ಬ್ಯಾಪ್ಟಿಸಮ್(ದೀಕ್ಷಾಸ್ನಾನ, ಜ್ಞಾನಸ್ನಾನ)
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
ಕ್ರೈಸ್ತಧರ್ಮದಲ್ಲಿ, ಬ್ಯಾಪ್ಟಿಸಮ್ (ಗ್ರೀಕ್ನಿಂದ βαπτίζω ಬ್ಯಾಪ್ಟೈಜೋ : "ಮುಳುಗಿಸುವುದು", "ಶುದ್ಧೀಕರಣವನ್ನು ನಡೆಸುವುದು", ಅರ್ಥಾತ್, "ಸಂಸ್ಕಾರ ಸ್ನಾನ")[2] ಎಂಬುದು ಒಂದು ಧಾರ್ಮಿಕ ವಿಧಿಯ ಆಚರಣೆಯಾಗಿದ್ದು, ಇದರಲ್ಲಿ ನೀರನ್ನು ಬಳಸುವುದರ ಮೂಲಕ ವ್ಯಕ್ತಿಯೊಬ್ಬನಿಗೆ ಚರ್ಚ್ನ ಸದಸ್ಯತ್ವವನ್ನು ನೀಡಲಾಗುವುದು.[3]
ಯೇಸುವು ಸ್ವತಃ ತಾನು ಬ್ಯಾಪ್ಟೈಜ್ ಆಗಿದ್ದರು.[4] ಅರಂಭದ ಕ್ರಿಶ್ಚಿಯನ್ನರಲ್ಲಿ ಸಾಮಾನ್ಯವಾಗಿ ಆಚರಣೆಯಲ್ಲಿದ್ದ ಬ್ಯಾಪ್ಟಿಸಮ್ನ ವಿಧಾನವು ಅಭ್ಯರ್ಥಿಯನ್ನು(ಅಥವಾ "ಬ್ಯಾಪ್ಟಿಜ್ಯಾಂಡ್") ಸಂಪೂರ್ಣವಾಗಿ ಇಲ್ಲವೇ ಪಾರ್ಶ್ವಿಕವಾಗಿ ಅದ್ದುವುದನ್ನು ಒಳಗೊಂಡಿದ್ದಿತು.[5][6][7][8][9] ಜಾನ್ ದ ಬ್ಯಾಪ್ಟಿಸ್ಟ್ನು ತನ್ನ ಬ್ಯಾಪ್ಟಿಸಮ್ನಲ್ಲಿ ಆಳವಾದ ನದಿಯನ್ನು ಬಳಸಿದ್ದುದು ಅದ್ದುವಿಕೆಯನ್ನು ಸೂಚಿಸುತ್ತದಾದರೂ,[10] 3ನೇ ಶತಮಾನ ಮತ್ತು ನಂತರದ ಕ್ರಿಶ್ಚಿಯನ್ ಬ್ಯಾಪ್ಟಿಸಮ್ನ ಚಿತ್ರಗಳು ಹಾಗೂ ಉತ್ಖನನದ ಸಾಕ್ಷಿಗಳು ಅಗಿನ ಸಾಮಾನ್ಯ ಆಚರಣೆಯ ಪ್ರಕಾರ ಅಭ್ಯರ್ಥಿಯು ನೀರಿನಲ್ಲಿ ನಿಂತುಕೊಂಡಿದ್ದಾಗ ಆತನ ದೇಹದ ಮೇಲ್ಭಾಗದ ಮೇಲೆ ನೀರನ್ನು ಸುರಿಯಲಾಗುತ್ತಿತ್ತೆಂಬುದನ್ನು ಸೂಚಿಸುತ್ತವೆ.[11][12][13][14] ಈಗ ಬಳಕೆಯಲ್ಲಿರುವ ಬ್ಯಾಪ್ಟಿಸಮ್ನ ಇತರ ಸಾಮಾನ್ಯ ಆಚರಣೆಗಳು ಹಣೆಯ ಮೇಲೆ ಮೂರು ಬಾರಿ ನೀರನ್ನು ಸುರಿಯುವುದನ್ನು ಒಳಗೊಂಡಿವೆ.
