ಮಾಧವೀಲತೆ
From Wikipedia, the free encyclopedia
ಮಾಧವೀಲತೆ ಒಂದು ಮರಬಳ್ಳಿ. ಮಾಲ್ಪೀಘಿಯೇಸೀ ಕುಟುಂಬಕ್ಕೆ ಸೇರಿದ ಹಂಬುಸಸ್ಯ. ವಸಂತದೂತಿ, ಚಂದ್ರವಳ್ಳಿ, ಮಧುಮಾಲತಿ ಮುಂತಾದ ಆಕರ್ಷಕ ಪರ್ಯಾಯ ನಾಮಗಳಿವೆ. ಇದನ್ನು ಮಲೆನಾಡಿನಲ್ಲಿ ಗಂಚೀ ಹಂಬು ಎಂದು ಕರೆಯಲಾಗುತ್ತದೆ. ಇದರ ಸಸ್ಯವೈಜ್ಞಾನಿಕ ಹೆಸರು ಹಿಪ್ಟೇಜ್ ಬೆಂಗಾಲೆನ್ಸಿಸ್. ದಕ್ಷಿಣ ಏಷಿಯಾ ಪ್ರದೇಶದ ಮೂಲನಿವಾಸಿ.[1][2] ಈ ಸಸ್ಯಗಳ ಸಂಖ್ಯೆ ಬಹಳ ಕಡಿಮೆಯಾಗಿದ್ದು, ಇದರ ಸಂರಕ್ಷಣೆ ಮಾಡಬೇಕಾಗಿದೆ. ಸದಾಹಸುರಾಗಿರುವ ಇದು ತನ್ನ ಚೆಲುವಾದ ರೂಪದಿಂದಲೂ ಸುಗಂಧಪೂರಿತ ಹೂವುಗಳಿಂದಲೂ ಬಲು ಪ್ರಾಚೀನ ಕಾಲದಿಂದ ಅಲಂಕಾರ ಸಸ್ಯವಾಗಿ ಪ್ರಸಿದ್ಧವಾಗಿದೆ. ಕಾಳೀದಾಸನ ನಾಟಕದಲ್ಲಿ ಇದರ ಉಲ್ಲೇಖವಿದೆ. ಹರಿಹರನ ರಗಳೆಗಳಲ್ಲೂ ಈ ಹೂವಿನ ವರ್ಣನೆಯನ್ನು ಕಾಣಬಹುದು.
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಡಿಸೆಂಬರ್ ೨೦೧೫) |
Quick Facts ಮಾಧವೀಲತೆ, Conservation status ...
Close