ಬೆಲ್ವೆಡೆರೆ (ಅರಮನೆ)
From Wikipedia, the free encyclopedia
48.191439°N 16.380787°E / 48.191439; 16.380787
ಈ ಲೇಖನವನ್ನು ಈ ಕಾರಣಗಳಿಂದಾಗಿ ಪರಿಷ್ಕರಣೆಗೆ ಒಳಪಡಿಸಬೇಕಿದೆ - ವ್ಯಾಕರಣ, ಶೈಲಿ, ಒಗ್ಗಟ್ಟು, ಧ್ವನಿ, ಸಂಯೋಜನೆ ಅಥವಾ ಕಾಗುಣಿತ. (March 2011) |
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (June 2010) |
ವಿಶಾಲವಾದ ಬೆಲ್ವೆಡೆರೆ ಸಂಕೀರ್ಣವು ಬರೋಕ್ ಶೈಲಿಯ ಎರಡು ಭವ್ಯವಾದ ಅರಮನೆಗಳಾದ ಮೇಲ್ಭಾಗದ ಮತ್ತು ಕೆಳಭಾಗದ ಬೆಲ್ವೆಡೆರೆ, ಕಿತ್ತಳೆಯ ತೋಟ, ಮತ್ತು ಅರಮನೆಯ ಕುದುರೆ ಲಾಯಗಳನ್ನು ಒಳಗೊಂಡಿದೆ. ವಿಯೆನ್ನಾದ ೩ನೇ ಜಿಲ್ಲೆಯಲ್ಲಿ, ನಗರ ಕೇಂದ್ರದ ಆಗ್ನೇಯ ಭಾಗದಲ್ಲಿರುವ ಬರೋಕ್ ಶೈಲಿಯ ಉದ್ಯಾನದ ಭೂಪ್ರದೇಶವೊಂದರಲ್ಲಿ ಈ ಕಟ್ಟಡಗಳು ನೆಲೆಗೊಂಡಿವೆ. ಇದು ಬೆಲ್ವೆಡೆರೆ ವಸ್ತುಸಂಗ್ರಹಾಲಯವನ್ನು ಒಳಗೊಂಡಿದೆ. ಇದರ ನೆಲಗಟ್ಟುಗಳನ್ನು ಒಂದು ಲಘುವಾದ ಇಳುಕಲಿನ ಮೇಲೆ ನೆಲೆಗೊಳಿಸಲಾಗಿದೆ ಮತ್ತು ಇದು ಅಲಂಕಾರಿಕ ಶ್ರೇಣೀಕೃತ ಚಿಲುಮೆಗಳು ಹಾಗೂ ಕಿರು ಜಲಪಾತಗಳು, ಬರೋಕ್ ಶೈಲಿಯ ಶಿಲ್ಪಗಳು, ಮತ್ತು ಭವ್ಯವಾದ ಮೆತು ಕಬ್ಬಿಣದ ದ್ವಾರಗಳನ್ನು ಒಳಗೊಂಡಿದೆ. ಬರೋಕ್ ಶೈಲಿಯ ಅರಮನೆ ಸಂಕೀರ್ಣವನ್ನು ಸೆವಾಯ್ನ ಯುಜೀನ್ ರಾಜಕುಮಾರನಿಗೆ ಮೀಸಲಾದ ಒಂದು ಬೇಸಿಗೆ ನಿವಾಸವಾಗಿ ನಿರ್ಮಿಸಲಾಯಿತು. ವಿಯೆನ್ನಾದಲ್ಲಿ ಕಂಡುಬಂದ ಬಹುಪಾಲು ನಿರ್ಮಾಣದ ಅವಧಿಯೊಂದರ ಸಂದರ್ಭದಲ್ಲಿ ಬೆಲ್ವೆಡೆರೆ ಅರಮನೆಯು ನಿರ್ಮಿಸಲ್ಪಟ್ಟಿತು; ಈ ಅವಧಿಯಲ್ಲಿ ವಿಯೆನ್ನಾ, ಚಕ್ರಾಧಿಪತ್ಯದ ರಾಜಧಾನಿಯಾಗಿ ಮತ್ತು ಆಳುತ್ತಿರುವ ರಾಜವಂಶಕ್ಕೆ ತವರುನೆಲವಾಗಿ ಎರಡೂ ಪಾತ್ರಗಳನ್ನು ನಿರ್ವಹಿಸಿತ್ತು. ನಗರದ ಬಹುತೇಕ ಭವ್ಯವಾದ ಸೌಧಗಳ ಪೈಕಿಯ ಅನೇಕವು ಈ ಚಾರಿತ್ರಿಕ ಯುಗಕ್ಕೆ ಸೇರಿದವಾಗಿವೆ. ರಾಜಕುಮಾರ ಯುಜೀನ್ನಿಂದ ಅನುವುಗೊಳಿಸಲ್ಪಟ್ಟ ಕಟ್ಟಡಗಳು, ಅದರಲ್ಲೂ ನಿರ್ದಿಷ್ಟವಾಗಿ ಬೆಲ್ವೆಡೆರೆ ಅರಮನೆಯು. ಅಂಥವುಗಳಲ್ಲಿ ಸೇರಿವೆ. ಒಟ್ಟೋಮನ್ ಸಾಮ್ರಾಜ್ಯದ ವಿರುದ್ಧವಾಗಿ ಪ್ರಧಾನ ದಂಡನಾಯಕ ರಾಜಕುಮಾರ ಸೆವಾಯ್ ಕೈಗೊಂಡ ಯುದ್ಧಗಳ ಒಂದು ಸರಣಿಯು ಯಶಸ್ವಿಯಾಗಿ ಸಮಾಪ್ತಿಯಾದಾಗಿನಿಂದ, ಈ ಏಳಿಗೆಯ ಅವಧಿಯು ದಾಖಲಿಸಲ್ಪಟ್ಟಿತು. ೧೬೯೭ರಲ್ಲಿ, ಸೆಂಟಾದಲ್ಲಿ ಅವನ ನಾಯಕತ್ವದಡಿಯಲ್ಲಿ ಟರ್ಕಿಷ್ ಸೇನೆಯನ್ನು ಸಂಪೂರ್ಣವಾಗಿ ಸೋಲಿಸಿದ್ದು, ಹಾಗೂ ಇದರ ಪರಿಣಾಮವಾಗಿ ಆಸ್ಟ್ರಿಯಾದೆಡೆಗಿನ ಅನುಕೂಲಕರ ಷರತ್ತುಗಳ ಅಡಿಯಲ್ಲಿ ಕಾರ್ಲೋವಿಟ್ಜ್ ಒಡಂಬಡಿಕೆಗೆ ೧೬೯೯ರಲ್ಲಿ ಸಹಿಹಾಕಿದ್ದು, ೧೬೮೩ರಿಂದಲೂ ಉತ್ಕಟಾವಸ್ಥೆಯಲ್ಲಿದ್ದ ಒಟ್ಟೋಮನ್ ಸಾಮ್ರಾಜ್ಯದೊಂದಿಗಿನ ಘರ್ಷಣೆಯನ್ನು ಅಂತಿಮವಾಗಿ ಕೊನೆಗೊಳಿಸಿದವು.