ಪುನರ್ಜನ್ಮ
ಜೈವಿಕ ಸಾವಿನ ನಂತರ ಜೀವಿಯ ಭೌತಿಕವಲ್ಲದ ಸಾರವು ವಿಭಿನ್ನ ಜೀವನವನ್ನು ವಿಭಿನ್ನ ಭೌತಿಕ ರೂಪದಲ್ಲಿ ಅಥವಾ ದೇಹದಲ್ಲ / From Wikipedia, the free encyclopedia
ಪುನರ್ಜನ್ಮವು ಆತ್ಮವು ಭೌತಿಕ ನಿಧನದ ನಂತರ ಹೊಸ ದೇಹದಲ್ಲಿ ಹೊಸ ಜೀವನವನ್ನು ಕಂಡುಕೊಳ್ಳುವ ಧಾರ್ಮಿಕ ಅಥವಾ ತತ್ವಶಾಸ್ತ್ರೀಯ ಸಿದ್ಧಾಂತವಾಗಿದೆ. ಹಿಂದೂ ಧರ್ಮದ ಪ್ರಕಾರ, ಹುಟ್ಟು-ಸಾವುಗಳ ಚಕ್ರದ ನಡುವಿನ ಆತ್ಮದ ಪಯಣಕ್ಕೆ ಪುನರ್ಜನ್ಮವೆನ್ನಲಾಗುತ್ತದೆ.ಇದು ಹಿಂದೂ ಧರ್ಮದ ತಿರುಳು ಕೂಡಾ ಆಗಿದೆ.[1] ಇದು ಪ್ರಪಂಚದ ಅನೇಕ ಧಾರ್ಮಿಕ ಸಿದ್ದಾಂತಗಳಲ್ಲಿ ಹಾಗೆಯೇ ಸೈಬೀರಿಯಾ,ಪಶ್ಚಿಮ ಆಫ್ರಿಕಾ,ಉತ್ತರ ಅಮೇರಿಕ ಹಾಗೂ ಆಸ್ಟ್ರೇಲಿಯಗಳಲ್ಲಿರುವ ಹಲವಾರು ಬುಡಕಟ್ಟು ಜನರಲ್ಲಿ ಸಾಮಾನ್ಯ ನಂಬಿಕೆಯಾಗಿದೆ.[2]