ಬೇಸ್ಬಾಲ್
From Wikipedia, the free encyclopedia
ಬೇಸ್ ಬಾಲ್ ದಾಂಡು ಮತ್ತು ಚೆಂಡನ್ನು ಬಳಸಿ, ತಲಾ ಒಂಬತ್ತು ಜನರನ್ನೊಳಗೊಂಡ ಎರಡು ತಂಡಗಳ ನಡುವೆ ಆಡಲ್ಪಡುವ ಪಂದ್ಯ. ಎಸೆದಂತಹ ಚೆಂಡನ್ನು ಬ್ಯಾಟ್ ನಿಂದ ಬಾರಿಸಿ, ೯೦ ಅಡಿ ಚಚ್ಚೌಕ ಅಥವಾ ವಜ್ರಾಕಾರದಲ್ಲಿರುವ ನಾಲ್ಕು ಮೂಲೆ(ಬೇಸ್ ಗಳನ್ನು)ಗಳನ್ನು ತಲುಪುವುದರ ಮೂಲಕ ರನ್ ಗಳಿಸುವಿಕೆಯೇ ಈ ಕ್ರೀಡೆಯ ಮೂಲ ಉದ್ದೇಶ. ಒಂದು ತಂಡದ ಆಟಗಾರರು (ಬ್ಯಾಟಿಂಗ್ ತಂಡ) ಇನ್ನೊಂದು ತಂಡದ (ಕ್ಷೇತ್ರರಕ್ಷಣ ತಂಡ) ಪಿಚರ್ (ಚೆಂಡು ಎಸೆಯುವವನು) ಎಸೆದ ಚೆಂಡನ್ನು ಬಾರಿಸಿ ರನ್ ಬಾರಿಸುತ್ತದೆ ಮತ್ತು ಇನ್ನೊಂದು ತಂಡದವರು ಹಿಟರ್ ಗಳು (ಬ್ಯಾಟಿಂಗ್ ಮಾಡುವವರು) ರನ್ ಬಾರಿಸದಂತಾಗಿಸಲು ಅವರನ್ನು ಹಲವಾರು ವಿಧಗಳಲ್ಲಿ ಔಟ್ ಮಾಡಲು ಯತ್ನಿಸುತ್ತಾರೆ. ಬ್ಯಾಟಿಂಗ್ ತಂಡದ ಆಟಗಾರನು ಯಾವುದೇ ಬೇಸ್ ನಲ್ಲಿ ನಿಲ್ಲಬಹುದು ಮತ್ತು ತಂಡದ ಸದಸ್ಯನು ಹೊಡೆದ ನಂತರ (ಹಿಟ್ ಮಾಡಿದನಂತರ) ಅಥವಾ ಬೇರೆ ವಿಧಕ್ಕನುಗುಣವಾಗಿ, ಮುಂದಕ್ಕೆ ಚಲಿಸಬಹುದು. ಕ್ಷೇತ್ರರಕ್ಷಣ ತಂಡವು ಯಾವಾಗ ಮೂರು ಔಟ್ ಗಳನ್ನು ಸಾಧಿಸುವುದೋ ಆಗ ಬ್ಯಾಟಿಂಗ್ ಆಡುವ ತಂಡ ಬದಲಾಗುತ್ತದೆ(ಕ್ಷೇತ್ರರಕ್ಷಣ ತಂಡವು ಬ್ಯಾಟ್ ಮಾಡುತ್ತದೆ ಮತ್ತು ಬ್ಯಾಟಿಂಗ್ ಆಡಿದ ತಂಡ ಕ್ಷೇತ್ರರಕ್ಷಣ ಮಾಡುತ್ತದೆ). ಪ್ರತಿ ತಂಡವು ಬ್ಯಾಟ್ ಮಾಡುವ ಅವಧಿಗೆ ಒಂದು ಇನ್ನಿಂಗ್ ಎಂದು ಕರೆಯುತ್ತಾರೆ; ಅಂತಹ ಒಂಬತ್ತು ಇನ್ನಿಂಗ್ಸ್ ಗಳು ಒಂದು ಸ್ಪರ್ಧಾತ್ಮಕ ಪಂದ್ಯದಲ್ಲಿರುತ್ತವೆ. ಆಟದ ಕೊನೆಯಲ್ಲಿ ಯಾವ ತಂಡ ಹೆಚ್ಚು ರನ್ ಗಳನ್ನು