದ ಇದರಲ್ಲಿ ಸುಮಾರು 49 ಪ್ರಭೇದಗಳು ಮತ್ತು 24 ಉಪಪ್ರಭೇದಗಳಿವೆ. ಇವುಗಳ ಪೈಕಿಯ ಯಕ್ಕ ಅಲಾಯ್ಫೋಲಿಯ (ಸ್ಪ್ಯಾನಿಷ್ ಬಾಯನೆಟ್-ಆಲವೀ ಯಕ್ಕ), ಯ. ಫಿಲಿಮೆಂಟೋಸ (ಆಡಮ್ಸ ನೀಡಲ್-ಕರಡಿ ಹುಲ್ಲು-ರೇಷ್ಮೆ ಹುಲ್ಲು), ಯ. ಗ್ಲೋರಿಯೋಸ, ಯ. ಬ್ರೆವಿಪೋಲಿಯ (ಜೋಷುವ ಟ್ರೀ), ಯ. ಶಿಡಿಗೆರ (ಮೊಹೇವ್ ಯುಕ್ಕ) ಮುಂತಾದವು ಪ್ರಸಿದ್ಧವಾಗಿವೆ. ಇವು ಸ್ವಾಭಾವಿಕವಾಗಿ ಮರುಭೂಮಿಗಳಲ್ಲಿ, ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಇಲ್ಲವೆ ಬೇಸಾಯ ಮಾಡದಿರುವ ಪಾಳುನೆಲಗಳಲ್ಲಿ ಬೆಳೆಯುತ್ತವೆ. ಇವು ಕಾಡುಗಿಡಗಳಾದರೂ ಸುಂದರವಾಗಿರುವುದರಿಂದ ಕೆಲವನ್ನು ತೋಟಗಳಲ್ಲಿ ಅಲಂಕಾರಕ್ಕಾಗಿ ಬೆಳೆಸುವುದುಂಟು.
Quick Facts ಯಕ್ಕ, Scientific classification ...
ಯಕ್ಕ | |
---|---|
Yucca filamentosa naturalized in New Zealand | |
Scientific classification | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಏಕದಳ ಸಸ್ಯ |
ಗಣ: | ಆಸ್ಪರಾಗೇಲ್ಸ್ |
ಕುಟುಂಬ: | ಆಸ್ಪರಗೇಸೀ |
ಉಪಕುಟುಂಬ: | ಅಗೇವಾಯ್ಡೀ |
ಕುಲ: | ಯಕ್ಕ L. |
Species | |
See text | |
Synonyms | |
|
Close