ಮೂಲಸೌಕರ್ಯ
From Wikipedia, the free encyclopedia
ಮೂಲಸೌಕರ್ಯ ವು ಸಮಾಜ ಅಥವಾ ಉದ್ಯಮದ ಕಾರ್ಯಾಚರಣೆಗೆ ಅಗತ್ಯವಾದ ಮೂಲಭೂತ ಭೌತಿಕ ಮತ್ತು ಸಾಂಸ್ಥಿಕ ರಚನೆಗಳಾಗಿವೆ.[1] ಅಥವಾ ಆರ್ಥಿಕತೆಯ ನಿರ್ವಹಣೆಗೆ ಅಗತ್ಯವಾದ ಸೇವೆಗಳನ್ನು ಮತ್ತು ಸೌಲಭ್ಯಗಳನ್ನು ಒಳಗೊಂಡಿರುತ್ತದೆ.[2] ಈ ಪದವು ಸಾಮಾನ್ಯವಾಗಿ ಸಮಾಜಕ್ಕೆ ಪೂರಕವಾದ ತಾಂತ್ರಿಕ ರಚನೆಗಳನ್ನು ಉಲ್ಲೇಖಿಸುತ್ತದೆ. ಉದಾಹರಣೆಗೆ ರಸ್ತೆಗಳು, ಜಲಪೂರೈಕೆ, ಒಳಚರಂಡಿಗಳು, ವಿದ್ಯುತ್ ಜಾಲಗಳು, ದೂರಸಂಪರ್ಕಗಳು ಇತರೆ. ಕ್ರಿಯಾತ್ಮಕವಾಗಿ ಗಮನಿಸಿದಾಗ, ಮೂಲಸೌಕರ್ಯವು ಸರಕುಗಳ ಉತ್ಪನ್ನ ಮತ್ತು ಸೇವೆಗಳನ್ನು ಸುಗಮಗೊಳಿಸುತ್ತದೆ. ಉದಾಹರಣೆಗೆ, ರಸ್ತೆಗಳಿಂದ ಕಚ್ಚಾವಸ್ತುಗಳನ್ನು ಕಾರ್ಖಾನೆಗೆ ಸಾಗಿಸಲು ಸಾಧ್ಯವಾಗುತ್ತದೆ ಮತ್ತು ತಯಾರಾದ ಉತ್ಪನ್ನಗಳನ್ನು ಮಾರುಕಟ್ಟೆಗೆ ವಿತರಿಸಲು ನೆರವಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಈ ಪದವು ಮೂಲಭೂತ ಸಾಮಾಜಿಕ ಸೇವೆಗಳಾದ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಒಳಗೊಂಡಿರುತ್ತದೆ.[3] ಮಿಲಿಟರಿ ರೂಢಿ ಮಾತಿನಲ್ಲಿ ಈ ಪದವು ಮಿಲಿಟರಿ ಪಡೆಗಳ ಬೆಂಬಲ, ಮರುನಿಯೋಜನೆ ಮತ್ತು ಕಾರ್ಯಾಚರಣೆಗೆ ಅಗತ್ಯವಾದ ಕಟ್ಟಡಗಳು ಮತ್ತು ಕಾಯಂ ಅಳವಡಿಕೆಗಳನ್ನು ಉಲ್ಲೇಖಿಸುತ್ತದೆ.[4]