ಮಣ್ಣು
From Wikipedia, the free encyclopedia
ಮಣ್ಣು ಒಂದು ಸ್ವಾಭಾವಿಕ ವಸ್ತು. ಇದರಲ್ಲಿ ಖನಿಜಾಂಶವುಳ್ಳ ವಿವಿಧ ಗಾತ್ರದ ಅನೇಕ ಪದರುಗಳಿವೆ(ಸಾಯಿಲ್ ಹಾರಿಜಾನ್ಸ್), ಇದು ತನ್ನ ಮೂಲ ವಸ್ತುವಿಗಿಂತ ಮೇಲ್ಮೈಯಲ್ಲಿ ಭೌತಿಕವಾಗಿ, ರಾಸಾಯನಿಕವಾಗಿ, ಮತ್ತು ಖನಿಜಾಂಶಗಳ ಇರುವಿಕೆಯಲ್ಲಿ ವ್ಯತ್ಯಾಸ ತೋರುತ್ತದೆ.[1] ಇದು ರಾಸಾಯನಿಕವಾಗಿ ಹಾಗು ಪರಿಸರದ ಕ್ರಿಯೆಗಳಿಂದಾಗಿ ಮುರಿದ ಬಂಡೆಗಳಿಂದ ಅಥವಾ ಕೊಚ್ಚಿಹೋದ ಅನೇಕ ಮಾರ್ಪಾಡುಗಳನ್ನೊಳಗೊಂಡ, ಹವಾ ಪರಿಣಾಮಗಳಿಂದ ,ಮತ್ತು ಭೂಸವೆತಗಳಿಂದ ರೂಪುಗೊಂಡಿದೆ . ಮಣ್ಣು ತನ್ನ ಮೂಲ ಶಿಲೆಗಳಿಗಿಂತ ಭಿನ್ನವಾಗಿರುತ್ತದೆ ಇದಕ್ಕೆ ಕಾರಣ ಅದು ಭೂಗೋಳ ಜಲಗೋಳ, ವಾಯುಗೋಳ, ಮತ್ತು ಜೀವಗೋಳಗಳ, ಜೊತೆ ಕಲೆತು ಬದಲಾವಣೆ ಗೊಂಡಿರುತ್ತದೆ.[2] ಇದು ಘನ, ಅನಿಲ ಹಾಗು ದ್ರವ ರೂಪಗಳಲ್ಲಿರುವಂತಹ ಖನಿಜ ಹಾಗು ಇಂಗಾಲದ ಮಿಶ್ರಣಗಳಿಂದಾಗಿರುವುದು.[3][4] ಮಣ್ಣಿನ ಕಣಗಳು ಪರಸ್ಪರ ಸಡಿಲವಾಗಿ ಸೇರಿಕೊಂಡಿದ್ದು, ಖಾಲಿ ರಂದ್ರಗಳಿಂದ ಕೂಡಿವೆ. ಈ ರಂದ್ರಗಳು ಮಣ್ಣಿನದ್ರಾವಣ (ದ್ರವರೂಪ) ಮತ್ತು ಗಾಳಿ (ಅನಿಲ)ರೂಪದಲ್ಲಿರುತ್ತವೆ.[5] ಆದ್ದರಿಂದಾಗಿ ಮಣ್ಣನ್ನು ಹಲವು ಬಾರಿ ಮೂರು ಸ್ಥಿತಿಗಳಲ್ಲಿ ಸಂಸ್ಕರಿಸುತ್ತಾರೆ.[6] ಸಮಾನ್ಯವಾಗಿ ಮಣ್ಣಿನಸಾಂದ್ರತೆ 1 ರಿಂದ 2 g/cm³ ಇರುತ್ತದೆ. ಮಣ್ಣನ್ನು ಭೂಮಿ ಎಂದೂ ಕರೆಯುತ್ತಾರೆ : ಈ ವಸ್ತುವಿನಿಂದಲೇ ನಮ್ಮ ಗ್ರಹವು ಈ ಹೆಸರನ್ನು ಪಡೆದಿದೆ[7] ಭೂಮಿ ಗ್ರಹದ ಸ್ವಲ್ಪ ಭಾಗ ಮಣ್ಣಿನ ರಚನೆ ತೃತೀಯ ಭೂರಚನಾ ಅವಧಿಗಿಂತ ಹಳೆಯದಾಗಿದೆ ಮತ್ತು ಇನ್ನು ಹೆಚ್ಚಿನದು Pleistocene ಗಿಂತ ಹಳೆಯದಾಗಿಲ್ಲ.[8] ಇಂಜಿನಿಯರಿಂಗ್ನಲ್ಲಿ, ಮಣ್ಣು ಯಾವುದೇ ಗ್ರಹವನ್ನು ಆಚ್ಚಾದಿಸಿರುವ ಆಧಾರಶಿಲಾತಲದ ಮೇಲಿನ ಗಟ್ಟಿಗೊಂಡಿಲ್ಲದ ಘನಪದಾರ್ಥವೆಂದು ಹೇಳಲಾಗಿದೆ, ಅಥವಾ ಬಂಡೆಯ ಸಡಿಲವಾದ ಮೂಲ ವಸ್ತು.