ಗಳಿಸಿರುತ್ತದೋ ಅದನ್ನು ಜಯಶಾಲಿಯೆಂದು ಘೋಷಿಸಲಾಗುತ್ತದೆ. ಹಳೆಯ ಕಾಲದ ಬ್ಯಾಟ್ ಮತ್ತು ಚೆಂಡಿನ ಆಟಗಳಿಂದ ಉಗಮವಾದ ಈ ಕ್ರೀಡೆಯು ತನ್ನ ಮೊದಲ ಸ್ವರೂಪದಲ್ಲಿ ಇಂಗ್ಲೆಂಡ್ ನಲ್ಲಿ ಹದಿನೆಂಟನೆಯ ಶತಮಾನದ ಮಧ್ಯಭಾಗದಲ್ಲಿ ಆಡಲ್ಪಡುತ್ತಿತ್ತು. ಈ ಕ್ರೀಡೆ ಮತ್ತು ಸಂಬಂಧಿತ ರೌಂಡರ್ ಗಳನ್ನು ಬ್ರಿಟಿಷ್ ಮತ್ತು ಐರಿಷ್ ವಲಸಿಗರು ಉತ್ತರ ಅಮೆರಿಕಾಕ್ಕೆ ತಂದರು ಮತ್ತು ಇಲ್ಲಿ ಬೇಸ್ ಬಾಲ್ ನ ಆಧುನಿಕ ಕ್ರಮವು ಅಭಿವೃದ್ಧಿಗೊಳಿಸಲ್ಪಟ್ಟಿತು. ಹತ್ತೊಂಬತ್ತನೆಯ ಶತಮಾನದ ಅಂತ್ಯದ ವೇಳೆಗೆ ಬೇಸ್ ಬಾಲ್ ಯುನೈಟೆಡ್ ಸ್ಟೇಟ್ಸ್ ನ ರಾಷ್ಟ್ರೀಯ ಕ್ರೀಡೆಯಾಗಿ ಗುರುತಿಸಲ್ಪಟ್ಟಿತು. ವೃತ್ತಿಪರ, ಹವ್ಯಾಸಿ ಮತ್ತು ಯುವ ಮಟ್ಟಗಳಲ್ಲಿ ಬೇಸ್ ಬಾಲ್ ಉತ್ತರ ಅಮೆರಿಕ, ಮಧ್ಯ ಮತ್ತು ದಕ್ಷಿಣ ಅಮೆರಿಕದ ಕೆಲವು ಭಾಗಗಳು, ಕೆರಿಬಿಯನ್ ದ್ವೀಪ ಮತ್ತು ಉತ್ತರ ಏಷ್ಯಾದ ಕೆಲವು ಭಾಗಗಳಲ್ಲಿ ಜನಪ್ರಿಯವಾಗಿದೆ. ಈ ಕ್ರೀಡೆಯನ್ನು ಕೆಲವೊಮ್ಮೆ ಮೂಲಕ್ರೀಡೆಯಾದ ಸಾಫ್ಟ್ ಬಾಲ್ ಗೆ ವಿರುದ್ಧವಾಗಿ ಹಾರ್ಡ್ ಬಾಲ್ ಎಂದು ಕರೆಯಲಾಗುತ್ತದೆ. ಉತ್ತರ ಅಮೆರಿಕದಲ್ಲಿ, ವೃತ್ತಿಪರ ಪ್ರಮುಖ ಲೀಗ್ ಬೇಸ್ ಬಾಲ್ (MLB) ತಂಡಗಳನ್ನು ನ್ಯಾಷನಲ್ ಲೀಗ್ (NL) ಮತ್ತು ಅಮೆರಿಕನ್ ಲೀಗ್ (AL) ಎಂದು ವಿಂಗಡಿಸಲಾಗಿದೆ. ಪ್ರತಿ ಲೀಗ್ ನಲ್ಲೂ ಮೂರು ವಿಭಾಗಗಳಿವೆ: ಪೂರ್ವ, ಪಶ್ಚಿಮ ಮತ್ತು ಕೇಂದ್ರೀಯ. ಪ್ರತಿ ವರ್ಷವೂ ಮೇಜರ್ ಲೀಗ್ ಚಾಂಪಿಯನ್ ಯಾರೆಂದು ತಿಳಿಯಲು ಪಂದ್ಯಗಳು ಏರ್ಪಟ್ಟು ವರ್ಲ್ಡ್ ಸೀರೀಸ್ ನಲ್ಲಿ ಪರಿಸಮಾಪ್ತಿಗೊಳ್ಳುತ್ತವೆ. ಪ್ರತಿ ಲೀಗ್ ನಿಂದಲೂ ನಾಲ್ಕು