ಪೀಕೂ (ಚಲನಚಿತ್ರ)
From Wikipedia, the free encyclopedia
ಪೀಕೂ 2015ರ ಒಂದು ಹಿಂದಿ ಹಾಸ್ಯಪ್ರಧಾನ ನಾಟಕೀಯ ಚಲನಚಿತ್ರ. ಇದನ್ನು ಶೂಜಿತ್ ಸಿರ್ಕಾರ್ ನಿರ್ದೇಶಿಸಿದ್ದಾರೆ ಮತ್ತು ಎನ್.ಪಿ.ಸಿಂಗ್, ರೋನಿ ಲಹಿರಿ ಹಾಗೂ ಸ್ನೇಹಾ ರಜನಿ ನಿರ್ಮಿಸಿದ್ದಾರೆ. ಇದರಲ್ಲಿ ನಾಮಮಾತ್ರದ ನಾಯಕಿಯಾಗಿ ದೀಪಿಕಾ ಪಡುಕೋಣೆ , ಅಮಿತಾಭ್ ಬಚ್ಚನ್ ಮತ್ತು ಇರ್ಫಾನ್ ಖಾನ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಮೌಶುಮಿ ಚ್ಯಾಟರ್ಜಿ ಮತ್ತು ಜೀಶು ಸೇನ್ಗುಪ್ತಾ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಪೀಕೂ | |
---|---|
ನಿರ್ದೇಶನ | ಶೂಜಿತ್ ಸರ್ಕಾರ್ |
ನಿರ್ಮಾಪಕ |
|
ಲೇಖಕ | ಜೂಹಿ ಚತುರ್ವೇದಿ |
ಪಾತ್ರವರ್ಗ |
|
ಸಂಗೀತ | ಅನುಪಮ್ ರಾಯ್ |
ಛಾಯಾಗ್ರಹಣ | ಕಮಲ್ಜೀತ್ ನೇಗಿ |
ಸಂಕಲನ | ಚಂದ್ರಶೇಖರ್ ಪ್ರಜಾಪತಿ |
ಸ್ಟುಡಿಯೋ |
|
ವಿತರಕರು | ಯಶ್ ರಾಜ್ ಫ಼ಿಲ್ಮ್ಸ್ |
ಬಿಡುಗಡೆಯಾಗಿದ್ದು |
|
ಅವಧಿ | 122 ನಿಮಿಷಗಳು[1] |
ದೇಶ | ಭಾರತ |
ಭಾಷೆ | ಹಿಂದಿ |
ಬಂಡವಾಳ | ₹25 ಕೋಟಿ[2] |
ಬಾಕ್ಸ್ ಆಫೀಸ್ | ₹141 ಕೋಟಿ[2] |
ಈ ಚಿತ್ರವು ಸತ್ಯಜಿತ್ ರೇ ಅವರ 1980 ರ ಬಂಗಾಳಿ ಭಾಷೆಯ ಕಿರುಚಿತ್ರ ಪೀಕೂವನ್ನು ಸಡಿಲವಾಗಿ ಆಧರಿಸಿದೆ.[3] ಇದರ ಚಿತ್ರಕಥೆಯನ್ನು ಜೂಹಿ ಚತುರ್ವೇದಿ ಬರೆದಿದ್ದಾರೆ. ಪ್ರಧಾನ ಛಾಯಾಗ್ರಹಣವು ಆಗಸ್ಟ್ 2014 ರಲ್ಲಿ ಪ್ರಾರಂಭವಾಯಿತು ಮತ್ತು ಡಿಸೆಂಬರ್ನಲ್ಲಿ ಮುಗಿಯಿತು. ಅನುಪಮ್ ರಾಯ್ ಧ್ವನಿವಾಹಿನಿ ಮತ್ತು ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದರು ಮತ್ತು ಹಾಡುಗಳಿಗೆ ಸಾಹಿತ್ಯವನ್ನು ಬರೆದರು.
ಪೀಕೂ 8 ಮೇ 2015 ರಂದು ಬಿಡುಗಡೆಯಾಯಿತು.[4] ಇದು ಬಿಡುಗಡೆಯಾದ ನಂತರ ವ್ಯಾಪಕ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿತು. ಇದರ ಚಿತ್ರಕಥೆ, ಅಭಿನಯಗಳು, ಹಾಸ್ಯ ಮತ್ತು ಒಟ್ಟಾರೆ ಸರಳತೆಯನ್ನು ವಿಮರ್ಶಕರು ಶ್ಲಾಘಿಸಿದರು.[5] ಇದು ವಿಶ್ವದಾದ್ಯಂತ ವಾಣಿಜ್ಯಿಕ ಯಶಸ್ಸಾಗಿ ಹೊರಹೊಮ್ಮಿತು. ₹ 25 ಕೋಟಿಯಷ್ಟು ಬಂಡವಾಳದಲ್ಲಿ ತಯಾರಾದ ಪೀಕೂ ವಿಶ್ವಾದ್ಯಂತ ₹141 ಕೋಟಿಯಷ್ಟು ಗಳಿಸಿತು.
ಜನವರಿ 11, 2016 ರಂದು, ಈ ಚಿತ್ರವು 61 ನೇ ಫಿಲ್ಮ್ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಚಲನಚಿತ್ರಕ್ಕೆ ಜೊತೆಗೆ ಇತರ ವಿಭಾಗಗಳಲ್ಲಿಯೂ ನಾಮನಿರ್ದೇಶನಗೊಂಡಿತು. ದೀಪಿಕಾ ಪಡುಕೋಣೆ ತಮ್ಮ ಎರಡನೇ ಫಿಲ್ಮ್ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದರು, ಮತ್ತು ಬಚ್ಚನ್ 63 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ನಾಲ್ಕನೇ ಬಾರಿಗೆ ಪಡೆದು ದಾಖಲೆ ಸ್ಥಾಪಿಸಿದರು ಮತ್ತು ತಮ್ಮ ಅಭಿನಯಕ್ಕಾಗಿ ಮೂರನೇ ಫಿಲ್ಮ್ಫೇರ್ ವಿಮರ್ಶಕರ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದು ದಾಖಲೆ ಸ್ಥಾಪಿಸಿದರು.