ಭೂಗರ್ಭ
ಕಬ್ಬಿಣ ಮತ್ತು ನಿಕಲ್ ಮಿಶ್ರಣದ ಘನ ಚೆಂಡಿನಾಕೃತಿಯ ಭೂಮಿಯ ಅತ್ಯಂತ ಒಳಗಿನ ಭೂವೈಜ್ಞಾನಿಕ ಪದರ / From Wikipedia, the free encyclopedia
ಭೂಗರ್ಭವು ಭೂಮಿಯ ಅತ್ಯಂತ ಒಳಗಿನ ಭೂವೈಜ್ಞಾನಿಕ ಪದರವಾಗಿದೆ. ಇದು ಪ್ರಧಾನವಾಗಿ ಘನಾಕಾರದ ಚೆಂಡಿನಾಕೃತಿಯಾಗಿದ್ದು ಸುಮಾರು ೧,೨೨೦ ಕಿಲೊಮೀಟರ್ಗಳ ತ್ರಿಜ್ಯವನ್ನು ಹೊಂದಿದೆ (ಭೂಮಿಯ ತ್ರಿಜ್ಯದ ಸುಮಾರು ೨೦% ನಷ್ಟು ಅಥವಾ ಚಂದ್ರನ ತ್ರಿಜ್ಯದ ೭೦% ನಷ್ಟು).[1][2]
ಭೂಮಿಯ ಮ್ಯಾಂಟಲ್ಗೆ ಲಭ್ಯವಿರುವಂತೆ ನೇರವಾದ ಮಾಪನಕ್ಕಾಗಿ ಭೂಗರ್ಭದ ಯಾವುದೇ ಮಾದರಿಗಳು ಲಭ್ಯವಿಲ್ಲ. ಭೂಗರ್ಭದ ಬಗ್ಗೆ ಮಾಹಿತಿಯು ಬಹುತೇಕವಾಗಿ ಭೂಕಂಪ ತರಂಗಗಳು ಮತ್ತು ಭೂಮಿಯ ಕಾಂತಕ್ಷೇತ್ರದ ವಿಶ್ಲೇಷಣೆಯಿಂದ ಬರುತ್ತದೆ.[3] ಭೂಗರ್ಭವು ಕಬ್ಬಿಣ ನಿಕಲ್ ಮಿಶ್ರಲೋಹ ಜೊತೆಗೆ ಕೆಲವು ಇತರ ಮೂಲಧಾತುಗಳಿಂದ ರಚಿತವಾಗಿದೆ ಎಂದು ನಂಬಲಾಗಿದೆ. ಭೂಗರ್ಭದ ಮೇಲ್ಮೈ ಮೇಲೆ ಉಷ್ಣಾಂಶವು ಸುಮಾರು 5700 ಕೆಲ್ವಿನ್ನಷ್ಟಿದೆ ಎಂದು ಅಂದಾಜಿಸಲಾಗಿದೆ. ಇದು ಸೂರ್ಯನ ಮೇಲ್ಮೈ ಮೇಲೆ ಇರುವ ಉಷ್ಣಾಂಶದಷ್ಟಿದೆ.[4]