ಫ್ರಾನ್ಸಿಸ್ಕೊ ಡ ಆಲ್ಮೇಡ
From Wikipedia, the free encyclopedia
ಫ್ರಾನ್ಸಿಸ್ಕೊ ಡ ಆಲ್ಮೇಡ(ಜನನ ಪ್ರ.ಶ. 1450 ಲಿಸ್ಬನ್; ಮರಣ:ಮಾರ್ಚ್ 1, 1510 ಟೇಬಲ್ ಬೇ,ಕೇಪ್ ಆಫ್ ಗುಡ್ಹೋಪ್),ಪೋರ್ಚುಗಲ್ಲಿನ ಸೇನಾನಾಯಕ. ಭಾರತದ ಪೋರ್ಚುಗೀಸ್ ಪ್ರದೇಶಗಳ ಪ್ರಥಮ ವೈಸ್ರಾಯ್ (1505). ಶ್ರೀಮಂತ ಕುಟುಂಬಕ್ಕೆ ಸೇರಿದವ. ಮೊಂಬಾಸಾವನ್ನು ಗೆದ್ದು, ಕೊಚ್ಚಿನ್ನಿಗೆ ಬಂದು ತಲುಪಿದ. ಅಂಜದೀವ್ ಮತ್ತು ಈಜಿಪ್ಷಿಯನ್ ಹಡಗುಗಳ ಪಡೆಗಳನ್ನು ಡಿಯೋ ಎಂಬಲ್ಲಿ ಸಂಪುರ್ಣವಾಗಿ ನಾಶಗೊಳಿಸಿದ (1509). 1509ನೆಯ ಡಿಸೆಂಬರ್ ತಿಂಗಳಿನಲ್ಲಿ ಮೂರು ನೌಕೆಗಳೊಡನೆ ಯುರೋಪಿ ಗೆ ಹೊರಟು ನಡುವೆ ಸಾಲ್ದಾನಾ ಕೊಲ್ಲಿಯಲ್ಲಿ ತಂಗಿದ. ಇಲ್ಲಿ ಹಾಟೆಂಟಾಟರ ಸಂಗಡ ಯುದ್ಧಮಾಡಿ ಕೊಲೆಗೀಡಾದ. ಈತನ ಜೊತೆಯಲ್ಲಿ 65 ಜನ ಪೋರ್ಚುಗೀಸರೂ ಮಡಿದರು. ಮಾರನೆಯ ದಿನ ಈತನ ಶವ ಸಿಕ್ಕಿತು. ಕೊಲೆಯಾದ ಸ್ಥಳದಲ್ಲಿಯೇ ಈತನ ಸಮಾಧಿಯನ್ನೂ ಮಾಡಲಾಯಿತು.
Quick Facts ಫ್ರಾನ್ಸಿಸ್ಕೊ ಡ ಆಲ್ಮೇಡ, ಚಿತ್ರ ...
Close
Quick Facts ಫ್ರಾನ್ಸಿಸ್ಕೊ ಡ ಆಲ್ಮೇಡ, ಜನನ ...
ಫ್ರಾನ್ಸಿಸ್ಕೊ ಡ ಆಲ್ಮೇಡ | |
---|---|
ಜನನ | Francisco de Almeida ca. 1450 ಲಿಸ್ಬನ್, ಪೋರ್ಚುಗಲ್ ಸಾಮ್ರಾಜ್ಯ |
ಮರಣ | ಮಾರ್ಚ್ 01, 1510 (ವಯಸ್ಸು ೫೯–೬೦) Table Bay, Cape of Good Hope |
ರಾಷ್ಟ್ರೀಯತೆ | ಪೋರ್ಚುಗೀಸ್ |
ವೃತ್ತಿs | Soldier, explorer, viceroy of Portuguese India |
Known for | Establishment of Portuguese naval hegemony in the Indian Ocean. |
Close