ಫ್ರಾನ್ಸಿಸ್ ಬೆಕನ್
From Wikipedia, the free encyclopedia
ಪ್ರಾನ್ಸಿಸ್ ಬೆಕನ್ (ಜ. ೨೨ ಜನವರಿ ೧೫೬೧. ಮ. ೯ ಏಪ್ರಿಲ್ ೧೬೨೬) ಎಲಿಜಬೆಥನ್ ಕಾಲದ ಲೇಖಕ, ಇಂಗ್ಲೀಷ್ ತತ್ವವೇತ್ತ ಮತ್ತು ರಾಜಕೀಯ ದುರೀಣ ಎಂದು ಗುರುತಿಸಲಾಗಿದೆ. ಅವನು ಅಟಾರ್ನಿ ಜನರಲ್ ಆಗಿಯೂ ಮತ್ತು ಲಾರ್ಡ್ ಚಾನ್ಸಲರ್ ಆಫ್ ಇಂಗ್ಲೆಂಡ್ ಆಗಿಯೂ ಸೇವೆ ಸಲ್ಲಿಸಿದ್ದ. ಅವನ ಕೃತಿಗಳು ವಿಜ್ಞಾನದ ಪದ್ಧತಿಯ ಬೆಳಣಿಗೆಗೆ ಕಾರಣವಾದವು ಮತ್ತು ಅವನು ಪ್ರಭಾವವನ್ನು ವೈಜ್ಞಾನಿಕ ಕ್ರಾಂತಿಯ ಕಾಲದಾದ್ಯಂತ ನೋಡ ಬಹುದು.[1]
ಜನನ | ೨೨ ಜನವರಿ ೧೫೬೧ ಸ್ಟ್ರಾಂಡ್ಲಂಡನ್, ಇಂಗ್ಲೆಂಡ್ |
---|---|
ಮರಣ | ೯ ಏಪ್ರಿಲ್ ೧೬೨೬ (ವಯಸ್ಸು ೬೫) ಹೈಗೇಟ್, ಮಿಡ್ಲ್ಸೆಕ್ಸ್, ಇಂಗ್ಲೆಂಡ್ |
ರಾಷ್ಟ್ರೀಯತೆ | ಇಂಗ್ಲೀಷ್ |
ಕಾಲಮಾನ | ೧೭ನೆಯ ಶತಮಾನದ ಇಂಗ್ಲೀಷ್ ಪುನರುತ್ಥಾನ ವಿಜ್ಞಾನ ಕ್ರಾಂತಿ |
ಪ್ರದೇಶ | ಪಾಶ್ಚಿಮಾತ್ಯ ತತ್ವವೇತ್ತ |
ಪರಂಪರೆ | ಪುನರುತ್ಥಾನ ತತ್ವಜ್ಞಾನ ಅನುಭವಜನ್ಯವಾದ |
ಅಧ್ಯಯನ ಮಾಡಿದ ಸಂಸ್ಥೆ | ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯ |
ಪ್ರಭಾವಕ್ಕೋಳಗಾಗು
| |
ಪ್ರಭಾವ ಬೀರು
| |
ಸಹಿ |
ಅವನನ್ನು ಅನುಭವಜನ್ಯ ವಿಧಾನ (empiricism)ದ ಜನಕ ಎಂದು ಗುರುತಿಸಲಾಗುತ್ತದೆ. [2] ಅವನ ಕೃತಿಗಳು ವಿಜ್ಞಾನದ ಅರಿವಿನ ಸಾಧ್ಯತೆಯು ಅನುಗಮನ ತರ್ಕ (inductive reasoning or logic) ಮತ್ತು ಪ್ರಕೃತಿಯನ್ನು ಎಚ್ಚರಿಕೆಯಿಂದ ಅವಲೋಕಿಸುವುದರಿಂದ ಸಾಧ್ಯವಾಗುತ್ತದೆ ಎಂಬ ನಿಲುವು ತಾಳುತ್ತವೆ. ವಿಜ್ಞಾನಿಗಳು ಸಂದೇಹವಾದಿ ಮತ್ತು ಕ್ರಮಬದ್ಧ ಮಾರ್ಗವನ್ನು ಅನುಸರಿಸುವ ಮೂಲಕ ದಾರಿತಪ್ಪಿಸುವ ಚಿಂತನೆಗಳಿಂದ ಬಚಾವಾಗಬಹುದು ಎಂದು ಅವನು ವಾದಿಸುತ್ತಾನೆ. ಅವನ ಚಿಂತನೆಗಳನ್ನು ‘ಬೆಕೊನನ ಪದ್ಧತಿ’ ಎಂದು ಕರೆಯಲಾಗಿದ್ದು ಅವು ಬಹುಕಾಲ ನಿಲ್ಲಲಿಲ್ಲವಾದರೂ ಅವನ ಸಂದೇಹವಾದಿ ಪದ್ಧತಿಯ ಪ್ರಾಮುಖ್ಯತೆಯ ಹಿನ್ನೆಲೆಯಲ್ಲಿ ಅವನನ್ನು ವಿಜ್ಞಾನ ಪದ್ಧತಿಯ ಜನಕ ಎಂದು ಹೇಳಬಹುದು. ಈ ಪದ್ಧತಿಯ ಹೊಸದಾಗಿತ್ತು ಮತ್ತು ವಿಜ್ಞಾನಕ್ಕೆ ಕಾರ್ಯೋಪಯೋಗಿ ತಾತ್ವಿಕ ಚೌಕಟ್ಟನ್ನು ಒದಗಿಸಿತು. ಈ ತಾತ್ವಿಕ ಚೌಕಟ್ಟು ಇಂದೂ ಸಹ ವಿಜ್ಞಾನ ಮತ್ತು ಅದರ ಪದ್ಧತಿಯ ಬಗೆಗೆನ ಚರ್ಚೆಗೆ ಕೇಂದ್ರವಾಗಿದೆ.