ಪೀಡನ-ವಿಕೃತಿ ನಕ್ಷೆ
ಬಲವನ್ನು ಪ್ರಯೋಗಿಸಿದಾಗ ಆಗುವ ವಿರೂಪತೆಯನ್ನು ತೋರಿಸುವ ನಕ್ಷೆ / From Wikipedia, the free encyclopedia
ಇಂಜಿನಿಯರಿಂಗ್ ಮತ್ತು ಮೆಟೀರಿಯಲ್ ಸೈನ್ಸ್ನಲ್ಲಿ, ವಸ್ತುವಿನ ಪೀಡನ-ವಿಕೃತಿ ನಕ್ಷೆ ಪೀಡನ ಮತ್ತು ವಿಕೃತಿ ನಡುವಿನ ಸಂಬಂಧವನ್ನು ನೀಡುತ್ತದೆ. ಇವುಗಳ ನಡುವಿನ ಸಂಬಂಧವನ್ನು ಒಂದು ಪರೀಕ್ಷಾರ್ಥವಾಗಿರುವ ವಸ್ತುವಿಗೆ ಹೊರೆ(ಬಲ)ಯನ್ನು ಕ್ರಮೇಣ ಹೆಚ್ಚಿಸುತ್ತಾ ಮತ್ತು ವಿರೂಪವನ್ನು ಅಳೆಯುವ ಮೂಲಕ ಇದನ್ನು ಪ್ರಯೋಗಾಲಯದಲ್ಲಿ ಕಂಡುಹಿಡಿಯಬಹುದು. ಇದರಿಂದ ಪೀಡನ ಮತ್ತು ವಿಕೃತಿಯನ್ನು ನಿರ್ಧರಿಸಬಹುದು.ಈ ನಕ್ಷೆಯು ಯಂಗ್ ಮಾಪಾಂಕ(ಯಂಗ್ಸ್ ಮಾಡ್ಯುಲಸ್), ಮಣಿಯುವ ಸಾಮರ್ಥ್ಯ(ಯೀಲ್ಡ್ ಪಾಯಿಂಟ್) ಮತ್ತು ಅಂತಿಮ ಕರ್ಷಕ ಸಾಮರ್ಥ್ಯ(ಅಲ್ಟಿಮೇಟ್ ಟೆನ್ಸೈಲ್ ಸ್ಟ್ರೆಂತ್) ಮುಂತಾದ ವಸ್ತುವಿನ ಅನೇಕ ಗುಣಲಕ್ಷಣಗಳನ್ನು ಬಹಿರಂಗಪಡಿಸುತ್ತವೆ.