ಬೆನ್ನು ನೋವು
From Wikipedia, the free encyclopedia
ಬೆನ್ನು ನೋವು ("ಡೊರ್ಸಾಲ್ಜಿಯ " ಎಂದೂ ಕರೆಯುತ್ತಾರೆ) ಎನ್ನುವುದು ಮಾಂಸಖಂಡಗಳು, ನರಗಳು, ಮೂಳೆಗಳು, ಕೀಲುಗಳು ಅಥವಾ ಬೆನ್ನೆಲುಬಿನ ಇನ್ನಾವುದೇ ರಚನೆಯಿಂದ ಹುಟ್ಟಿ ಬೆನ್ನಿನಲ್ಲಿ ಕಾಣಿಸಿಕೊಳ್ಳುವ ನೋವು.
This article is in a list format that may be better presented using prose. (March 2008) |
ಈ ನೋವನ್ನು ಅನೇಕ ವೇಳೆ ಕತ್ತು ನೋವು, ಬೆನ್ನಿನ ಮೇಲ್ಭಾಗ ನೋವು, ಬೆನ್ನಿನ ಕೆಳಭಾಗ ನೋವು ಅಥವಾ ಮೂಳೆತುದಿ ನೋವು ಎಂದು ವಿಂಗಡಿಸಬಹುದು. ಅದು ಇದ್ದಕ್ಕಿದ್ದಂತೆ ಬರಬಹುದು ಅಥವಾ ದೀರ್ಘಕಾಲದ ನೋವು ಆಗಿರಬಹುದು; ಅದು ನಿರಂತರವಾಗಿ ಇರಬಹುದು ಅಥವಾ ಆಗಾಗ್ಗೆ ಬರಬಹುದು, ಒಂದೇ ಜಾಗದಲ್ಲಿ ಕಾಣಿಸಿಕೊಳ್ಳಬಹುದು ಅಥವಾ ಬೇರೆ ಭಾಗಗಳಿಗೆ ಹರಡಬಹುದು. ಅದು ಸಣ್ಣ ನೋವಿರಬಹುದು, ಅಥವಾ ತೀಕ್ಷ್ಣವಾದ ನೋವಿರಬಹುದು ಅಥವಾ ಚುಚ್ಚುವ ಅಥವಾ ಉರಿ ಅನುಭವವಾಗಬಹುದು. ನೋವು ತೋಳು ಮತ್ತು ಕೈಗಳಿಗೂ, ಬೆನ್ನಿನ ಮೇಲ್ಭಾಗ ಅಥವಾ ಬೆನ್ನಿನ ಕೆಳಭಾಗಗಳಿಗೂ ಹರಡಬಹುದು, (ಕಾಲು ಅಥವಾ ಪಾದಕ್ಕೂ ಹರಡಬಹುದು), ಮತ್ತು ನೋವಷ್ಟೇ ಅಲ್ಲದೇ ಸುಸ್ತು, ಜೋಮು ಅಥವಾ ನರಗಳ ಹಾರುವಿಕೆ ಮುಂತಾದ ಲಕ್ಷಣಗಳನ್ನು ಹೊಂದಿರಬಹುದು.
ಮನುಷ್ಯರನ್ನು ಅತಿ ಹೆಚ್ಚಾಗಿ ಕಾಡುವುದೆಂದರೆ ತಲೆನೋವು. ಯು.ಎಸ್.ನಲ್ಲಿ, ವೈದ್ಯರನ್ನು ಭೇಟಿಮಾಡಲು ತೀವ್ರವಾದ ಬೆನ್ನಿನ ಕೆಳಭಾಗ ನೋವು (ಲಂಬ್ಯಾಗೋ ಎಂತಲೂ ಕರೆಯುತ್ತಾರೆ) ಐದನೇ ಅತಿ ಸಾಮಾನ್ಯ ಕಾರಣ. ಹತ್ತರಲ್ಲಿ ಒಂಭತ್ತು ಜನ ವಯಸ್ಕರು ತಮ್ಮ ಜೀವನದ ಒಂದು ಹಂತದಲ್ಲಿ ಬೆನ್ನು ನೋವನ್ನು ಅನುಭವಿಸುತ್ತಾರೆ, ಮತ್ತು ಹತ್ತ ಜನ ಉದ್ಯೋಗಸ್ಥರಲ್ಲಿ ಐದು ಜನರಿಗೆ ಪ್ರತಿವರ್ಷ ಬೆನ್ನುನೋವು ಬರುತ್ತದೆ.[1]
ಬೆನ್ನುಲುಬು ನರಗಳು, ಕೀಲುಗಳು, ಮಾಂಸಖಂಡಗಳು, ಸ್ನಾಯು ಮತ್ತು ಕಟ್ಟುಗಳನ್ನು ಒಂದಕ್ಕೊಂದು ಸೇರಿಸುವ ಒಂದು ಸಂಕೀರ್ಣ ಜಾಲಬಂಧ. ಹಾಗೂ ಇವೆಲ್ಲವೂ ನೋವು ತರಬಹುದು. ಬೆನ್ನೆಲುಬಿನಲ್ಲಿ ಹುಟ್ಟಿ ಕಾಲುಗಳು ಮತ್ತು ತೋಳುಗಳ ಕಡೆಗೆ ಹೋಗುವ ದೊಡ್ಡ ನರಗಳು ಕೈ ಕಾಲುಗಳವರೆಗೂ ನೋವನ್ನು ಹರಡಬಹುದು.