ಹದಿನಾರನೇ ಶತಮಾನದಲ್ಲಿ ಹಲ್ಡ್ರಿಚ್ ಜ್ವಿಂಗ್ಲಿ ಎಂಬವರು ಅದರ ಅವಶ್ಯಕತೆಯನ್ನು ನಿರಾಕರಿಸುವವರೆಗೂ ಬ್ಯಾಪ್ಟಿಸಮ್ ಅನ್ನು ಹಲವು ರೀತಿಗಳಲ್ಲಿ ಮೋಕ್ಷ ಪಡೆಯಲು ಅವಶ್ಯಕವೆಂದು ಕಾಣಲಾಗುತ್ತಿದ್ದಿತು.[15] ಹುತಾತ್ಮತೆಯನ್ನು ಚರ್ಚಿನ ಇತಿಹಾಸದಲ್ಲಿ "ರಕ್ತದ ಮೂಲಕ ಬ್ಯಾಪ್ಟಿಸಮ್" ಎಂದು ಉಲ್ಲೇಖಿಸುವುದರ ಮೂಲಕ ನೀರಿನಿಂದ ಬ್ಯಾಪ್ಟೈಜ್ ಆಗಿರದ ಹುತಾತ್ಮರನ್ನು ಕಾಪಾಡುವ ವ್ಯವಸ್ಥೆ ಮಾಡಲಾಯಿತು. ನಂತರಲ್ಲಿ ಕ್ಯಾಥೊಲಿಕ್ ಚರ್ಚ್ ಬ್ಯಾಪ್ಟಿಸಮ್ ಅನ್ನು ಹೊಂದಲು ತಯಾರಾಗುತ್ತಿದ್ದ ವ್ಯಕ್ತಿಯು ಸ್ಯಾಕ್ರಮೆಂಟ್(ಪವಿತ್ರ ಸಂಸ್ಕಾರ) ದೊರಕುವ ಮುನ್ನವೇ ಸಾವಿಗೀಡಾದಲ್ಲಿ, ಅಂತಹವರು ರಕ್ಷಿಸಲ್ಪಡುವರೆಂದು ಸೂಚಿಸುವ ಬ್ಯಾಪ್ಟಿಸಮ್ ಆಫ್ ಡಿಸೈರ್(ಬಯಕೆಯ ಬ್ಯಾಪ್ಟಿಸಮ್) ಎಂಬುದನ್ನು ಆಚರಣೆಗೆ ತಂದಿತು.[16]
ಕೆಲವು ಕ್ರಿಶ್ಚಿಯಮ್ ಪಂಗಡಗಳು, ವಿಶೇಷವಾಗಿ ಕ್ವೇಕರ್ಗಳು ಮತ್ತು ಸಾಲ್ವೇಶನ್ ಆರ್ಮಿಯವರು, ಬ್ಯಾಪ್ಟಿಸಮ್ ಅವಶ್ಯಕವೆಂದು ನಂಬುವುದಿಲ್ಲ ಮತ್ತು ಅದನ್ನು ಆಚರಿಸುವುದಿಲ್ಲ. ಆದರೆ ಈ ವಿಧಿಯನ್ನು ಆಚರಿಸುವವರಲ್ಲಿ, ಬ್ಯಾಪ್ಟೈಜ್ ಮಾಡುವ ವಿಧಿ ಮತ್ತು ವಿಧಾನಗಳು ಹಾಗೂ ಈ ಆಚರಣೆಯ ಪ್ರಾಮುಖ್ಯತೆಯನ್ನು ಅರ್ಥೈಸಿಕೊಳ್ಳುವುದರಲ್ಲಿ ವ್ಯತ್ಯಾಸಗಳನ್ನು ಕಾಣಬಹುದು. ಹೆಚ್ಚಿನ ಕ್ರಿಶ್ಚಿಯನ್ನರು ಬ್ಯಾಪ್ಟಿಸಮ್ ಅನ್ನು "ಪಿತ,ಸುತ, ಮತ್ತು ಪವಿತ್ರ ಆತ್ಮದ ಹೆಸರಿನಲ್ಲಿ" (ನಂತರ ಮಹಾ ಅಧಿಕಾರದ ನೀಡಿಕೆ) ನೀಡುತ್ತಾರೆ, ಆದರೆ ಕೆಲವರು ದೀಕ್ಷಾಸ್ನಾನ ಮಾಡುವಾಗ ಅದನ್ನು ಯೇಸುವಿನ ಹೆಸರಿನಲ್ಲಿ ಮಾತ್ರ ಮಾಡುತ್ತಾರೆ. ಹೆಚ್ಚಿನ ಕ್ರಿಶ್ಚಿಯನ್ನರು ಶಿಶುಗಳ ದೀಕ್ಷಾಸ್ನಾನವನ್ನು ಮಾಡಿಸುತ್ತಾರೆ;[17] ಆದರೆ ಬಹಳಷ್ಟು ಮಂದಿ ಕೇವಲ ನಂಬಿಕೆಯುಳ್ಳವನ ದೀಕ್ಷಾಸ್ನಾನವು ಮಾತ್ರ ನಿಜವಾದ ಬ್ಯಾಪ್ಟಿಸಮ್ ಎಂದು ನಂಬುತ್ತಾರೆ. ಕೆಲವರು ಬ್ಯಾಪ್ಟೈಜ್ ಆಗುವ ವ್ಯಕ್ತಿಯು ಮುಳುಗಬೇಕು ಇಲ್ಲವೆ ಕಡೆಯಪಕ್ಷ ಪಾರ್ಶ್ವಿಕವಾಗಿ ದೇಹವನ್ನು ನೀರಿನಲ್ಲಿ ಅದ್ದಬೇಕು ಎಂದು ಒತ್ತಿಹೇಳುತ್ತರೆ, ಆದರೆ ಇನ್ನು ಕೆಲವರು ತಲೆಯ ಮೇಲೆ ನೀರು ಹರಿಯುವಂತೆ ತೊಳೆಯಲಾಗುವುದಾದಲ್ಲಿ ನೀರಿನ ಶುದ್ಧೀಕರಣದ ಯಾವುದೇ ವಿಧಾನವು ಸಾಕಾಗುವುದೆಂದು ಅಭಿಪ್ರಾಯಪಡುತ್ತಾರೆ.
ಆಂಗ್ಲ ಭಾಷೆಯಲ್ಲಿ "ಬ್ಯಾಪ್ಟಿಸಮ್" ಎಂಬ ಪದವನ್ನು ವ್ಯಕ್ತಿಗೆ ದೀಕ್ಷೆ ನೀಡುವ, ಶುದ್ಧೀಕರಿಸುವ ಅಥವಾ ಹೊಸದಾಗಿ ನಾಮಕರಣ ಮಾಡುವ ಯಾವುದೇ ಧರ್ಮಾಚರಣೆ, ವಿಚಾರಣೆ ಅಥವಾ ಅನುಭವವನ್ನು ಉಲ್ಲೇಖಿಸುವ ಅರ್ಥದಲ್ಲಿ ಬಳಸಲಾಗುತ್ತದೆ.[18] ಕೆಳಗೆ ನೋಡಿ ಇತರ ದೀಕ್ಷಾ ಸಮಾರಂಭಗಳು.