ತಂಡಗಳು ಪಂದ್ಯಗಳನ್ನಾಡಲು ಅರ್ಹತೆ ಹೊಂದುತ್ತವೆ; ಆ ಅವಧಿಯ ಮೂರು ಲೀಗ್ ವಿಭಾಗಗಳ ವಿಜೇತರು ಮತ್ತು ಒಂದು ವೈಲ್ಡ್ ಕಾರ್ಡ್ ತಂಡ. ಬೇಸ್ ಬಾಲ್ ಜಪಾನ್ ಮತ್ತು ಕ್ಯೂಬಾಗಳಲ್ಲಿ ಪ್ರಮುಖ ತಂಡ-ಕ್ರೀಡೆಯಾಗಿದೆ ಹಾಗೂ ಕ್ರೀಡೆಯ ಮೇಲಿನ ಸ್ತರಗಳು ಅಂತೆಯೇ ಎರಡು ಲೀಗ್ ಗಳಾಗಿ ವಿಂಗಡಿತವಾಗಿದೆ: ಜಪಾನ್ ನ ಸೆಂಟ್ರಲ್ ಲೀಗ್ ಮತ್ತು ಪೆಸಿಫಿಕ್ ಲೀಗ್; ಕ್ಯೂಬಾದ ಪಶ್ಚಿಮ ಲೀಗ್ ಮತ್ತು ಪೂರ್ವ ಲೀಗ್. ನ್ಯಾಷನಲ್ ಮತ್ತು ಸೆಂಟ್ರಲ್ ಲೀಗ್ ಗಳಲ್ಲಿ, ಸಾಂಪ್ರದಾಯಿಕ ನಿಯಮಗಳಿಗೆ ಅನುಗುಣವಾಗಿ, ಪಿಚರ್ ಬ್ಯಾಟಿಂಗ್ ಆಡಲೇಬೇಕು. ಅಮೆರಿಕನ್, ಪೆಸಿಫಿಕ್, ಮತ್ತು ಕ್ಯೂಬಾದ ಎರಡೂ ಲೀಗ್ ಗಳಲ್ಲಿ ನೇಮಿಸಲ್ಪಟ್ಟ ಹಿಟರ್ ಒಬ್ಬನು, ಹತ್ತನೆಯ ಆಟಗಾರನಾಗಿದ್ದು, ಪಿಚರ್ ನ ಬದಲು ಬ್ಯಾಟಿಂಗ್ ಆಡುವನು. ಪ್ರತಿ ಉನ್ನತ-ಮಟ್ಟದ ತಂಡವೂ ಒಂದು ಅಥವಾ ಅಧಿಕ ಮೈನರ್ ಲೀಗ್ ತಂಡಗಳ ಫಾರ್ಮ್ ಪದ್ಧತಿಯನ್ನು ಹೊಂದಿದೆ. ಈ ತಂಡಗಳು ಅದೇ ಮಟ್ಟದ ಕೌಶಲವನ್ನು ಹೊಂದಿರುವ ಆಟಗಾರರೊಡನೆ ಮೈದಾನದಲ್ಲಿ ಸೆಣಸುವ ಅನುಭವವನ್ನು ಕಿರಿಯ ಆಟಗಾರರಿಗೆ ಅನುವು ಮಾಡಿಕೊಟ್ಟು ಅವರ ಏಳ್ಗೆಗೆ ಸಹಾಯಕವಾಗುತ್ತವೆ.
ಮೊದಲ ಆಟ | Mid-18th century or prior, ಇಂಗ್ಲೆಂಡ್ (early form) June 19, 1846, Hoboken, New Jersey (first recorded game with codified rules) |
---|---|
ವಿಶೇಷಗುಣಗಳು | |
ತಂಡ ಸದಸ್ಯರುಗಳು | 9 |
ವರ್ಗೀಕರಣ | Bat-and-ball |
ಸಲಕರಣೆ | Baseball Baseball bat Baseball glove |
ಒಲಿಂಪಿಕ್ | 1992–2008 |