ಮಾಂಡು
From Wikipedia, the free encyclopedia
ಮಾಂಡು ಅಥವಾ ಮಾಂಡವ್ಗಡ್ ಧಾರ್ ಜಿಲ್ಲೆಯ ಇಂದಿನ ಮಾಂಡವ್ ಪ್ರದೇಶದಲ್ಲಿರುವ ಒಂದು ಪ್ರಾಚೀನ ನಗರವಾಗಿದೆ. ಇದು ಪಶ್ಚಿಮ ಮಧ್ಯ ಪ್ರದೇಶದ ಮಾಲ್ವಾ ಪ್ರದೇಶದಲ್ಲಿ, ಧಾರ್ ನಗರದಿಂದ ೩೫ ಕಿ.ಮಿ. ದೂರದಲ್ಲಿ ಸ್ಥಿತವಾಗಿದೆ. ೧೧ನೇ ಶತಮಾನದಲ್ಲಿ, ಮಾಂಡು ತರಂಗಗಢ್ ಅಥವಾ ತರಂಗ ರಾಜ್ಯದ ಉಪವಿಭಾಗವಾಗಿತ್ತು.[1] ಕಲ್ಲುಬಂಡೆಗಳ ಹೊರಚಾಚಿನ ಮೇಲಿರುವ ಈ ಕೋಟೆ ಪಟ್ಟಣವು ತನ್ನ ವಾಸ್ತುಕಲೆಗೆ ಪ್ರಸಿದ್ಧವಾಗಿದೆ.