ಪೀಜೊ ವಿದ್ಯುತ್ತು
From Wikipedia, the free encyclopedia
ಪೀಜೊ ವಿದ್ಯುತ್ತು ಎಂದರೆ ಕೆಲವು ವಿದ್ಯುದ್ವಾಹಕ ಅಸಮವರ್ತಿ ಸ್ಫಟಿಕ ಹಲ್ಲೆಗಳ (ವೇಫರ್ಸ್) ಮೇಲೆ (ಉದಾ: ಕ್ವಾರ್ಟ್ಸ್, ರೋಚೆಲ್ ಲವಣ, ಬೇರಿಯಮ್ ಟೈಟನೇಟ್) ಯಾಂತ್ರಿಕವಾಗಿ ಪೀಡನವನ್ನು (ಸ್ಟ್ರೆಸ್) ಹೇರಿದಾಗ ವಿದ್ಯುದ್ಧ್ರುವೀಕರಣ ಉಂಟಾಗಿ ವಿದೃಶ ವಿದ್ಯುದಾವೇಶಗಳು ಹಲ್ಲೆಯ ವಿರುದ್ಧ ಮೇಲ್ಮೈಗಳಲ್ಲಿ ಮೂಡುವ ವಿದ್ಯಮಾನ.[1] ಅಂತೆಯೇ, ಇಂಥ ಹಲ್ಲೆಗಳ ವಿರುದ್ಧ ಮೇಲ್ಮೈಗಳ ನಡುವೆ ವಿದ್ಯುದ್ವಿಭವಾಂತರ ಪ್ರಯೋಗಿಸಿದಾಗ ವಿಲೋಮ ಪರಿಣಾಮ ಉಂಟಾಗುತ್ತದೆ. ಅರ್ಥಾತ್, ಅವುಗಳ ಆಕಾರ ಮತ್ತು ಗಾತ್ರಗಳಲ್ಲಿ ವಿರೂಪಣೆ ಕಂಡುಬರುತ್ತದೆ.
ಪೀಡನೆಗೆ ಅನುಲೋಮಾನುಪಾತದಲ್ಲಿ ವಿದ್ಯುದ್ಧ್ರುವೀಕರಣವಿರುತ್ತದೆ. ವಿದ್ಯುದ್ಧ್ರುವೀಕರಣ =K x ಪೀಡನ. ಇಲ್ಲಿ, K ಎಂಬುದು ಪದಾರ್ಥದಿಂದ ಪದಾರ್ಥಕ್ಕೆ ಬದಲಾಗುವ ಪೀಜೊ ವಿದ್ಯುತ್ ಸಹಾಂಕ. ವಿಲೋಮ ಪೀಜೊ ವಿದ್ಯುತ್ಪರಿಣಾಮ ಬಲು ಅಲ್ಪ ಪ್ರಮಾಣದಲ್ಲಿರುತ್ತದೆ. ಉದಾ: 106 ವೋಲ್ಟ್/ಮೀಟರ್ ವಿದ್ಯುತ್ಕ್ಷೇತ್ರವನ್ನು ಪ್ರಯೋಗಿಸಿದಾಗ ಕ್ವಾರ್ಟ್ಸ್ ಸ್ಫಟಿಕದ 1 ಸೆಂಮೀ ಉದ್ದದಲ್ಲಾಗುವ ಬದಲಾವಣೆ ಕೇವಲ 0.001 ಮಿಮೀ.
ಇಂಥ ಸ್ಫಟಿಕವನ್ನೊಳಗೊಂಡ ವಿದ್ಯನ್ಮಂಡಲದಲ್ಲಿ ವಿದ್ಯುತ್ತಿನ ಆಂದೋಲನಗಳೊಂದಿಗೆ ಸ್ಫಟಿಕದಲ್ಲಾಗುವ ಕ್ಲುಪ್ತ ಆವೃತ್ತಿಯ ಯಾಂತ್ರಿಕ ಆಂದೋಲನಗಳನ್ನು ಮೇಳೈಸಬಹುದು.